ಪೊಲೀಸ್‌ ವರ್ಗ ಕುರಿತು ಎಚ್‌ಡಿಕೆ ನೀಡಿದ್ದ ಸಲಹೆ ಬಗ್ಗೆ ನಾನು ಹೇಳಲ್ಲ: ಗೃಹ ಸಚಿವ

By Kannadaprabha NewsFirst Published Aug 5, 2023, 6:40 AM IST
Highlights

‘ಇನ್ಸ್‌ಪೆಕ್ಟರ್‌ ವರ್ಗಾವಣೆ ವಿಚಾರವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಅನಗತ್ಯ ಟೀಕೆ ಮಾಡುವುದು ಬೇಡ. ಸರ್ಕಾರ ನಡೆಸುವವರು ನಾವು, ಯಾವುದು ಸರಿ ಕಾಣುತ್ತೋ ಅದನ್ನು ಮಾಡುತ್ತೇವೆ. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನೇ ಗೃಹ ಸಚಿವನಾಗಿದ್ದೆ. ಎಚ್‌ಡಿಕೆಗೆ ಗೃಹಸಚಿವ ಪರಮೇಶ್ವರ್ ತಿರುಗೇಟು

ಬೆಂಗಳೂರು (ಆ.5)  ‘ಇನ್ಸ್‌ಪೆಕ್ಟರ್‌ ವರ್ಗಾವಣೆ ವಿಚಾರವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಅನಗತ್ಯ ಟೀಕೆ ಮಾಡುವುದು ಬೇಡ. ಸರ್ಕಾರ ನಡೆಸುವವರು ನಾವು, ಯಾವುದು ಸರಿ ಕಾಣುತ್ತೋ ಅದನ್ನು ಮಾಡುತ್ತೇವೆ. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನೇ ಗೃಹ ಸಚಿವನಾಗಿದ್ದೆ. ಆಗ ವರ್ಗಾವಣೆ ಬಗ್ಗೆ ಅವರು ಯಾವ ರೀತಿ ಸಲಹೆ ನೀಡಿದ್ದರು ಎಂಬುದನ್ನು ಹೇಳಿಲ್ಲ, ಅದನ್ನು ಹೇಳುವುದೂ ಕೂಡ ಚೆನ್ನಾಗಿರುವುದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ತನ್ಮೂಲಕ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮ ಅವರ ಹೇಳಿಕೆಗೆ ಸೂಚ್ಯವಾಗಿ ತಿರುಗೇಟು ನೀಡಿದ್ದಾರೆ.

Latest Videos

ಸುಳ್ಳು ಸುದ್ದಿ ತಡೆ ಕಾನೂನು ರಚನೆಗೆ ತಜ್ಞ ಸಮಿತಿ: ಸಚಿವ ಪರಮೇಶ್ವರ್‌

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಏನಾದರೂ ಮಾತನಾಡಿಕೊಳ್ಳಲಿ. ಸರ್ಕಾರ ನಡೆಸುವವರು ನಾವು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನು ಮಾಡುತ್ತೇವೆ. ನಮ್ಮ ವ್ಯಾಪ್ತಿಯಲ್ಲಿ 1,200 ಇನ್‌ಸ್ಪೆಕ್ಟರ್‌ಗಳಿದ್ದಾರೆ. ಅಷ್ಟುಮಂದಿಯನ್ನೂ ನಾವು ವರ್ಗಾವಣೆ ಮಾಡಲ್ಲ. ಆಯ್ದ ಸ್ಥಳಗಳಲ್ಲಿ ಮಾತ್ರ ಆಡಳಿತದ ಹಿತದೃಷ್ಟಿಯಿಂದ ಮಾಡುತ್ತೇವೆ. ಯಾವ ಪ್ರದೇಶದಲ್ಲಿ ಯಾರನ್ನು ಹಾಕಿದರೆ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ ಎಂಬ ದೃಷ್ಟಿಕೋನ ಇಟ್ಟುಕೊಂಡು ವರ್ಗಾವಣೆ ಮಾಡುತ್ತೇವೆ. ಇವರು ಹೇಳಿದ ಹಾಗೆ ಮಾಡಲಾಗಲ್ಲ ಎಂದರು.

