
ಹುಬ್ಬಳ್ಳಿ, [ಫೆ.10]: ಲೋಕಸಭೆ ಮಹಾ ಸಂಗ್ರಾಮಕ್ಕೆ ರಾಜ್ಯದಲ್ಲಿ ಬಿಜೆಪಿ ರಣಕಹಳೆ ಮೊಳಗಿಸಿದೆ. ಉತ್ತರ ಕರ್ನಾಟಕದಿಂದಲೇ ಲೋಕ ಸಮರಕ್ಕೆ ಪ್ರಧಾನಿ ಮೋದಿ ರಣವೀಳ್ಯ ಕೊಟ್ಟಿದ್ದು, ಹುಬ್ಬಳ್ಳಿಯ ಗಬ್ಬೂರ್ ಬಳಿಯ ಕೆಎಲ್ಇ ಮೈದಾನದಲ್ಲಿ ಮೋದಿ ತಮ್ಮ ಭಾಷಣದ ರಾಜ್ಯದಲ್ಲಿ ಚುನಾವಣೆ ಕಾವೇರಿಸಿದರು.
'ಕರ್ನಾಟಕದ ಮುಖ್ಯಮಂತ್ರಿ ಎಲ್ಲರ ಪಾಲಿಗೆ ಪಂಚಿಂಗ್ ಬ್ಯಾಗ್ ಆಗಿದ್ದಾರೆ'
ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಇತ್ತೀಚೆಗೆ ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರನ್ನು ಸ್ಮರಿಸಿದರು.
ಹುಬ್ಬಳ್ಳಿ ಮತ್ತು ಧಾರವಾಡ ಗಂಡು ಮೆಟ್ಟಿನ ನೆಲ. ಇಲ್ಲಿ ಹಲವು ಸಿದ್ಧಾರೂಢರು, ಶೈಕ್ಷಣಿಕ ಕ್ರಾಂತಿ ಮಾಡಿದ ಮೂರು ಸಾವಿರ ಮಠದ ಶ್ರೀಗಳಂತ ಹಲವು ದೈವಾಂಶ ಸಂಭೂತರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ವೀರರು ಜನಿಸಿದ ನಾಡಿದು.
ಧಾರವಾಡದಲ್ಲಿ IIT, ರಾಯಚೂರಿನಲ್ಲಿ IIIT ನಿರ್ಮಾಣ ಕಾಮಗಾರಿಗೆ ಮೋದಿ ಚಾಲನೆ
ಸಾಹಿತ್ಯ ಸಂಗೀತ ದಿಗ್ಗಜರಾದ ದ.ರಾ. ಬೇಂದ್ರೆ ಮತ್ತು ಗಂಗೂಬಾಯಿ ಹಾನಗಲ್ ಸೇರಿ ಇನ್ನೂ ಹಲವರು ಬದುಕಿಬಾಳಿದ ಈ ನಾಡಿಗೆ ಬಂದದ್ದಕ್ಕೆ ರೋಮಾಂಚನವಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