ಸಂತೋಷ್‌ ಆತ್ಮಹತ್ಯೆ ಪ್ರಕರಣ ಹೆಬ್ಬಾಳ್ಕರ್‌ ತಲೆಗೆ ಸುತ್ತಿಕೊಳ್ಳಬಹುದು: ಹೊಸ ಬಾಂಬ್‌ ಸಿಡಿಸಿದ ಅಶ್ವತ್ಥ್‌

By Girish Goudar  |  First Published Apr 15, 2022, 2:48 PM IST

*  ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ
*  ಇನ್ನೂ ಕೆಲ ದಿನಗಳಲ್ಲೇ ಸತ್ಯಾಂಶ ಹೊರ ಬೀಳಲಿದೆ
*  ಬಿಜೆಪಿಗೆ ಡ್ಯಾಮೇಜ್‌ ಮಾಡಲು ಈ ಪ್ರಕರಣ ಸೃಷ್ಟಿ 
 


ಹೊಸಪೇಟೆ(ಏ.15):  ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil) ಆತ್ಮಹತ್ಯೆ(Suicide) ಪ್ರಕರಣದ ತನಿಖೆಯಾದರೆ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ತಲೆಗೆ ಸುತ್ತಿಕೊಳ್ಳುತ್ತದೆ ಎಂದು ಬಿಜೆಪಿ ಪ್ರ.ಕಾರ್ಯದರ್ಶಿ ಅಶ್ವತ್ಥ ನಾರಾಯಣ್‌(CN Ashwath Narayan) ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ಅವರಿಗೆ ಸುತ್ತಿಕೊಳ್ಳುತ್ತದೆ. ಇಂತಹ ಪ್ರಕರಣಗಳು ಸಾಕಷ್ಟು ನಡೆದಿವೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನೂ ಕೆಲ ದಿನಗಳಲ್ಲೇ ಸತ್ಯಾಂಶ ಹೊರ ಬೀಳಲಿದೆ ಎಂದರು.

Tap to resize

Latest Videos

undefined

ಈಶ್ವರಪ್ಪ ರಾಜೀನಾಮೆಗೂ ಮುನ್ನ PDOಗಳ ಟ್ರಾನ್ಸ್‌ಫರ್, ಚರ್ಚೆಗೆ ಗ್ರಾಸ..!

ಯಾವುದೇ ತರಹದ ತನಿಖೆ ನಡೆಸಲಿ, ತ್ವರಿತಗತಿಯಲ್ಲಿ ತನಿಖೆಯಾಗಲಿ. ನಾನು ಸಹಕಾರ ಕೊಡುವೆ ಎಂದು ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪನವರೇ(KS Eshwarappa) ಹೇಳಿದ್ದಾರೆ. ಪೂರ್ಣ ಪ್ರಮಾಣದ ತನಿಖೆಯಾಗಲಿ, ಮುಂದೆ ತಿಳಿಯಲಿದೆ ಎಂದರು.

ಕಾಂಗ್ರೆಸ್‌(Congress) ನಾಯಕರು ರಾಜೀನಾಮೆ ಕೇಳುತ್ತಿದ್ದಾರೆ. ಯಾವ ನೈತಿಕತೆಯಿಂದ ಕೇಳ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿದರೆ, ಈ ಪ್ರಕಣರ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸುತ್ತಿಕೊಳ್ಳುತ್ತದೆ ಎಂದರು.

ಬಿಜೆಪಿಗೆ(BJP) ಡ್ಯಾಮೇಜ್‌ ಮಾಡಲು ಈ ಪ್ರಕರಣ ಸೃಷ್ಟಿಸಲಾಗಿದೆ ಎನ್ನುವ ಅನುಮಾನವೂ ಇದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ(Government of Karnataka) ಗಂಭೀರವಾಗಿ ಪರಿಗಣಿಸಲಿದೆ. ಸರ್ಕಾರ ಈ ಬಗ್ಗೆ ಕೂಲಂಕಶ ತನಿಖೆ ನಡೆಸಲಿದೆ ಎಂದರು.

ಸಚಿವ ಈಶ್ವರಪ್ಪ ರಾಜಿನಾಮೆ ವಿಚಾರ ಸಿಎಂ ನೋಡಿಕೊಳ್ಳುತ್ತಾರೆ: ರಾಮುಲು 

ಬಳ್ಳಾರಿ: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ರಾಜಿನಾಮೆಗೆ ಪ್ರತಿಪಕ್ಷಗಳ ಒತ್ತಾಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಜಿಲ್ಲಾ ಸಚಿವ ಶ್ರೀರಾಮುಲು(B Sriramulu), ಮುಖ್ಯಮಂತ್ರಿಗಳು ಪ್ರಕರಣ ತನಿಖೆ ಮಾಡುವಂತೆ ಸೂಚಿಸಿದ್ದಾರೆ ಎಂದಷ್ಟೇ ಹೇಳಿ ಜಾರಿಕೊಂಡರು.

Gadag: ಸಂತೋಷ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸುತ್ತೇವೆ: ಸಿಎಂ ಬೊಮ್ಮಾಯಿ

ಪ್ರಕರಣದ ಪ್ರಾಥಮಿಕ ವರದಿಯನ್ನು ಕಲೆ ಹಾಕಲಾಗುತ್ತಿದೆ. ಅದಾದ ಬಳಿಕವಷ್ಟೇ ಮುಂದಿನ ಹಂತದ ತೀರ್ಮಾನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ನನಗಿದೆ. ಕಾಂಗ್ರೆಸ್‌ನವರು ದೂರುತ್ತಿರುವಂತೆ ನಮ್ಮದು ಶೇ. 40 ಪರ್ಸೆಂಟ್‌ ಸರ್ಕಾರ ಅಲ್ಲ; ಪಾರದರ್ಶಕ ಸರ್ಕಾರ. ಮೃತ ಗುತ್ತಿಗೆದಾರ ಮಾಡಿರುವ ಆರೋಪ ನಿರಾಧಾರವಾಗಿದ್ದು ಈ ವಿಚಾರವನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದರು.

ಸಚಿವ ಈಶ್ವರಪ್ಪ ರಾಜೀನಾಮೆ ಕುರಿತು ಪತ್ರಕರ್ತರು ಕೇಳುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ತಟಸ್ಥ ನಿಲುವು ಅನುಸರಿಸಿದರು. ಬರುವ ವಿಧಾನಸಭಾ ಚುನಾವಣೆಗೆ ನಮ್ಮ ಪಕ್ಷ ಅಣಿಯಾಗುತ್ತಿದೆ. ಏ.16 ಮತ್ತು 17 ರಂದು ಜರುಗುವ ಕಾರ್ಯಕಾರಿಣಿ ಸಭೆಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕಾರಿಣಿಯಲ್ಲಿ ಚುನಾವಣೆ ಕುರಿತು ಚರ್ಚೆಯಾಗಲಿದೆ. ಮುಖ್ಯಮಂತ್ರಿಗಳು ಎರಡು ದಿನ ಹೊಸಪೇಟೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಹಂಪಿ ವಿಶ್ವವಿದ್ಯಾಲಯ ಹಾಗೂ ಕಂಪ್ಲಿ ಸೋಮಪ್ಪ ಕೆರೆಗೆ ಸಿಎಂ ಭೇಟಿ ನೀಡುವರು ಎಂದು ಹೇಳಿದರು.
 

click me!