ವರ್ಗಾವಣೆ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಕೆಲ ವರ್ಗಾವಣೆ ಸರಿ ಎನಿಸಿಲ್ಲ ಎನ್ನುವ ಕಾರಣಕ್ಕಾಗಿ ನಿಲ್ಲಿಸಿದ್ದೇವೆ. ಅದೆನ್ನೆಲ್ಲಾ ನೋಡಿ ಸರಿಪಡಿಸಿ ವರ್ಗಾವಣೆ ಮಾಡುತ್ತೇವೆ ಎಂದರು.

ಪೊಲೀಸರನ್ನು ರಾಜಕೀಯಕ್ಕೆ ಎಳೆಯಬೇಡಿ:

ವಿದೇಶದಲ್ಲಿ ಕುಳಿತು ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದಾರೆಂಬ ಆರೋಪದ ವಿಚಾರವಾಗಿ ಗುಪ್ತಚರ ಹಾಗೂ ಪೊಲೀಸರನ್ನು ಸರ್ಕಾರ ಹೇಗೆ ಬಳಕೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಪೊಲೀಸರನ್ನು ರಾಜಕೀಯ ವಿಚಾರಕ್ಕೆ ಎಳೆದ ತರುವುದು ಸರಿಯಲ್ಲ. ಇವರು ವಿದೇಶದಲ್ಲಿ ಸರ್ಕಾರ ಕೆಡವಲು ಹೋಗಿದ್ದಾರೆ ಎಂದು ಯಾವ ಪೊಲೀಸರೂ ಹೇಳಿಲ್ಲ. ಬೇರೆ ಯಾರೋ ಹೇಳಿರಬೇಕು. ಇಂತಹ ವಿಚಾರಗಳಲ್ಲಿ ಪೊಲೀಸರನ್ನು ಯಾಕೆ ದೂಷಿಸಬೇಕು? ಅನಗತ್ಯವಾಗಿ ದೂಷಣೆ ಮಾಡುವುದು ಸರಿಯಲ್ಲ ಎಂದರು.

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ: ಸಚಿವ ಪರಮೇಶ್ವರ್‌

ಸಚಿವರಿಗೆ ಲೋಕಸಭೆ ಟಿಕೆಟ್‌ ಬಗ್ಗೆ ಚರ್ಚೆ:

ಹೈಕಮಾಂಡ್‌ ಜತೆಗಿನ ಸಭೆ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು, ಹೆಚ್ಚು ಸ್ಥಾನ ಗೆಲ್ಲಲು ಯಾವ ರೀತಿಯ ಜವಾಬ್ದಾರಿಗಳನ್ನು ಮಂತ್ರಿಗಳಿಗೆ ಕೊಡಬೇಕು ಎಂಬುದರ ಬಗ್ಗೆ ಚರ್ಚೆಯಾಗಿದೆ. ಪ್ರತಿಯೊಬ್ಬ ಮಂತ್ರಿ ಕೂಡ ಕ್ರಿಯಾಶೀಲರಾಗಿ ಚುನಾವಣೆಗೆ ತಯಾರಾಗಬೇಕು. ಅದಕ್ಕಾಗಿ ರಣನೀತಿ ಹೇಗಿರಬೇಕು, ಅಭ್ಯರ್ಥಿಗಳ ಆಯ್ಕೆ ಹೇಗೆ ಆಗಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದರು.

ಸಚಿವರಿಗೆ ಲೋಕಸಭೆ ಟಿಕೆಟ್‌ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಹೈಕಮಾಂಡ್‌ ಜತೆಗಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ನಮ್ಮ ಹಂತದ ಚರ್ಚೆಯಲ್ಲಿ ಮಾತು ಬಂದಿದೆ. ಯಾರಾದರೂ ಮಂತ್ರಿಗಳು ಗೆಲ್ಲುತ್ತಾರೆ ಎನಿಸಿದರೆ ಅಂತಹವರನ್ನು ಕೇಳುವ ಪ್ರಯತ್ನಗಳು ನಡೆದಿದೆ ಎಂದು ಹೇಳಿದರು.

click me!