ಸಣ್ಣ ಜಾಗದಲ್ಲಿ 3 ನಾಯಿ, ಬೆಕ್ಕಿಗೆ ಆಶ್ರಯ: ಬೆಂಗಳೂರಿನ ಬಡ ಚಮ್ಮಾರ ತಾತಗೆ ಮಿಡಿದ ಜನ!

Published : Sep 19, 2024, 10:36 AM IST
ಸಣ್ಣ ಜಾಗದಲ್ಲಿ 3 ನಾಯಿ, ಬೆಕ್ಕಿಗೆ ಆಶ್ರಯ: ಬೆಂಗಳೂರಿನ ಬಡ ಚಮ್ಮಾರ ತಾತಗೆ ಮಿಡಿದ ಜನ!

ಸಾರಾಂಶ

ರಾಮಯ್ಯ ತಾತಗೆ ಕುಳಿತುಕೊಳ್ಳಲು ಮಾತ್ರ ಇರುವ ಚಮ್ಮಾರ ಶಾಪ್. ಈ ಶಾಪ್ ಒಳಗೆ 3 ನಾಯಿ, ಬೆಕ್ಕಿಗೆ ಆಶ್ರಯ, ಬೀದಿ ನಾಯಿಗಳ ಆರೈಕೆಯಲ್ಲಿ ಜೀವನ ಸಾಗಿಸುತ್ತಿರುವ ರಾಮಯ್ಯ ಅಂಕಲ್‌ ಪ್ರೀತಿಯ ವಿಡಿಯೋ ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರು ಸಹಾಯ ಹಸ್ತ ಚಾಚಿದ್ದಾರೆ.   

ಬೆಂಗಳೂರು(ಸೆ.19) ಬೆಂಗಳೂರು ಚಮ್ಮಾರ ರಾಮಯ್ಯ ತಾತ ಇದೀಗ ದೇಶಾದ್ಯಂತ ಸದ್ದು ಮಾಡಿದ್ದಾರೆ. ರಾಮಯ್ಯ ಅಂಕಲ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ತಾನು ಕುಳಿತುಕೊಳ್ಳುವಷ್ಟು ಮಾತ್ರ ದೊಡ್ಡದಿರುವ ಶಾಪ್‌ನಲ್ಲಿ ರಾಮಯ್ಯ ತಾತ  3 ನಾಯಿ, ಬೆಕ್ಕಿಗೆ ಆಶ್ರಯ ನೀಡಿದ್ದಾರೆ. ಇನ್ನು ಪಕ್ಕದ ಬೀದಿ ನಾಯಿಗಳು ಪ್ರತಿ ದಿನ ಆಹಾರ ನೀಡುತ್ತಾರೆ. ಆರೈಕೆ ಮಾಡುತ್ತಾರೆ. ಗಾಯಗೊಂಡಿದ್ದರೆ ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರು ರಾಮಯ್ಯ ತಾತಗೆ ನೆರವು ನೀಡುವುದಾಗಿ ಮುಂದೆ ಬಂದಿದ್ದಾರೆ. ಬಳಿಕ ಫಂಡ್ ರೈಸ್ ಮಾಡಿ ರಾಮಯ್ಯ ಅಂಕಲ್‌ಗೆ ತಲುಪಿಸಿದ ವಿಶೇಷ ಘಟನೆ ನಡೆದಿದೆ. 

