Udupi: ಅರಣ್ಯದಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಯುವತಿಯ ರಕ್ಷಣೆ

By Govindaraj S  |  First Published Jul 12, 2023, 2:20 PM IST

ಮಾನಸಿಕವಾಗಿ ನೊಂದು ಕೊಲ್ಲೂರು ಅರಣ್ಯದಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ಮಂಗಳವಾರ ದಾಖಲಿಸಿದ್ದಾರೆ. 


ಉಡುಪಿ (ಜು.12): ಮಾನಸಿಕವಾಗಿ ನೊಂದು ಕೊಲ್ಲೂರು ಅರಣ್ಯದಲ್ಲಿ ತಿರುಗಾಡುತ್ತಿದ್ದ ಕೇರಳ ಮೂಲದ ಅಪರಿಚಿತ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರು, ರಿಕ್ಷಾ ಚಾಲಕರು ಹಾಗೂ ಪೊಲೀಸರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್‌ವಸತಿ ಕೇಂದ್ರ ಸ್ನೇಹಾಲಯಕ್ಕೆ ಮಂಗಳವಾರ ದಾಖಲಿಸಿದ್ದಾರೆ. ಯುವತಿ ತನ್ನ ಹೆಸರು ಅರ್ಚನಾ (28). ಊರು ಕೇರಳದ ಚರ್ವತ್ಕಲ್ ಎಂಬ ಅಸ್ಪಷ್ಟ ಮಾಹಿತಿ ನೀಡಿದ್ದಾಳೆ. 

ಈಕೆ ಕೊಲ್ಲೂರಿನ ಸಲಗೇರಿ ಬಳಿ ಅರಣ್ಯದಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಕೊಲ್ಲೂರು ಠಾಣೆಗೆ ಮಾಹಿತಿ ನೀಡಿದ್ದರು. ಕೊಲ್ಲೂರು ಪೊಲೀಸರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.  ಯುವತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ವಿಶು ಶೆಟ್ಟಿ ಅವರೊಂದಿಗೆ ಕೊಲ್ಲೂರು ಠಾಣಾ ಪಿಎಸ್‌ಐ ಜಯಶ್ರೀ ಹನ್ನೂರ, ಸುಧಾರಾಣಿ ಟಿ. ಹಾಗೂ ಸಿಬ್ಬಂದಿಗಳಾದ ನವೀನ್ ಮತ್ತು ಪೂರ್ಣಿಮಾ ನೆರವಾಗಿದ್ದಾರೆ. ಯುವತಿಯ ಸಂಬಂಧಿಕರ ಬಗ್ಗೆ ಹೆಚ್ಚಿನ ಮಾಹಿತಿ ಸಿಗದ ಕಾರಣ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. 

Tap to resize

Latest Videos

undefined

30 ಕಡೆ ಇರಿದು ಹಿಂದೂ ಕಾರ್ಯಕರ್ತನ ಕೊಲೆ: ಸಿ.ಟಿ.ರವಿ

ಹೀಗಾಗಿ ವಿಶು ಶೆಟ್ಟಿ ಅವರು ಯುವತಿಯ ಚಿಕಿತ್ಸೆ, ಸಾಂತ್ವನ ಹಾಗೂ ಆಶ್ರಯಕ್ಕೆ ಕೇರಳ ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರನ್ನು ಸಂಪರ್ಕಿಸಿದಾಗ ಅವರು ಯುವತಿಗೆ ಆಶ್ರಯ ನೀಡಲು ಒಪ್ಪಿದ್ದಾರೆ. ವಿಶು ಶೆಟ್ಟಿ ಅವರು ತನ್ನ ವಾಹನದಲ್ಲಿ ಯುವತಿಯನ್ನು ಸ್ನೇಹಾಲಯಕ್ಕೆ ಕರೆದೊಯ್ದು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಇರುವವರು, ವಾರೀಸುದಾರರು ಕೊಲ್ಲೂರು ಠಾಣೆ ಅಥವಾ ಮಂಜೇಶ್ವರದ ಸ್ನೇಹಾಲಯವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಸೂಚಿಸಿದ್ದಾರೆ. 

ನಡುರಾತ್ರಿ ನಡೆಯಲಾಗದ ಅಂಗವಿಕಲ ವ್ಯಕ್ತಿಯ ರಕ್ಷಣೆ, ಸಂಬಂಧಿಕರ ಪತ್ತೆಗೆ ಮನವಿ: ಉಡುಪಿಯ ಮೂಡುಬೆಟ್ಟು ಶಾಲೆಯ ಹಿಂಬದಿ ಗದ್ದೆಯ ಪ್ರದೇಶದಲ್ಲಿ ನಡೆಯಲು ಅಸಾಧ್ಯವಾದ ಗೂನು ಬೆನ್ನಿನ ಅಂಗವಿಕಲ ವ್ಯಕ್ತಿಯೊರ್ವರನ್ನು ನಡುರಾತ್ರಿ ವಿಶು ಶೆಟ್ಟಿಯವರು ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ವ್ಯಕ್ತಿಯು ತನ್ನ ಹೆಸರು ಸತ್ತಾರ್ , ತಂದೆಯ ಹೆಸರು ಸಯ್ಯದ್ ಇಬ್ರಾಹಿಂ, ಕುಂದಾಪುರದ ಅಂಕಣಕಟ್ಟೆ ಎಂಬ ಮಾಹಿತಿಯನ್ನು ಮಾತ್ರ ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ನೀಡಲು ಮಾತನಾಡಲು ಸಾಧ್ಯವಾಗುತ್ತಿಲ್ಲ.

ಉಚಿತ ಅಕ್ಕಿ ಕೊಡುವ ಪ್ರಮೇಯ ಏನಿದೆ?: ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ವ್ಯಕ್ತಿಯ ಜೇಬಿನಲ್ಲಿ ಚೀಟಿಯೊಂದರಲ್ಲಿ ಜೂಲಿಯೋ ರೆಸಿಡೆನ್ಸಿ ಅಂಕಣಕಟ್ಟೆ ಕುಂದಾಪುರ ಎಂಬ ಮಾಹಿತಿ ಇದೆ. ನಡೆಯಲಾಗದ ವ್ಯಕ್ತಿಯ ಉಡುಗೆ ತೊಡುಗೆ ಶುಭ್ರವಾಗಿದ್ದು, ರಾತ್ರಿ ಹೊತ್ತು ಬಯಲು ಪ್ರದೇಶದಲ್ಲಿ ಇರಬೇಕಾದರೆ ಯಾರೋ ತಂದು ಅವರನ್ನು ಅಲ್ಲಿ ಬಿಟ್ಟು ಹೋಗಿರಬಹುದೆಂದು ಸಾರ್ವಜನಿಕರಲ್ಲಿ ಸಂಶಯ ವ್ಯಕ್ತವಾಗಿದೆ.ಸಂಬಂಧಿಕರು ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಬೇಕಾಗಿ ಕೋರಿಕೆ. ಈ ಬಗ್ಗೆ ಮಲ್ಪೆ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ.

click me!