ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ಉಸ್ತುವಾರಿ, ಶಾಸಕ ಬೆಲ್ಲದ ಶಕ್ತಿ ಪ್ರದರ್ಶನ

By Suvarna NewsFirst Published Apr 15, 2022, 10:37 PM IST
Highlights

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹುಬ್ಬಳ್ಳಿಗೆ ಆಗಮಿಸಿದ ಬೆನ್ನಲ್ಲಿಯೇ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ ಅವರ ಉತ್ಸಾಹ ಇಮ್ಮಡಿಯಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬೆಲ್ಲದ್, ಅರುಣ್ ಸಿಂಗ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
 

ವರದಿ: ಗುರುರಾಜ ಹೂಗಾರ 

ಹುಬ್ಬಳ್ಳಿ (ಏ.15): ರಾಜ್ಯ ರಾಜಕಾರಣದಲ್ಲಿ  (Karnataka Politics) ಈಗ ಸಂಪುಟ ವಿಸ್ತರಣೆ ಕುರಿತು ಬಿಸಿಬಿಸಿ ಚರ್ಚೆ ಆರಂಭಗೊಂಡಿವೆ.   ಸಂಪುಟ ವಿಸ್ತರಣೆ ಆದ್ರೆ ಹೊಸದಾಗಿ ಯಾರೆಲ್ಲ ಮಂತ್ರಿಯಾಗ್ತಾರೆ..? ಯಾರು ಸಂಪುಟದಿಂದ ಹೊರಗುಳಿತಾರೆ‌ ಎಂಬ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ.  ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ (MLA Arvind Bellad) ಈಗ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಹೌದು.. ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಣಿ ಸಭೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಶಾಸಕ ಅರವಿಂದ ಬೆಲ್ಲದ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಇನ್ನೂ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP National President JP Nadda) ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕಾರಣಿ ಸಭೆಯಲ್ಲಿ ಬಹುತೇಕ ಮಹತ್ವದ ನಿರ್ಧಾರಗಳನ್ನು ಕೈಗೆತ್ತಿಕೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಬೆಲ್ಲದ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ರು., ಅರುಣ್ ಸಿಂಗ್ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಬೆಲ್ಲದ ಪರ ಘೋಷಣೆಗಳು ಮೊಳಗಿದವು. ಅರುಣ್ ಸಿಂಗ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗಲೂ ಶಾಸಕ ಅರವಿಂದ್ ಬೆಲ್ಲದ ಪರವಾದ ಘೋಷಣೆಗಳು ನಿಲ್ಲಲಿಲ್ಲ. ಅರುಣ್ ಸಿಂಗ್ ಗಮನ ಸೆಳೆಯಲು ಬಿಜೆಪಿ ಕಾರ್ಯಕರ್ತ ದೊಡ್ಡ ಪಡೆ ಬೆಲ್ಲದ ಪರ ಘೋಷಣೆ ಮೊಳಗಿಸುವ ಮೂಲಕ, ಶಕ್ತಿ ಪ್ರದರ್ಶನ ನಡೆಸಿದಂತೆ ಕಂಡುಬಂತು. ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್- ಪ್ರಹ್ಲಾದ್ ಜೋಶಿ‌ ಪರ‌ ಮಾತ್ರ ಮೊಳಗುತ್ತಿದ್ದ ಘೋಷಣೆ, ಇಂದು ಅರವಿಂದ್ ಬೆಲ್ಲದ ಪರ‌ ಮೊಳಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.

ಸಂತೋಷ್ ಆತ್ಮಹತ್ಯೆ: ಕ್ಷೇತ್ರದಲ್ಲಿ ನಡೆಸಿದ ಕಾಮಗಾರಿ ಗೊತ್ತಿರಲಿಲ್ಲವೇ? ಹೆಬ್ಬಾಳ್ಕರ್‌ಗೆ ನಿರಾಣಿ ಪ್ರಶ್ನೆ

ಈಗಾಗಲೇ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಅರವಿಂದ ಬೆಲ್ಲದ, ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಹಿದ್ದರು. ಆದ್ರೇ ಈ ಬಾರೀ ಸಂಪುಟ ವಿಸ್ತರಣೆ ಆದ್ರೆ ಬೆಲ್ಲದ ಸಂಪುಟ ಸೇರೋದು ಪಕ್ಕಾ ಎನ್ನಲಾಗುತ್ತಿದೆ.  ಆದ್ರೆ ಧಾರವಾಡ ಜಿಲ್ಲೆಯಲ್ಲಿ ಸಚಿವರಾಗಬೇಕು ಅಂದ್ರೆ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ ಬೆಂಬಲ ಅತ್ಯಗತ್ಯ.. ಆದ್ರೆ ಬೆಲ್ಲದ ಮಾತ್ರ ತಮ್ಮ ವೈಯಕ್ತಿಕ ವರ್ಚಸ್ಸು ಮೂಲಕ ಸಂಪುಟದಲ್ಲಿ ಸ್ಥಾ‌ನ ಪಡೆಯಲು ಪ್ಲಾನ್ ರೂಪಿಸಿದ್ದು, ಈ ಬಾರಿ ಆದರೂ ಸಚಿವ ಸ್ಥಾನ ಲಭಿಸಲಿದೆಯಾ ಎಂಬ ಕುತೂಹಲ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನರಲ್ಲಿ ಮೂಡಿದೆ. 

ಜಗ್ಗಲ್ಲ-ಬಗ್ಗಲ್ಲ ಎಂದಿದ್ದ ಈಶ್ವರಪ್ಪ ದಿಢೀರ್ ರಾಜೀನಾಮೆ ಘೋಷಿಸಿದ್ಯಾಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ

ಇನ್ನೂ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕಾರಣಿ ಸಭೆಯಲ್ಲಿ ಸಚಿವ ಸಂಪುಟದ ವಿಸ್ತರಣೆ ಚರ್ಚೆ ನಡೆದರೇ. ಸಭೆ ಬೆಲ್ಲದ ಅವರಿಗೆ ಬೆಲ್ಲವಾಗಿ ಪರಿಣಮಿಸಲಿದೆ ಎಂಬುವಂತ ಮಾತುಗಳು ಬಿಜೆಪಿ ಆಪ್ತವಲಯದಲ್ಲಿ ಕೇಳಿ ಬರುತ್ತಿವೆ.

click me!