ಮಂಡ್ಯದಲ್ಲಿ ಘನಘೋರ ಬಸ್ ದುರಂತದಲ್ಲಿ ಇಡೀ ಬಸ್ ಜಲಸಮಾಧಿಯಾಗಿದೆ. ಈ ದುರ್ಘಟನೆಯಲ್ಲಿ ಒಬ್ಬ ಬಾಲಕ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿತ್ತು. ಆದ್ರೆ ಒಬ್ಬರಲ್ಲ, ಇಬ್ಬರು ಎಂದು ತಿಳಿದುಬಂದಿದ್ದು, ಸಾವು ಗೆದ್ದ ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯವಿದು.
ಮಂಡ್ಯ, [ನ.24]: ಇಂದು [ಶನಿವಾರ] ಮಂಡ್ಯದಲ್ಲಿ ಘನಘೋರ ದುರಂತವೊಂದು ನಡೆದುಹೋಗಿದೆ. ಮಂಡ್ಯದ ಕಣಗಾನಮರಡಿ ಬಳಿ ಇರುವ ವಿಸಿ ನಾಲೆಗೆ ಬಸ್ ಉರುಳಿ ಸುಮಾರು ಈಗಾಗಲೇ 23 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ಈ ಘಟನೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ರೋಹಿತ್ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿತ್ತು. ಆದ್ರೆ ಈ ದುರಂತದಲ್ಲಿ ಬದುಕಿ ಬಂದಿದ್ದು ಒಬ್ಬರಲ್ಲ, ಇಬ್ಬರು ಎಂದು ತಿಳಿದುಬಂದಿದೆ. ರೋಹಿತ್ ಜೊತೆಗೆ ಗಿರೀಶ್ ಎನ್ನುವ ಬಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!
ಇನ್ನು ಸಾವನ್ನ ಗೆದ್ದು ಬಂದ ಗಿರೀಶ್ ಘಟನೆ ಬಗ್ಗೆ ವಿವರಿಸಿದ್ದು ಹೀಗೆ.
ಬಸ್ನಲ್ಲಿ ನಾನು ಹಿಂದೆ ಕುಳಿತಿದ್ದೆ. ಬಸ್ ನಾಲೆಗೆ ಉರುಳಿದ ನಂತರ ಒಳಗೆ ನೀರು ನುಗ್ಗಲು ಶುರುವಾಯ್ತು. ಗಾಬರಿಯಲ್ಲಿ ನಾನು ಕಿಟಕಿ ಗ್ಲಾಸ್ ಒಡೆದು ಹೊರಬಂದೆ.
ಬಸ್ನಲ್ಲಿ ಇದ್ದವರೆಲ್ಲರೂ ಕಿರುಚಾಡುತ್ತಿದ್ದರು. ಈ ವೇಳೆ ಮತ್ತೊಬ್ಬ ಹುಡುಗ ಕೂಡ ಮೇಲೆ ಬರುತ್ತಿದ್ದ. ಅವನನ್ನ ಮೇಲೆತ್ತಿ, ಈಜಿಕೊಂಡು ದಡಕ್ಕೆ ಬಂದೆವು. ಕೂಗಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಜನ ಓಡಿಬಂದರು ಎಂದು ಗಿರೀಶ್ ತಿಳಿಸಿದ್ದಾನೆ.