ಭಾರತದ ಚಂದ್ರಯಾನ-3 ಯಶಸ್ವಿ ಆಗುತ್ತಿದ್ದಂತೆಯೇ ದೇಶದ ಸಾಧನೆ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತವು ಈಗ ಚಂದ್ರನ ಮೇಲಿದೆ. ಇದು ಶಾಶ್ವತವಾಗಿ ಸ್ಮರಿಸಬೇಕಾದ ಕ್ಷಣವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಕಹಳೆ ಇಂದು ಮೊಳಗಿದೆ.
ಬೆಂಗಳೂರು (ಆ.24): ಭಾರತದ ಚಂದ್ರಯಾನ-3 ಯಶಸ್ವಿ ಆಗುತ್ತಿದ್ದಂತೆಯೇ ದೇಶದ ಸಾಧನೆ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತವು ಈಗ ಚಂದ್ರನ ಮೇಲಿದೆ. ಇದು ಶಾಶ್ವತವಾಗಿ ಸ್ಮರಿಸಬೇಕಾದ ಕ್ಷಣವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಕಹಳೆ ಇಂದು ಮೊಳಗಿದೆ. ಆದರೆ ಇದು ಕೇವಲ ಭಾರತದ ಯಶಸ್ಸಲ್ಲ. ಇಡೀ ಮಾನವತೆಯ ಯಶಸ್ಸು. ನವ ಭಾರತದ ನವ ಹೋರಾಟವು ಇಂದು ಫಲ ನೀಡಿದೆ. ಭಾರತ ಹೊಸ ಇತಿಹಾಸ ಬರೆದಿದೆ ಹಾಗೂ ಹೊಸ ಯುಗದ ಉದಯವಾಗಿದೆ’ ಎಂದು ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆ ನಿಮಿತ್ತ ದಕ್ಷಿಣ ಆಫ್ರಿಕಾದಲ್ಲಿದ್ದ ಮೋದಿ ಅವರು ಅಲ್ಲಿಂದಲೇ ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರಸ್ಪರ್ಶ ಮಾಡುವುದನ್ನು ವೀಕ್ಷಿಸಿದರು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ತಿಂಗಳನ ಅಂಗಳದಲ್ಲಿ ಭಾ'ರಥ': ಇಸ್ರೋ ಮುಂದಿನ ಗುರಿ ಸೂರ್ಯ
‘ಭೂಮಿಯಲ್ಲಿ ಮಾಡಿದ ಸಂಕಲ್ಪ ಇಂದು ಚಂದ್ರನಲ್ಲಿ ಪೂರ್ತಿಯಾಗಿದೆ. ಭಾರತ ಇಂದು ಚಂದ್ರನ ಮೇಲಿದೆ. ಈಗ ‘ಚಂದ್ರಪಥ’ದ ಮೇಲೆ ನಡೆಯುವ ಸಮಯ ಬಂದಿದೆ. ಪ್ರತಿಯೊಬ್ಬ ಭಾರತೀಯನೂ ಇಂದು ಸಂಭ್ರಮ ಆಚರಿಸುತ್ತಿದ್ದಾರೆ. ಪ್ರತಿ ಮನೆಯೂ ಸಂಭ್ರಮ ಆಚರಿಸುತ್ತಿದೆ. ಈ ಹೆಮ್ಮೆಯ ಕ್ಷಣದಲ್ಲಿ ನಾನು ಆಫ್ರಿಕಾದಿಂದಲೇ ನನ್ನ ದೇಶದ ಜನರೊಂದಿಗೆ ನಾನು ಈ ಸಂಭ್ರಮದಲ್ಲಿ ಭಾಗಿ ಆಗಿದ್ದೇನೆ. ಇದು ಹೊಸ ಯುಗದ ಉದಯವಾಗಿದೆ’ ಎಂದರು.
