ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!

By Web Desk  |  First Published Nov 24, 2018, 1:18 PM IST

ವಿಕೆಂಡ್‌ನಲ್ಲಿ ಕರುನಾಡಿಗೆ ಬ್ಯಾಡ್ ನ್ಯೂಡ್! ಮಂಡ್ಯದಲ್ಲಿ ಭೀಕರ ಬಸ್ ಅಪಘಾತ! ಕನಗನಮರಡಿ ವಿ.ಸಿ.ನಾಲೆಗೆ ಉರುಳಿದ ಖಾಸಗಿ ಬಸ್! ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರ ಸಾವು! ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದ ಬಸ್ 


ಮಂಡ್ಯ(ನ.24): ಇಲ್ಲಿನ ಕನಗನಮರಡಿ ವಿ.ಸಿ.ನಾಲೆಗೆ ಖಾಸಗಿ ಬಸ್ ವೊಂದು ಉರುಳಿದ ಪರಿಣಾಮ ಕನಿಷ್ಟ 20 ಜನ ಸಾವನ್ನಪ್ಪಿದ್ದಾರೆ.

Tap to resize

Latest Videos

ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಲ್ಲಿನ ಕನಗನಮರಡಿ ವಿ.ಸಿ.ನಾಲೆಗೆ ಉರುಳಿದೆ. ಪರಿಣಾಮ 20 ಜನರು ಸಾವನ್ನಪ್ಪಿದ್ದು, ಇತರರಿಗೆ ಗಂಭೀರ ಗಾಯಗಳಾಗಿವೆ. ಬಸ್ ನಲ್ಲಿ ಕನಿಷ್ಟ 40 ಪ್ರಯಾಣಿಕರು ಇದ್ದರು ಎಂದು ಮೂಲಗಳು ತಿಳಿಸಿವೆ.

ಅಪಘಾತ ಸಂಭವಿಸುತ್ತಿದ್ದಂತೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. 

click me!