ಮಂಡ್ಯದಲ್ಲಿ ನಡೆದ ಘನಘೋರ ಬಸ್ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಹುಲ್ ಗಾಂಧಿ ಸೇರಿದಂತೆ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು, [ನ.24] ಇಂದು [ಶನಿವಾರ] ಮಂಡ್ಯದಲ್ಲಿ ಘನಘೋರ ಬಸ್ ದುರಂತದಲ್ಲಿ ಇಡೀ ಬಸ್ ಜಲಸಮಾಧಿಯಾಗಿದೆ. ವಿಸಿ ನಾಲೆಗೆ ಬಸ್ ಉರುಳಿ ಬಿದ್ದಿದ್ದು, 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಸಾವಿನ ಶನಿವಾರ: ನಾಲೆ ಬಳಿ ಹೆಣಗಳ ರಾಶಿ!
ಈಗಾಗಲೇ 25 ಮೃತದೇಹಗಳನ್ನ ಹೊರತೆಗೆಲಾಗಿದ್ದು, ಇನ್ನು ಕೆಲವರು ನೀರಿಗೆ ಕೊಚ್ಚಿ ಹೋಗಿದ್ದು ಕಾರ್ಯಚರಣೆ ಮುಂದುರೆದಿದೆ. ಇನ್ನು ಈ ದುರ್ಘಟನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಸೇರಿದಂತೆ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಮಂಡ್ಯ ಬಸ್ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ
Deeply pained the bus accident in Karnataka’s Mandya. My thoughts are with the families of the deceased. May God give them strength in this hour of sadness: PM
— PMO India (@PMOIndia)I'm sorry to hear about the terrible bus accident in Mandya district of Karnataka in which over 20 people are feared dead & many others injured.
I extend my deepest condolences to the families of the deceased & pray for the speedy recovery of the injured.
Extremely saddened to learn about the tragic bus accident in Mandya, Karnataka. Thoughts and prayers with the bereaved families and with the injured. I understand local authorities are making efforts to rescue and help affected passengers
— President of India (@rashtrapatibhvn)ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ನಾಲೆಗೆ ಖಾಸಗಿ ಬಸ್ ಉರುಳಿ 20 ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ಅತೀವ ನೋವುಂಟುಮಾಡಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು ಹಾಗೂ ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸುತ್ತೇನೆ.
— Siddaramaiah (@siddaramaiah)ಪಾಂಡವಪುರದ ಕನಗನಮರಡಿಯ ಘೋರ ಘಟನೆ ಮನಕಲುಕಿದೆ. ಅದರಲ್ಲೂ, ಬಾಳಿ ಬದುಕಬೇಕಿದ್ದ ಮಕ್ಕಳೂ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ನನ್ನನ್ನು ಅತೀವ ಘಾಸಿಗೊಳಿಸಿದೆ. ಇದು ಕ್ರೂರ ವಿಧಿಯ ಅಟ್ಟಹಾಸವೇ ಸರಿ. ನೋವುಣ್ಣುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.
— H D Devegowda (@H_D_Devegowda)