ವೈಟ್‌ಫೀಲ್ಡ್‌ನ ಡೆಕಥ್ಲಾನ್ ಬಳಿ ಇರುವ ಸಣ್ಣ ಶಾಪ್ ನಡೆಸುತ್ತಿರುವ ರಾಮಯ್ಯ ತಾತ ಕುರಿತ ವಿಡಿಯೋವನ್ನು  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು.ಲಿಯಾ ದಿ ಗೋಲ್ಡನ್ ಇಂಡಿ ಅನ್ನೋ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿತ್ತು. ಇದೇ ವೇಳೆ ರಾಮಯ್ಯ ತಾತನ ಹೃದಯ ವೈಶಾಲ್ಯತೆ ಕುರಿತು ಹೇಳಲಾಗಿತ್ತು. ಚಪ್ಪಲಿಗಳ ತುಂಡು, ಹಳೇ ಶೂ ಸೇರಿದಂತೆ ಪಾಲೀಶ್‌ಗಳು ತುಂಬಿದ ಸಣ್ಣ ಶಾಪ್. ಈ ಶಾಪ್‌ನಿಂದ ಬರುವ ಆದಾಯದಲ್ಲಿ ರಾಮಯ್ಯ ತಾತ ದಿನ ದೂಡುವುದೇ ಕಷ್ಟ. ಆದರೆ ರಾಮಯ್ಯ ತಾತ ಬರುವ ಆದಾಯದಲ್ಲಿ ತನ್ನ ಸಣ್ಣ ಶಾಪ್ ಒಳಗೆ 3 ನಾಯಿಗೆ ಆಶ್ರಮಯ ನೀಡಿದ್ದಾರೆ. ಮತ್ತೊಂದು ಬೆಕ್ಕಿನ ಮರಿ ರಾಮಯ್ಯ ತಾತ ಜೊತೆ ಆಟವಾಡುತ್ತಿದೆ.  ಶ್ರೀಮಂತಿಕೆ ನೋಡಬೇಕು ಎಂದರೆ ನೀವು ವೈಟ್‌ಫೀಲ್ಡ್ ಕಡೆ ಹೋಗುವುದಿದ್ದರೆ ಈ ಸಣ್ಣ ಶಾಪ್‌ಗೆ ಒಮ್ಮೆ ಇಣುಕಿ ನೋಡಿ. ಪ್ರೀತಿ, ಆರೈಕೆ, ಹೃದವೈಶಾಲ್ಯತೆ ಜೊತೆಗೆ ಹೃದಯ ಶ್ರೀಮಂತಿಕೆ ಇಲ್ಲಿ ನೀವು ನೋಡುತ್ತೀರಿ. ರಾಮಯ್ಯ ತಾತನ ಬಳಿ ದಾನ ಮಾಡುವಷ್ಟು, ತನ್ನಲ್ಲಿದ್ದಿದ್ದನ್ನು ಹಂಚಿಕೊಳ್ಳುವಷ್ಟು ಏನೂ ಇಲ್ಲ. ಆದರೆ ರಾಮಯ್ಯ ತಾತ ತನ್ನಲ್ಲಿ ಇರುವುದೆಲ್ಲವನ್ನೂ ಹಂಚಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದರು.

ಬಡವನಾದರೇನು ಪ್ರಿಯೆ.... ಬಾನಡಿಗಳ ಹೊಟ್ಟೆ ತುಂಬಿಸುವ ಸಹೃದಯಿ: ವಿಡಿಯೋ ವೈರಲ್ 

ರಾಮಯ್ಯ ತಾತಾ ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಾರೆ. ಆರೈಕೆ ಮಾಡುತ್ತಾರೆ, ಪ್ರತಿ ದಿನ ಆಹಾರ ನೀಡುತ್ತಾರೆ. ಅವುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ. ಇದು ಪ್ರತಿ ದಿನ ರಾಮಯ್ಯ ತಾತ ಪ್ರೀತಿಯಿಂದ ಮಾಡುವ ಕೆಲಸ. ಈ ವಿಡಿಯೋ ನೋಡಿದ ನೆಟ್ಟಿಗರು ರಾಮಯ್ಯ ತಾತ ಹೃದಯ ವೈಶಾಲ್ಯತೆಯನ್ನು ಮೆಚ್ಚಿಕೊಂಡಿದ್ದಾರೆ.  ಜೊತೆಗೆ ತಾವು ರಾಮಯ್ಯ ತಾತಗೆ ನೆರವು ನೀಡಬೇಕು ಎಂದು ಹಲವರು ಮುಂದೆ ಬಂದಿದ್ದಾರೆ. 

 

 

ಹಲವರ ಬೇಡಿಕೆ ಬಳಿಕ ಲಿಯಾ ದಿ ಗೋಲ್ಡನ್ ಇಂಡಿ ಸೋಶಿಯಲ್ ಮೀಡಿಯಾ ಖಾತೆ ರಾಮಯ್ಯ ತಾತಗೆ ಫಂಡ್ ರೈಸ್ ಮಾಡಲು ಮುಂದಾಯಿತು. ಹಲವರು ರಾಮಯ್ಯ ತಾತಗೆ ನೆರವುನ ಹಸ್ತ ಚಾಚಿದ್ದಾರೆ. ಕಳೆದ ವಾರ ಸಂಗ್ರಹಿಸಿದ ಹಣವನ್ನು ರಾಮಯ್ಯ ತಾತಾಗೆ ನೀಡಿದ್ದಾರೆ. ನಾಯಿಗಳ ಆರೈಕೆ ಸೇರಿದಂತೆ ಇತರ ಖರ್ಚಿಗೆ ಈ ಹಣ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜನರ ನೆರವಿಗೆ ರಾಮಯ್ಯ ತಾತ ಭಾವುಕರಾದ ಕ್ಷಣ ನೆರವು ನೀಡಿದವರಿಗೆ ಸಾರ್ಥಕ ಭಾವ ತರಿಸಿತ್ತು.

ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಲಕ್ಷ ಲಕ್ಷ ಡಿಮ್ಯಾಂಡ್! 10 ಲಕ್ಷ ಕೊಡ್ತಿವಿ ಅಂದ್ರೂ ಕೊಡದ ಚಮ್ಮಾರ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