ಪೋಪ್ ಪ್ರಾನ್ಸಿನ್ ನಿಧನ; ರಾಜ್ಯ ಸರ್ಕಾರದಿಂದಲೂ 2 ದಿನ ಶೋಕಾಚರಣೆ!

Published : Apr 22, 2025, 06:06 PM ISTUpdated : Apr 22, 2025, 06:08 PM IST
ಪೋಪ್ ಪ್ರಾನ್ಸಿನ್ ನಿಧನ; ರಾಜ್ಯ ಸರ್ಕಾರದಿಂದಲೂ 2 ದಿನ ಶೋಕಾಚರಣೆ!

ಸಾರಾಂಶ

ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21 ರಂದು ನಿಧನರಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಾಡಲಿದ್ದು, ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

'His Holiness Pope Francis, Supreme Pontiff of the Holy See' ಇವರು ಏ.21ರಂದು ನಿಧನ ಹೊಂದಿರುತ್ತಾರೆ. ಅಗಲಿದ ಗಣ್ಯರ ಗೌರವಾರ್ಥವಾಗಿ ಏ.22 ಮತ್ತು ಏ.23ರ ಎರಡು ದಿನಗಳು ದೇಶದಾದ್ಯಂತ ಶೋಕಾಚರಣೆ ಮಾಡಲು ಘನ ಭಾರತ ಸರ್ಕಾರವು ನಿರ್ಧರಿಸಿರುತ್ತದೆ.

ಇದರ ಪ್ರಯುಕ್ತ ದಿವಂಗತರ ಗೌರವಾರ್ಥವಾಗಿ ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುವುದು. ಸದರಿ ಅವಧಿಯಲ್ಲಿ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಮತ್ತು ನಿಯತವಾಗಿ ಹಾರಿಸಲ್ಪಡುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.

ಈಸ್ಟರ್‌ ದರ್ಶನದ ಮರುದಿನ ನಿಧನ 12 ವರ್ಷದಿಂದ ಕ್ರೈಸ್ತರ ಪರಮೋಚ್ಚ ಗುರುವಾಗಿದ್ದ ಪೋಪ್‌ ಫ್ರಾನ್ಸಿಸ್‌ (88), ಸುದೀರ್ಘ ಅನಾರೋಗ್ಯಪೀಡಿತರಾಗಿದ್ದರು. ಈಸ್ಟರ್‌ ಸಂಡೇ ನಿಮಿತ್ತ ಸಾರ್ವಜನಿಕ ದರ್ಶನ ನೀಡಿ, ಸಂದೇಶ ಕೊಟ್ಟಿದ್ದರು. ಮರುದಿನವಾದ ಸೋಮವಾರ ಬೆಳಗ್ಗೆ 7.35ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಇನ್ನು ಮರಣವಾರ್ತೆ ಪ್ರಕಟ ಬಳಿಕ ಆಡಳಿತಾಧಿಕಾರಿ ಪೋಪ್‌ ವಾಸ್ತವ್ಯ ಸ್ಥಳಕ್ಕೆ ಬೀಗ ಹಾಕುತ್ತಾರೆ. ಅವರ ಉಂಗುರ ಹಾಗೂ ಸೀಲ್‌ ನಾಶಪಡಿಸುವ ಮೂಲಕ ಪೋಪ್‌ ಆಳ್ವಿಕೆ ಮುಗಿದಿದೆ ಎಂದು ಸೂಚಿಸುತ್ತಾರೆ. ಪೋಪ್‌ ನಿಧನದ 4-6 ದಿನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಕ್ರೈಸ್ತ ಧರ್ಮದ ಪರಮೋಚ್ಛ ನಾಯಕ ಪೋಪ್ ಫ್ರಾನ್ಸಿಸ್‌ ನಿಧನ

