ರಾಜ್ಯದಲ್ಲಿ ಮಳೆ ಕೊರತೆ: ಮೋಡ ಬಿತ್ತನೆಗೆ ಸರ್ಕಾರದಿಂದ ಅನುಮತಿ

By Govindaraj SFirst Published Jul 12, 2023, 2:38 PM IST
Highlights

ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದ್ದು, ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಖಾಸಗಿಯಾಗಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದೆ.

ಬೆಂಗಳೂರು (ಜು.12): ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದ್ದು, ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಖಾಸಗಿಯಾಗಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದೆ. ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ನಡೆಯಲಿದೆ. 

ಪ್ರಕಾಶ್ ಕೋಳಿವಾಡಗೆ ಸೇರಿದ PKK ಎಂಬ ಎನ್‌ಜಿಓನಿಂದ ಮೋಡ ಬಿತ್ತನೆಗೆ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯಿಂದ ಅನುಮತಿ ಸಹ ಪಡೆದುಕೊಳ್ಳಲಾಗಿದೆ. ಇನ್ನು ಕೇಂದ್ರ ವಿಮಾನಯಾನ ಇಲಾಖೆಯ ಅನುಮತಿ ಪಡೆದುಕೊಳ್ಳಲು NGO ಟೀಂ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಪರ್ಮಿಷನ್ ಸಿಕ್ಕ ಬಳಿಕ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ, ಬಹುತೇಕ ಈ ತಿಂಗಳಲ್ಲೇ ನಡೆಯಲಿದೆ. 

ಅರಣ್ಯದಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಯುವತಿಯ ರಕ್ಷಣೆ

ಮಳೆ ಕೊರೆತೆ ಇದೆ ಎಂದು IMD ಹೇಳಿದೆ. ಹಿಂದೆಯೂ ನಮ್ಮ ಜಿಲ್ಲೆಯಲ್ಲಿ ನಾವು ಮೋಡ ಬಿತ್ತನೆ ಮಾಡಲಾಗಿತ್ತು. ಮೋಡ ಬಿತ್ತನೆಯಿಂದ ಮಳೆಯಾಗಿದೆ. ಇದು ನಾನು ಹೇಳುತ್ತಿಲ್ಲ ಮೋಡ ಬಿತ್ತನೆಯಿಂದ ಮಳೆಯಾಗಲಿದೆ ಎಂದ ವಿಜ್ಞಾನಿಗಳೇ ಹೇಳಿದ್ದಾರೆ. ನಮ್ಮ ಜಿಲ್ಲೆಯ ರೈತರಿಗಾಗಿ ನಾವು ಖಾಸಗಿಯಾಗಿ ಮೋಡ ಬಿತ್ತನೆಯನ್ನ ಮಾಡ್ತಿದ್ದೇವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಶಾಸಕ ಪ್ರಕಾಶ್ ಕೋಳಿವಾಡ ತಿಳಿಸಿದ್ದಾರೆ.

ಇಳೆಯ ಹಸುರಿಗಾಗಿ ಮೋಡ ಬಿತ್ತನೆಗೆ ಇದು ಸಕಾಲ: ಮಳೆ ಕೊರತೆಯಿಂದ ನದಿ, ಹಳ್ಳ-ಕೊಳ್ಳ, ಕೆರೆ ಕಟ್ಟೆಗಳ ಒಡಲು ಬರಿದಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕುಡಿವ ನೀರಿನ ಹಾಹಾಕಾರ ಮುಗಿಲು ಮುಟ್ಟುವ ಸಾಧ್ಯತೆಯೂ ಇದೆ. ಮೋಡಗಳನ್ನು ನಿಲ್ಲಿಸಿ ಮಳೆ ಸುರಿಸಲು ಮೋಡಬಿತ್ತನೆ ಮಾಡಲು ರೈತಾಪಿ ವರ್ಗದಿಂದ ಒತ್ತಾಯ ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದ ಮಲಪ್ರಭಾ, ಘಟಪ್ರಭಾ, ವರದಾ, ಧರ್ಮಾ, ಕುಮದ್ವತಿ, ಕೃಷ್ಣೆಯ ಒಡಲು ಕೂಡ ಬರಿದಾಗುತ್ತಿದೆ. ಈ ನದಿಗಳನ್ನು ನೆಚ್ಚಿಕೊಂಡಿದೆ ಈ ಪ್ರದೇಶ. ಇವು ಬರಿದಾಗುತ್ತಿರುವುದು ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. 

ಕೆರೆ- ಕಟ್ಟೆ, ಹಳ್ಳ - ಕೊಳ್ಳಗಳೆಲ್ಲ ಬರಿದಾಗಿ ಆಟದ ಮೈದಾನದಂತಾಗುತ್ತಿವೆ. ಮುಂಗಾರು ಮಳೆ ಸುರಿಯಲಿಲ್ಲ. ಬಿತ್ತನೆಯಾಗಿದ್ದು ಶೇ.20ರಷ್ಟುಮಾತ್ರ. ಜುಲೈ ಮೊದಲ ವಾರದಲ್ಲಿ ಅಲ್ಪ ಸ್ವಲ್ಪ ಮಳೆ ಸುರಿದಿದೆಯಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಸುರಿಯುತ್ತಿಲ್ಲ. ಆಗಾಗ ಒಂದೊಂದು ಝಲಕ್‌ನಂತೆ ಕಣ್ಣೀರು ಹನಿ ಉದುರದಂತೆ ಮಳೆ ಸುರಿಯುತ್ತಿದೆ. ಇದರಿಂದ ನೆಲ ಕೂಡ ಪೂರ್ಣವಾಗಿ ತಂಪಾಗುತ್ತಿಲ್ಲ.ಕೆರೆಯ ನೆಲವೆಲ್ಲ ನೀರಿಲ್ಲದೇ ಬಿರುಕು ಬಿಟ್ಟಿವೆ.

30 ಕಡೆ ಇರಿದು ಹಿಂದೂ ಕಾರ್ಯಕರ್ತನ ಕೊಲೆ: ಸಿ.ಟಿ.ರವಿ

ದನಕರುಗಳಿಗೆ ಸಮಸ್ಯೆ: ಧಾರವಾಡ ಜಿಲ್ಲೆಯಲ್ಲೇ 99 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. 34 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ ಕೆರೆಗಳಲ್ಲಿ ಶೇ.25ರಷ್ಟುಮಾತ್ರ ನೀರಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೊಂದು ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟುಬಿಗಡಾಯಿಸಲಿದೆ. ಮುಂಬರುವ ದಿನಗಳಲ್ಲಿ ದನಕರುಗಳಿಗೆ ಕುಡಿವ ನೀರಿಗೆ ತತ್ವಾರ ಆಗುವ ಲಕ್ಷಣಗಳಿವೆ. ಮಳೆಗಾಲ ಇನ್ನು ಮುಗಿದಿಲ್ಲ. ಮೋಡಗಳು ಕಟ್ಟುತ್ತಿವೆ. ಮೋಡ ಬಿತ್ತನೆ ಮಾಡಲು ಸಾಧ್ಯವೇ? ಎಂಬುದನ್ನು ತಜ್ಞರು ಪರಿಶೀಲಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ರೈತರು ಮುಂದಾಗಿದ್ದಾರೆ.

click me!