ಬಾದಾಮಿಯಲ್ಲಿ ಬಿರಿಯಾನಿ ಪೊಲಿಟಿಕ್ಸ್: ಸಿದ್ದು, ಜಮೀರ್ ಕೂಡಿ ಉಂಡರು!

By Web DeskFirst Published Feb 10, 2019, 6:48 PM IST
Highlights

ಲೋಕಸಭಾ ಚುನಾವಣೆಗೂ ಮುನ್ನ ಡಿನ್ನರ್ ಪೊಲಿಟಿಕ್ಸ್| ಸಿದ್ದು ನೇತೃತ್ವದಲ್ಲಿ ಜಮೀರ್ ಜನರ ಓಲೈಕೆ| ಸಿದ್ದರಾಮಯ್ಯ ಗೆಲ್ಲಿಸಿದ ಅಭಿಮಾನಕ್ಕಾಗಿ ಅಲ್ಪಸಂಖ್ಯಾತರಿಗೆ ಬಿರಿಯಾನಿ ಭೋಜನ| ಬಾದಾಮಿ ಅಂಜುಮನ್ ಸಂಸ್ಥೆಗೆ 50 ಲಕ್ಷ ವೈಯಕ್ತಿಕ ಹಣ ನೀಡಿದ ಸಚಿವ ಜಮೀರ್ ಅಹ್ಮದ್| ಪಾರ್ಶ್ವವಾಯು ಪೀಡಿತನಿಗೆ ಸ್ಥಳದಲ್ಲೇ 50 ಸಾವಿರ ಹಣ ನೀಡಿ ಮಾನವೀಯತೆ ಮೆರೆದ ಜಮೀರ್| ನಾನು ಸೇವಕ, ನಿಮ್ಮ ಗುಲಾಮ ಕೆಲ್ಸ ಮಾಡೋದಷ್ಟೇ ನನ್ನ ಗುರಿ ಎಂದ ಸಚಿವ ಜಮೀರ್‌ ಅಹ್ಮದ್| ಜೆಡಿಎಸ್‌ನಿಂದ 8 ಜನ ನಾಯಕರನ್ನ ಕರೆತಂದದ್ದನ್ನ ಸ್ಪಷ್ಟಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಫೆ.10): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅಖಾಡ ಜೋರಾಗಿರೋ ಬೆನ್ನಲ್ಲೆ ಜನ್ರನ್ನ ಓಲೈಸೋಕೆ ಒಂದಿಲ್ಲೊಂದು ತಂತ್ರಗಳು ನಡೆಯುತ್ತಿರೋ ಮಧ್ಯೆಯೇ ಸಿದ್ದರಾಮಯ್ಯರನ್ನ ಬಾದಾಮಿಯಲ್ಲಿ ಗೆಲ್ಲಿಸಿದ ಪ್ರಯುಕ್ತ ಮಾತು ಕೊಟ್ಟಂತೆ ಅಲ್ಪಸಂಖ್ಯಾತರಿಗೆ ಬಿರಿಯಾನಿ ಊಟ ಹಾಕಿಸೋ ಮೂಲಕ ಸಚಿವ ಜಮೀರ್ ಅಹ್ಮದ ಸಿದ್ದರಾಮಯ್ಯ ಮತಕ್ಷೇತ್ರದಲ್ಲಿ ಡಿನ್ನರ ಪೊಲಿಟಿಕ್ಸ್ ನಡೆಸಿದ್ರು. 

ಇಂತಹವೊಂದು ದೃಶ್ಯಗಳು ಕಂಡು ಬಂದಿದ್ದು ಮಾಜಿ ಸಿಎಂ ಸಿದ್ದರಾಮಯ್ಯನವರ ಮತಕ್ಷೇತ್ರ ಬಾದಾಮಿಯಲ್ಲಿ. ಈ ಹಿಂದೆ ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದಾಗ ಪ್ರಚಾರಕ್ಕೆಂದು ಬಂದಿದ್ದ ಜಮೀರ್ ಅಹ್ಮದ ಕ್ಷೇತ್ರದ ಅಲ್ಪಸಂಖ್ಯಾತರಲ್ಲಿ ಮನವಿ ಮಾಡಿ, ಸಿದ್ದರಾಮಯ್ಯನವರನ್ನ ಗೆಲ್ಲಿಸಿ ಕೊಡಿ, ನಿಮಗಾಗಿ ಕೆಲ್ಸ ಮಾಡುತ್ತೇನೆ, ಕ್ಷೇತ್ರದ ಜನ್ರಿಗೆ ಬಿರಿಯಾನಿ ಭೋಜನ ಮಾಡಸ್ತೇನೆ ಎಂದಿದ್ರು.