‘ಈ ಹಿಂದೆ ಯಾವುದೇ ದೇಶವು ಅಲ್ಲಿಗೆ (ಚಂದ್ರನ ದಕ್ಷಿಣ ಧ್ರುವ) ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ನಾವು ನವ ಭಾರತದ ಹೊಸ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ. ಹೊಸ ಇತಿಹಾಸವನ್ನು ಬರೆಯಲಾಗಿದೆ’ ಎಂದ ಮೋದಿ ಇದೇ ಸಂದರ್ಭದಲ್ಲಿ ಚಿಕ್ಕಮಕ್ಕಳಿಗೆ ಅಜ್ಜಿಯರು ಹೇಳುತ್ತಿದ್ದ ಚಂದಮಾನನ ಕತೆಯನ್ನು ವಿಶಿಷ್ಟರೀತಿಯಲ್ಲಿ ಉದಾಹರಿಸಿದರು.
‘ಇಂದಿನ ಯಶಸ್ಸು ಚಂದ್ರನ ಎಲ್ಲಾ ನಿರೂಪಣೆಗಳು ಮತ್ತು ಕಥೆಗಳನ್ನು ಬದಲಾಯಿಸುತ್ತದೆ. ಈವರೆಗೆ ಅಜ್ಜಿಯರು ಮೊಮ್ಮಕ್ಕಳಿಗೆ ಚಂದಮಾಮನ ಕತೆ ಹೇಳುತ್ತಿದ್ದರು. ಆಗ ಚಂದ್ರ ನಮ್ಮಿಂದ ತುಂಬಾ ದೂರ ಇದ್ದಾನೆ ಎನ್ನುತ್ತಿದ್ದರು. ಅದರೆ ಇನ್ನು ಮುಂದೆ ಚಂದಮಾಮನ ಕತೆ ಬದಲಾಗಲಿದೆ. ಇಂದು ಚಂದ್ರ ನಮಗೆ ಮತ್ತಷ್ಟುಹತ್ತಿರವಾಗಿದ್ದಾನೆ. ಅಲ್ಲಿಗೆ ಇನ್ನು ನಾವು ಪ್ರವಾಸ ಕೈಗೊಳ್ಳಬಹುದು ಎಂಬ ಹೊಸ ಕತೆಗಳು ಅರಂಭವಾಗಲಿವೆ’ ಎಂದು ಹಾಸ್ಯದ ಧಾಟಿಯಲ್ಲಿ ನುಡಿದರು. ‘ಈ ಅಭೂತಪೂರ್ವ ಸಾಧನೆಗಾಗಿ ನಾನು ಇಸ್ರೋವನ್ನು, ಅದರ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಾನು ದಕ್ಷಿಣ ಆಫ್ರಿಕಾದಲ್ಲಿರಬಹುದು ಆದರೆ ನನ್ನ ಹೃದಯವು ಯಾವಾಗಲೂ ಚಂದ್ರಯಾನ ಮಿಷನ್‌ನಲ್ಲಿದೆ’ ಎಂದರು.
ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಯುವತಿ: ರಂಭಾಪುರಿ ಶ್ರೀ ಶುಭಹಾರೈಕೆ
‘ಭಾರತದ ಈ ಯಶಸ್ಸು ಕೇವಲ ದೇಶದ ಯಶಸ್ಸಲ್ಲ. ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬ ಪರಿಕಲ್ಪನೆಯು ಇಂದು ವಿಶ್ವಾದ್ಯಂತ ಅನುರಣಿಸುತ್ತಿದೆ. ಭಾರತದ ಚಂದ್ರಯಾನವು ಮಾನವತೆಯ ಆಧಾರದಲ್ಲಿ ನಿರೂಪಿತವಾಗಿದೆ. ಇಂದಿನ ಯಶಸ್ಸು ಇಡೀ ಮಾನವ ಕುಲಕ್ಕೆ ಅರ್ಪಣೆ’ ಎಂದೂ ಹೇಳಿದರು. ‘ಭಾರತದ ಹೊಸ ಹೋರಾಟವನ್ನು ನಾವು ಇಂದು ನೋಡಿದ್ದೇವೆ. ಹೊಸ ಇತಿಹಾಸ ಬರೆಯಲಾಗಿದೆ. ಇದೊಂದು ಐತಿಹಾಸಿಕ ಕ್ಷಣ. ಇದು ಅಭಿವೃದ್ಧಿ ಹೊಂದಿದ ಭಾರತದ ಕಹಳೆ’ ಎಂದರು.