ವ್ಯಾಟಿಕನ್‌ ಹೊರಗೆ ಪೋಪ್‌ ಅಂತ್ಯಕ್ರಿಯೆ: ಒಂದು ಸಣ್ಣ ನಗರವನ್ನೇ ಒಂದು ದೇಶವಾಗಿ ಮಾಡಿಕೊಂಡಿರುವ ವ್ಯಾಟಿಕನ್ ಸಿಟಿ ದೇಶದಲ್ಲಿ ಸಾಮಾನ್ಯವಾಗಿ ಪೋಪ್‌ಗಳ ಅಂತ್ಯಕ್ರಿಯೆ ನೆರವೇರುತ್ತದೆ. ಆದರೆ ಫ್ರಾನ್ಸಿಸ್‌ ಅವರು ಬೇರೆ ಕಡೆ (ರೋಮ್‌ನಲ್ಲಿ) ಅಂತ್ಯಕ್ರಿಯೆ ನಡೆಸುವಂತೆ ಕೋರಿದ್ದಾರೆ. ಕಳೆದ 100 ವರ್ಷಗಳಲ್ಲಿ ಇದೇ ಮೊದಲ ಬಾರಿ ಪೋಪ್‌ ಒಬ್ಬರ ಅಂತ್ಯಕ್ರಿಯೆ ವ್ಯಾಟಿಕನ್‌ನಲ್ಲಿ ನಡೆಯುತ್ತಿಲ್ಲ. ಇನ್ನು ವ್ಯಾಟಿಕನ್ ಸಿಟಿ ದೇಶವು ಇಟಲಿ ದೇಶದಿಂದ ಸುತ್ತುವರಿಯಲ್ಪಟ್ಟಿದೆ.

ಹೊಸ ಪೋಪ್‌ ಆಯ್ಕೆ ಹೇಗಿರುತ್ತದೆ?
ಪೋಪ್‌ ನಿಧನದ 15-20 ದಿನ ಬಳಿಕ ನೂತನ ಪೋಪ್‌ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವ್ಯಾಟಿಕನ್‌ಗೆ ಆಗಮಿಸುತ್ತಾರೆ. ರಹಸ್ಯ ಮತದಾನ ಉದ್ದೇಶ ಸಲುವಾಗಿ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದಿಂದ ಅವರು ಸಂಪರ್ಕ ಕಳೆದುಕೊಳ್ಳುತ್ತಾರೆ. ದೂರವಾಣಿ ಕರೆ ಸೌಲಭ್ಯೂ ಇರುವುದಿಲ್ಲ. ಹಲವು ಸುತ್ತಿನ ಮತದಾನ ಪ್ರಕ್ರಿಯೆ ನಡೆಯುತ್ತದೆ.

ಇದನ್ನೂ ಓದಿ: Pope Francis: ಕೋಣೆಗೆ ಬೀಗ, 6 ದಿನದಲ್ಲಿ ಅಂತ್ಯಕ್ರಿಯೆ, ಹೊಸ ಪೋಪ್‌ ಆಯ್ಕೆ ಹೇಗೆ? ಏನಿದು ಕಪ್ಪು-ಬಿಳುಪು ಹೊಗೆ?

ಮತದಾನ ಮಾಡುವುದಕ್ಕೆ ಒಂದೆಡೆ ಸೇರಿದ ಕಾರ್ಡಿನಲ್‌ಗಳು ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುತ್ತಾರೆ. 3ನೇ 2ರಷ್ಟು ಬಹುಮತ ಪಡೆದವರು ಪೋಪ್‌ ಆಗುತ್ತಾರೆ. ಬಹುಮತ ಬಾರದಿದ್ದರೆ ಚಲಾವಣೆ ಮಾಡಿದ ಮತಗಳನ್ನು ಸುಡಲಾಗುತ್ತದೆ. ಆಗ ವ್ಯಾಟಿಕನ್‌ನಲ್ಲಿ ಕಪ್ಪು ಹೊಗೆ ಕಾಣಿಸುತ್ತದೆ. ಅದರರ್ಥ ಆಯ್ಕೆ ಪೂರ್ಣವಾಗಿಲ್ಲ ಎಂದು ಸೂಚಿಸಲಾಗುತ್ತದೆ. ನಂತರ ಹಲವು ಸುತ್ತಿನ ಮತದಾನ ಬಳಿಕ 3ನೇ 2ರಷ್ಟು ಬಹುಮತದೊಂದಿಗೆ ಒಬ್ಬರು ಆಯ್ಕೆಯಾದ ಬಳಿಕ ವ್ಯಾಟಿಕನ್‌ನಲ್ಲಿ ಬಿಳಿ ಹೊಗೆ ಕಾಣಿಸಿಕೊಳ್ಳುತ್ತದೆ. ಅದರರ್ಥ- ಹೊಸ ಪೋಪ್‌ ಆಯ್ಕೆಯಾಗಿದ್ದಾರೆ. ಹೀಗೆ, ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!