ಚಂದ್ರಯಾನ-3 ನೌಕೆ ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಇಸ್ರೋದ ಮಾಜಿ ಮುಖ್ಯಸ್ಥರಾದ ಎಸ್ ಸೋಮನಾಥನ್ ಅವರಿಗೆ ದೂರವಾಣಿ ಕರೆ ಮಾಡಿದರು.
ಬೆಂಗಳೂರು (ಆ.24): ಚಂದ್ರಯಾನ-3 ನೌಕೆ ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಇಸ್ರೋದ ಮಾಜಿ ಮುಖ್ಯಸ್ಥರಾದ ಎಸ್ ಸೋಮನಾಥನ್ ಅವರಿಗೆ ದೂರವಾಣಿ ಕರೆ ಮಾಡಿದರು. ಯೋಜನೆ ಯಶಸ್ಸಿನ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಕೂಡಲೇ ಎಸ್.ಸೋಮನಾಥ್‌ಗೆ ಕರೆ ಮಾಡಿ ‘ಇಸ್ರೋದಲ್ಲಿ ನೀವು ಮಾಡಿರುವ ಅದ್ಭುತ ಕಾರ್ಯಕ್ಕೆ ನಾನು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಧನ್ಯವಾದ ತಿಳಿಸುತ್ತೇನೆ’ ಎಂದರು. ಜೊತೆಗೆ ನಿಮ್ಮ ಹೆಸರು ಸೋಮನಾಥದಲ್ಲೇ ಚಂದ್ರನ ನಂಟಿದೆ. ಹೀಗಾಗಿ ನಿಮ್ಮ ಕುಟುಂಬ ಸದಸ್ಯರು ಇಂದು ಹೆಚ್ಚು ಸಂಭ್ರಮಿಸಿರಬಹುದು ಎಂದು ನಗೆ ಚಟಾಕಿ ಹಾರಿಸಿದರು.
ತಲೆಮಾರಿನ ಇಸ್ರೋ ನಾಯಕತ್ವ, ವಿಜ್ಞಾನಿಗಳ ಸಾಧನೆ: ಚಂದ್ರಯಾನ-3 ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿರುವ ಇಸ್ರೋ ಮಾಜಿ ಮುಖ್ಯಸ್ಥ ಎಸ್ ಸ್ವಾಮಿನಾಥನ್ ‘ಚಂದ್ರಯಾನ ಮಿಷನ್ ಯಶಸ್ಸಿಗೆ ಇಸ್ರೋದ ತಲೆಮಾರಿನ ನಾಯಕತ್ವ ಮತ್ತು ಅದರ ವಿಜ್ಞಾನಿಗಳ ಕೊಡುಗೆ ಸಾಕಷ್ಟಿದೆ. ಇದೊಂದು ಹೆಚ್ಚಿನ ಪ್ರಗತಿಯ ಬೃಹತ್ ಸಾಧನೆ’ ಎಂದಿದ್ದಾರೆ. ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಮಾತನಾಡಿದ ಅವರು ‘ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಗೆ ಕರೆ ಮಾಡಿ, ಇಸ್ರೋದಲ್ಲಿ ನೀವು ಮಾಡಿರುವ ಅದ್ಭುತ ಕಾರ್ಯಕ್ಕಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳನ್ನು ತಿಳಿಸಿದರು. ಅವರ ಬೆಂಬಲಕ್ಕೆ ಧನ್ಯವಾದಗಳು’ ಎಂದರು.
ಈಗ ನಮ್ಮ ಕರ್ನಾಟಕಕ್ಕೂ ಚಂದ್ರನಿಗೂ ನೇರ ನಂಟು: ಪೀಣ್ಯದಿಂದ ಚಂದ್ರಯಾನ ನಿರ್ವಹಣೆ
ಅಲ್ಲದೇ ‘ಇದು ನಾವು ಚಂದ್ರಯಾನ-1ರೊಂದಿಗೆ ಪ್ರಾರಂಭಿಸಿದ ಪ್ರಯಾಣವಾಗಿದೆ. ಇದು ಚಂದ್ರಯಾನ-2ರೊಂದಿಗೂ ಮುಂದುವರೆಯಿತು. ಚಂದ್ರಯಾನ-2 ಕ್ರಾಫ್‌್ಟಇನ್ನೂ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ಸಂವಹನ ಕಾರ್ಯ ಮಾಡುತ್ತಿದೆ. ಚಂದ್ರಯಾನ- 1 ಮತ್ತು 2 ಅನ್ನು ನಿರ್ಮಿಸಲು ಕೊಡುಗೆ ನೀಡಿದ ಎಲ್ಲ ತಂಡವನ್ನೂ ಈಗ ನೆನಪಿಸಿಕೊಳ್ಳಬೇಕು. ಮತ್ತು ಧನ್ಯವಾದ ಹೇಳಬೇಕು. ಚಂದ್ರಯಾನ -3 ಅನ್ನು ಆಚರಿಸಬೇಕು’ ಎಂದರು.
ತಿಂಗಳನ ಅಂಗಳದಲ್ಲಿ ಭಾ'ರಥ': ಇಸ್ರೋ ಮುಂದಿನ ಗುರಿ ಸೂರ್ಯ
ಶಿವನ್‌ಗೆ ಧೈರ್ಯ ತುಂಬಿದ್ದ ಪ್ರಧಾನಿ ಮೋದಿ: ಚಂದ್ರಯಾನ-2 ಯೋಜನೆಯ ಲ್ಯಾಂಡರ್ ನಿಗದಿತ ಗುರಿ ತಲುಪಲು ವಿಫಲವಾದ ವೇಳೆ ಕಣ್ಣೀರಾಗಿದ್ದ ಅಂದಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ತಬ್ಬಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದ್ದರು. ಅಲ್ಲದೇ ಮತ್ತೆ ಯೋಜನೆಯನ್ನು ಕೈಗೊಳ್ಳುವಂತೆ ಪ್ರೋತ್ಸಾಹ ನೀಡಿದ್ದರು. ಇದು ಇದೀಗ ಸಾಕಾರಗೊಂಡಿದೆ. ಚಂದ್ರಯಾನ-2 ಯೋಜನೆಯಲ್ಲಿದ್ದ ಲ್ಯಾಂಡರ್ ಕೊನೆ ಹಂತದಲ್ಲಿ ಇಸ್ರೋದ ಸಂಪರ್ಕ ಕಡಿದುಕೊಂಡು ಕ್ರಾಶ್ ಲ್ಯಾಂಡ್ ಆಗಿತ್ತು. ಈ ವೇಳೆ ನೇರಪ್ರಸಾರ ವೀಕ್ಷಿಸಲು ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಯೋಜನೆ ವಿಫಲವಾದ ಬಳಿಕ ಬೇಸರಗೊಂಡಿದ್ದ ಅಂದಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಸಮಾಧಾನ ಮಾಡಿದ್ದರು. ಬೇಸರ ಬೇಡ. ಮತ್ತೆ ಪ್ರಯತ್ನ ನಡೆಸಿ. ನಿಮ್ಮೊಂದಿಗೆ ಇಡೀ ದೇಶ ಇದೆ ಎಂದು ಪ್ರಧಾನಿ ಹೇಳಿದ್ದರು.