"

ಆದ್ರೆ ಇದೀಗ ಲೋಕಸಭಾ ಚುನಾವಣೆಗೂ ಮುನ್ನ ಜಮೀರ್ ಅಹ್ಮದ ಬಾದಾಮಿಯಲ್ಲಿ ಬೃಹತ್ ಸಮಾರಂಭ ಹಮ್ಮಿಕೊಂಡು ಸ್ಥಳೀಯ ಅಂಜುಮನ್ ಸಂಸ್ಥೆಗೆ 50 ಲಕ್ಷ ರೂಪಾಯಿ ವೈಯಕ್ತಿಕವಾಗಿ ಹಣ ನೀಡಿ, ಕ್ಷೇತ್ರದ ಅಲ್ಪಸಂಖ್ಯಾತ ಜನ್ರಿಗೆ ಬಿರಿಯಾನಿ ಭೋಜನ ಮಾಡಿಸಿದ್ರು. ಇನ್ನು ಜಮೀರ್ ಅಹ್ಮದ ಮಾಡಿಸಿದ್ದ ಚಿಕನ್ ಮತ್ತು ಮಟನ್ ಬಿರಿಯಾನಿ ಊಟವನ್ನ ಮಾಜಿ ಸಿಎಂ ಸಿದ್ದರಾಮಯ್ಯನವರು ಸಹ ಕಾಂಗ್ರೆಸ್ ಮುಖಂಡರೊಂದಿಗೆ ಸವಿದದ್ದು ಕಂಡು ಬಂತು. 

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್‌ನಿಂದ ಜಮೀರ್‌ನನ್ನ ಕಾಂಗ್ರೆಸ್‌ಗೆ ಕರೆತಂದಿದ್ದೇ ನಾನು, ಈಗ ಮಂತ್ರಿಯಾಗಿದ್ದಾರೆ, ಅಲ್ಪಸಂಖ್ಯಾತರಿಗೆ ಒಳಿತು ಮಾಡ್ತಿದ್ದಾರೆ, ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಅನ್ನುತ್ತಲೇ ಅತ್ತ ಇಂದು ರಾಜ್ಯಕ್ಕೆ ಆಗಮಿಸಿರೋ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.

"

ಇನ್ನು ಕಳೆದ ಎರಡು ದಿನಗಳಿಂದ ಬಾದಾಮಿ ಮತಕ್ಷೇತ್ರದಲ್ಲಿಯೇ ಇದ್ದ ಸಚಿವ ಜಮೀರ್ ಅಹ್ಮದ ಅಲ್ಪಸಂಖ್ಯಾತರ ಸಭೆಗಳನ್ನ ನಡೆಸೋ ಮೂಲಕ ಸಿದ್ದರಾಮಯ್ಯನವರ ಪ್ರಭಾವ ಇನ್ನಷ್ಟು ಹೆಚ್ಚಾಗುವಂತೆ ನೋಡಿಕೊಂಡ್ರು. ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಿರೋ ಹಿನ್ನೆಲೆಯಲ್ಲಿ ಇಂದಿನ ಅಲ್ಪಸಂಖ್ಯಾತರ ಅಭಿನಂದನಾ ಸಭೆ ಮತ್ತಷ್ಟು ಪ್ರಭಾವ ಬೀರುವಂತೆ ಆಯಿತು.

"

ಈ ಮಧ್ಯೆ ಸಿದ್ದರಾಮಯ್ಯನವರ ಕೃಪಾಕಟಾಕ್ಷದಿಂದ ನಾನು ಸಚಿವನಾಗಿದ್ದೇನೆ, ನಾನು ರಾಜ್ಯದ ಜನ್ರ ಸೇವಕ, ನಿಮ್ಮ ಗುಲಾಮ , ನಾನು ಸಚಿವನಾದ್ರೂ ಹಿಂದೂ-ಮುಸ್ಲಿಂರೊಂದಿಗೆ ಭಾವೈಕ್ಯತೆಯೊಂದಿಗೆ ಇದ್ದೇವೆ ಎನ್ನುತ್ತಾ ಬಾದಾಮಿ ಜನ್ರಿಗೆ ಕೃತಜ್ಞತೆ ಸಲ್ಲಿಸಿದ್ರು.

ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲಿ ಸಚಿವ ಜಮೀರ್ ಅಹ್ಮದ ಇನ್ನಷ್ಟು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು, ಆ ಮೂಲಕ ಸಿದ್ದರಾಮಯ್ಯನವರಿಗೆ ಇನ್ನಷ್ಟು ಬೆಂಬಲಿಸಿ ಸ್ವಾಮಿನಿಷ್ಠೆ ತೋರಿಸಲು ಮುಂದಾದ್ರು. ಅದೇನೆ ಇರಲಿ ಇಷ್ಟಕ್ಕೂ ಇನ್ಯಾವ ಸಚಿವರುಗಳು ಬಂದು ಸಿದ್ದರಾಮಯ್ಯವನರ ಕ್ಷೇತ್ರದಲ್ಲಿ ಬೆಂಬಲಿಸೋಕೆ ಬರ್ತಾರೆ ಅಂತ ಕಾದು ನೋಡಬೇಕಿದೆ.

 

click me!