ಸಾಂಬಾರು ಹಾಕುವಾಗ ವಿದ್ಯಾರ್ಥಿಯ ಅನ್ನದ ತಟ್ಟೆಗೆ ಬಿತ್ತು ಸತ್ತ ಜಿರಳೆ!

By Ravi JanekalFirst Published Jan 27, 2024, 5:29 PM IST
Highlights

ವಿದ್ಯಾರ್ಥಿಗೆ ಬಡಿಸಿದ ಆಹಾರದಲ್ಲಿ ಜಿರಳೆ ಪತ್ತೆಯಾದ ಘಟನೆ ಬೆಂಗಳೂರಿನ ಬನಶಂಕರಿ ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ. ಪದವಿ ವಿದ್ಯಾರ್ಥಿಗಳಿಗಾಗಿ ಇರುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌. ಸುಮಾರು 450 ಜ‌ನ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‌. ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು.

ಬೆಂಗಳೂರು (ಜ.27): ವಿದ್ಯಾರ್ಥಿಗೆ ಬಡಿಸಿದ ಆಹಾರದಲ್ಲಿ ಜಿರಳೆ ಪತ್ತೆಯಾದ ಘಟನೆ ಬೆಂಗಳೂರಿನ ಬನಶಂಕರಿ ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ.

ಪದವಿ ವಿದ್ಯಾರ್ಥಿಗಳಿಗಾಗಿ ಇರುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌. ಸುಮಾರು 450 ಜ‌ನ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‌ನಲ್ಲಿದ್ದಾರೆ. ಮಧ್ಯಾಹ್ನ ಎಂದಿನಂತೆ ಊಟಕ್ಕೆ ಕುಳಿತ ವಿದ್ಯಾರ್ಥಿಗಳು. ಅನ್ನದ ಜೊತೆ ಸಾಂಬಾರು ಬಡಿಸುವಾಗ ವಿದ್ಯಾರ್ಥಿಗಳ ಅನ್ನದ ತಟ್ಟೆಗೆ ಬಿದ್ದ ಸತ್ತ ಜಿರಳೆ. ಜಿರಳೆ ಕಂಡು ಬೆಚ್ಚಿಬಿದ್ದ ವಿದ್ಯಾರ್ಥಿಗಳು. ಅದಾಗಲೇ ಬಹಳಷ್ಟು ವಿದ್ಯಾರ್ಥಿಗಳು ಸಾಂಬಾರು ಸೇವಿಸಿದ್ದಾರೆ. 

ಬೆಂಗಳೂರು: ಸ್ಟಾರ್ ಹೋಟೆಲ್‌ ಊಟದಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದ ಹೈಕೋರ್ಟ್ ವಕೀಲೆ!

ರೊಚ್ಚಿಗೆದ್ದ ವಿದ್ಯಾರ್ಥಿಗಳು:

ಕಳಪೆ ಆಹಾರ, ನಿರ್ಲಕ್ಷ್ಯದಿಂದ ಆಹಾರ ತಯಾರಿಸಲಾಗುತ್ತಿದೆ. ವಾರ್ಡನ್ ನಿರ್ಲಕ್ಷದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 450 ಜ‌ನ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‌ ಸಮಸ್ಯೆಗಳ ಆಗರವಾಗಿದೆ. ವಾರ್ಡನ್ ಗೆ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬಂತಾಗಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ಆಗಿದ್ದರೂ ನಿರ್ಲಕ್ಷ್ಯ ಮುಂದುವರಿಸಿರುವ ಹಾಸ್ಟೆಲ್ ಸಿಬ್ಬಂದಿ. ಹೀಗಾಗಿ ವಿದ್ಯಾರ್ಥಿಗಳು ಈ ಬಾರಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜಿರಳೆ ಕೊಲ್ಲಲು ಹೋಗಿ ತನ್ನ ಮನೆಯನ್ನೇ ಸ್ಫೋಟಿಸಿಕೊಂಡ ಜಪಾನಿನ ವ್ಯಕ್ತಿ

ಕಮಿಷನರ್ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯನ್ನ ಸಸ್ಪೆಂಡ್ ಮಾಡುವವರೆಗೆ ನಾವು ಹೋರಾಟ ಕೈ ಬಿಡೋಲ್ಲ ಎನ್ನುತ್ತಿರುವ ವಿದ್ಯಾರ್ಥಿಗಳು. ಕಮಿಷನರ್ ಬರೋವರೆಗೆ ಉಪವಾಸ ಸತ್ಯಾಗ್ರಹ ಮಾಡ್ತೀವಿ ಅಂತ ಪಟ್ಟು ಹಿಡಿದು ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು. 

click me!