VRL: 500 ಕೋಟಿ ರು. ವೆಚ್ಚದಲ್ಲಿ 550 ಹೊಸ ಲಕ್ಷುರಿ ಬಸ್‌ ಖರೀದಿ!

By Kannadaprabha News  |  First Published Aug 5, 2023, 6:14 AM IST

ಹೆಸರಾಂತ ಸಾರಿಗೆ ಸಂಸ್ಥೆ ವಿಜಯಾನಂದ ಟ್ರಾವೆಲ್ಸ್‌ 500 ಕೋಟಿ ರು. ಮೊತ್ತದ 550 ವೋಲ್ವೋ ಹಾಗೂ ಐಷರ್‌ ಇಂಟರ್‌ಸಿಟಿ ಲಕ್ಷುರಿ ಸ್ಲೀಪರ್‌ ಬಸ್‌ಗಳನ್ನು ಖರೀದಿಸುತ್ತಿದ್ದು, ಆ ಮೂಲಕ ಭಾರತದಲ್ಲಿ ಅತ್ಯಧಿಕ ಬಸ್‌ಗಳನ್ನು ಖರೀದಿ ಮಾಡುತ್ತಿರುವ ಮೊದಲ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.


ಬೆಂಗಳೂರು (ಆ.5) :  ಹೆಸರಾಂತ ಸಾರಿಗೆ ಸಂಸ್ಥೆ ವಿಜಯಾನಂದ ಟ್ರಾವೆಲ್ಸ್‌ 500 ಕೋಟಿ ರು. ಮೊತ್ತದ 550 ವೋಲ್ವೋ ಹಾಗೂ ಐಷರ್‌ ಇಂಟರ್‌ಸಿಟಿ ಲಕ್ಷುರಿ ಸ್ಲೀಪರ್‌ ಬಸ್‌ಗಳನ್ನು ಖರೀದಿಸುತ್ತಿದ್ದು, ಆ ಮೂಲಕ ಭಾರತದಲ್ಲಿ ಅತ್ಯಧಿಕ ಬಸ್‌ಗಳನ್ನು ಖರೀದಿ ಮಾಡುತ್ತಿರುವ ಮೊದಲ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.

ವಿಜಯಾನಂದ ಟ್ರಾವೆಲ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಅವರು ವೋಲ್ವೋ ಮತ್ತು ಐಷರ್‌ ಸಂಸ್ಥೆಗಳಿಗೆ ಖರೀದಿ ಆದೇಶ ನೀಡಿದ್ದಾರೆ. ಆ ಪೈಕಿ ಐಷರ್‌ ಇಂಟರ್‌ಸಿಟಿ 13.5ಎಂ ಎಸಿ ಮತ್ತು ನಾನ್‌ ಎಸಿ ಸ್ಲೀಪರ್‌ ಕೋಚ್‌ಗಳ 500 ಹಾಗೂ ವೋಲ್ವೋ 9600 ಲಕ್ಷುರಿ ಸ್ಲೀಪರ್‌ ಕೋಚ್‌ಗಳ 50 ಬಸ್‌ಗಳು ಸೇರಿವೆ. ಭಾರತದಲ್ಲಿ ಸುಖಕರ ಬಸ್‌ ಪ್ರಯಾಣದ ಅನುಭವವನ್ನು ನೀಡುವುದರ ಜತೆಗೆ ವಿಶ್ವದರ್ಜೆಯ ಗುಣಮಟ್ಟ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತಹ ಬಸ್‌ಗಳನ್ನು ಪೂರೈಸಲು ವಿಜಯಾನಂದ ಟ್ರಾವೆಲ್ಸ್‌ ವೋಲ್ವೋ ಮತ್ತು ಐಷರ್‌ ಸಂಸ್ಥೆಗಳಿಗೆ ಸೂಚಿಸಿದೆ. ಮೇಕ್‌ ಇನ್‌ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಈ ಬಸ್‌ಗಳನ್ನು ಹೊಸಕೋಟೆ ಮತ್ತು ಪೀತಂಪುರದ ಕಾರ್ಖಾನೆಗಳಲ್ಲಿ ನಿರ್ಮಿಸಲಾಗುತ್ತಿದೆ.

Tap to resize

Latest Videos

Vijayananda Movie: ಬೆಳ್ಳಿತೆರೆ ಮೇಲೆ ವಿಜಯ್ ಸಂಕೇಶ್ವರ್ ಲೈಫ್ ಜರ್ನಿ: ಸಿನಿಮಾ ನೋಡಿ ಸೆಲೆಬ್ರೆಟಿಗಳು ಏನಂದ್ರು?

ಬಸ್‌ಗಳ ಖರೀದಿ ಕುರಿತಂತೆ ಪ್ರತಿಕ್ರಿಯಿಸಿರುವ ಶಿವ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್‌(Vijayananda Travels)ಗೆ ತನ್ನದೇ ಆದ ಗುರುತಿದೆ. ನಿಗದಿತ ಸಮಯದಲ್ಲಿ ಬಸ್‌ಗಳು ಹೊರಡುವುದು ಮತ್ತು ನಿಗದಿತ ಅವಧಿಯಲ್ಲಿ ಕೊನೆಯ ಸ್ಥಳಗಳನ್ನು ತಲುಪುವ ಮೂಲಕ ಸಮಯಪಾಲನೆಗೆ ಹೆಸರುವಾಸಿಯಾಗಿವೆ. ಇದೀಗ ಸಂಸ್ಥೆಯ ಬೆಳವಣಿಗೆಗೆ ನಿರ್ಣಾಯಕವಾದಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿಇಸಿವಿ ವ್ಯವಸ್ಥಾಪಕ ನಿರ್ದೇಶಕ ವಿನೋದ್‌ ಅಗರ್‌ವಾಲ್‌ ಮಾತನಾಡಿ, ವೋಲ್ವೋ ಗ್ರೂಪ್‌ ಮತ್ತು ಐಷರ್‌ ಮೋಟಾ​ರ್‍ಸ್ ಸಂಸ್ಥೆಗಳು 15 ವರ್ಷಗಳಿಂದ ಯಶಸ್ವಿ ಪಾಲುದಾರಿಕೆಯನ್ನು ಹೊಂದಿವೆ. ವೋಲ್ವೋ ಮತ್ತು ಐಷರ್‌ ಬಸ್‌ಗಳು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಒದಗಿಸುತ್ತಿವೆ. ಇದೀಗ ವಿಜಯಾನಂದ ಟ್ರಾವೆಲ್ಸ್‌ ಸಂಸ್ಥೆಯು 550 ಬಸ್‌ಗಳ ಪೂರೈಕೆಗೆ ಆದೇಶ ನೀಡಿರುವುದು ಸಂತಸ ತಂದಿದೆ ಎಂದರು.

Vijayanand ವಿಜಯ ಸಂಕೇಶ್ವರರೇ ರಿಯಲ್‌ ಹೀರೋ: ರಿಷಿಕಾ ಶರ್ಮಾ

click me!