ರಾಜ್ಯದ ಉತ್ತರ ಒಳನಾಡಿನಲ್ಲಿ ದಾಖಲಾಗುತ್ತಿದ್ದ ಕನಿಷ್ಠ ಉಷ್ಣಾಂಶವು ಈಗ ದಕ್ಷಣ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾಗಿದೆ.
ಬೆಂಗಳೂರು (ಜ.27): ರಾಜ್ಯದಲ್ಲಿ ಕಳೆದೊಂದು ವಾರದ ಹಿಂದೆ ಉತ್ತರ ಒಳನಾಡಿನ ಬಯಲು ಪ್ರದೇಶಗಳಾದ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಶೀತಗಾಳಿ ಹಾಗೂ ಕನಿಷ್ಠ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಈಗ ಶೀತಗಾಳಿ ದಕ್ಷಿಣದತ್ತ ಬೀಸುತ್ತಿದ್ದು, ರಾಜ್ಯದ ದಕ್ಷಿಣದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಕನಿಷ್ಠ ಉಷ್ಣಾಂಶವು ಮಲೆನಾಡು ಪ್ರದೇಶ, ಕರಾವಳಿ ಪ್ರದೇಶ ಹಾಗೂ ಬೆಂಗಳೂರಿನಂತರ ಪ್ರದೇಶಗಳಲ್ಲಿ ಬೀಳದೇ ಅತಿಹೆಚ್ಚು ಸಮತಟ್ಟಾದ ಪ್ರದೇಶಗಳಲ್ಲಿ ದಾಖಲಾಗುತ್ತದೆ. ನಮ್ಮ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ವಿಮಾನ ನಿಲ್ದಾಣ ಹಾಗೂ ರಾಯಚೂರು ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುತ್ತದೆ. ಆದರೆ, ಈಗ ಉತ್ತರ ಒಳನಾಡಿನ ಪ್ರದೇಶಗಳನ್ನು ಬಿಟ್ಟು ದಕ್ಷಿಣ ಒಳನಾಡಿನತ್ತ ಶೀತಗಾಳಿ ಬೀಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ವೇಳೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತೀ ಕಡಿಮೆ ಕನಿಷ್ಠ ಉಷ್ಣಾಂಶ 14.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
undefined
ಅಯೋಧ್ಯ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ 12 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡ ಸರ್ಕಾರ!
ಇನ್ನು ರಾಜ್ಯದಾದ್ಯಂತ ಒಣ ಹವೆ ಮುಂದುವರೆಯುತ್ತಿದೆ. ಯಾವುದೇ ಮಳೆಯ ಮುನ್ಸೂಚನೆ ಅಥವಾ ಮಳೆ ಪ್ರಮಾಣ ದಾಖಲಾಗಿಲ್ಲ. ಮುಂದಿನ 2 ದಿನಗಳ ಕಾಲ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಜೊತೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಒಣ ಹವೆಯಲ್ಲಿಯೂ ಚಳಿ ಹಾಗೂ ಶೀತವಾದರೆ ಥೈರಾಯ್ಡ್ ಲಕ್ಷಣ: ನಮ್ಮ ದೇಹದಲ್ಲಿ ಆಗುವ ಸಣ್ಣಪುಟ್ಟ ಬದಲಾವಣೆಗಳ ಬಗ್ಗೆಯೂ ನಾವು ಗಮನ ಹರಿಸಬೇಕು. ಆರೋಗ್ಯದ ವಿಷ್ಯದಲ್ಲಿ ಬೇರೆಯವರಿಗಿಂತ ನಾವು ಭಿನ್ನವಾಗಿ ಕಂಡಾಗ ಚಿಕಿತ್ಸೆ ಅತ್ಯಗತ್ಯ. ಇಲ್ಲವೆಂದ್ರೆ ಮುಂದೆ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡಬಹುದು. ಒಬ್ಬೊಬ್ಬರ ಶರೀರದ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ವಿಪರೀತ ಚಳಿಯಾದರೆ ಮತ್ತೆ ಕೆಲವರಿಗೆ ಸೆಕೆ ಜಾಸ್ತಿ. ನೀವೂ ಸೆಕೆಗಾಲದಲ್ಲೂ ಚಳಿ ಎನ್ನುತ್ತಿದ್ದರೆ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಖಾಯಿಲೆಯ ಲಕ್ಷಣವಾಗಿರಬಹುದು. ಇದು ಹೈಪೋಥೈರಾಯ್ಡಿಸಮ್ ಅಥವಾ ಥೈರಾಯ್ಡ್ ನಿಷ್ಕ್ರಿಯತೆಯಿಂದ ಉಂಟಾಗುತ್ತದೆ.
Health Tips: ಬೇಸಿಗೆಯಲ್ಲೂ ಶೀತವಾಗ್ತಿದ್ಯಾ? ನಿರ್ಲಕ್ಷ್ಯ ಬೇಡ
ಥೈರಾಯ್ಡ್ (Thyroid ) ಸಮಸ್ಯೆಯಿಂದ ಶೀತ (Cold) ದ ಅನುಭವ : ಥೈರಾಯ್ಡ್ ನಮ್ಮ ಕುತ್ತಿಗೆಯ ಭಾಗದಲ್ಲಿರುವ ಗ್ರಂಥಿಯಾಗಿದೆ. ಈ ಗ್ರಂಥಿ ನಮ್ಮ ಚಯಾಪಚಯ ಕ್ರಿಯೆ, ಬೆಳವಣಿಗೆಗೆ ಪೂರಕವಾಗುವ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸದೇ ಇದ್ದಾಗ ಹೈಪೋಥೈರಾಯ್ಡಿಸಮ್ (Hypothyroidism) ಉಂಟಾಗುತ್ತದೆ. ಇದರಿಂದ ಶೀತ ಸಂವೇದನೆ, ಆಯಾಸ, ತೂಕ ಏರಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಹೈಪೋಥೈರಾಯ್ಡಿಸಮ್ ನಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೇಹದ ಚಯಾಪಚಯ ಕ್ರಿಯೆ ನಿಧಾನವಾದಾಗ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದರಿಂದ ಹೈಪೋಥೈರಾಯ್ಡಿಸಮ್ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಮಾತ್ರವಲ್ಲದೇ ಬೇಸಿಗೆಯಲ್ಲು ಕೂಡ ಚಳಿಯ ಅನುಭವವಾಗುತ್ತದೆ. ದೇಹದಲ್ಲಿ ರಕ್ತಹೀನತೆ ಮತ್ತು ರಕ್ತದ ಪರಿಚಲನೆ ದುರ್ಬಲಗೊಂಡಾಗಲೂ ಶೀತದ ಅನುಭವ ಹೆಚ್ಚಾಗುತ್ತದೆ.
ಹೈಪೋಥೈರಾಯ್ಡಿಸಮ್ ಲಕ್ಷಣಗಳು : ಹೈಪೋಥೈರಾಯ್ಡಿಸಮ್ ತೊಂದರೆಯನ್ನು ಹೊಂದಿದವರಿಗೆ ಆಯಾಸ, ಕೈ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ, ಮಲಬದ್ಧತೆ, ತೂಕ ಇಳಿಕೆ ಖಿನ್ನತೆ, ಒರಟಾದ ಚರ್ಮ ಹಾಗೂ ಕೂದಲು, ಮುಟ್ಟಿನ ತೊಂದರೆ, ಇಳಿ ಬೀಳುವ ಕಣ್ಣು, ಮುಖ ಊದಿಕೊಳ್ಳುವುದು, ದುರ್ಬಲ ಉಗುರು, ಮೆದುಳಿನ ತೊಂದರೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.