ಲೆಬನಾನ್‌ನಲ್ಲಿ ನಡೆದ ಪೇಜರ್ ಬ್ಲಾಸ್ಟ್ ನಂತರ, ಸೈಬರ್ ತಜ್ಞ ಡಾ. ಅನಂತ ಪ್ರಭು ಅವರು ಭಾರತವು ಇದೇ ರೀತಿಯ ದಾಳಿಗಳಿಗೆ ಗುರಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳ ಮೂಲಕ ಈ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ಮಂಗಳೂರು (ಸೆ.18): ಈಗಾಗಲೇ ಲೆಬನಾನ್ ಮಾರುಕಟ್ಟೆಯೊಂದರಲ್ಲಿ ಪೇಜರ್ ಬ್ಲಾಸ್ಟ ಆಗುವ ಮೂಲಕ ಅಲ್ಲಿದ್ದ ಸುಮಾರು 11ಉಗ್ರರು ಬಲಿಯಾಗಿದ್ದಾರೆ. ಹಲವರು ಗಾಯಗೊಂಡು ನರಳಾಡಿದ್ದಾರೆ. ಇದೇ ರೀತಿಯಲ್ಲಿ ಭಾರತದ ಮೇಲೂ ದಾಳಿ ಮಾಡಲು ವಿದೇಶಗಳು ಸಂಚು ರೂಪಿಸಲಿದ್ದು, ದೇಶಕ್ಕೆ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳಿಂದ ಅಪಾಯವಿದೆ ಎಂದು ಸೈಬರ್ ತಜ್ಞ ಡಾ.ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಲೆಬನಾನ್ ದೇಶದಲ್ಲಿ ನಡೆದ ಪೇಜರ್ ಬ್ಲಾಸ್ಟ್ ಬೆನ್ನಲ್ಲೇ ಭಾರತಕ್ಕೂ ಆನ್ ಲೈನ್ ಯುದ್ದದ ಅತಂಕ ಎದುರಾಗಿದೆ. ಶತ್ರು ರಾಷ್ಟ್ರಗಳಿಂದ ಭಾರತದ ವಿರುದ್ದವೂ ಅನ್ ಲೈನ್ ಯುದ್ದದ ಅಪಾಯವಿದೆ. ವಿದೇಶದಿಂದ ರಫ್ತಾಗುವ ಇಲೆಕ್ಟ್ರಾನಿಕ್ ವಸ್ತುಗಳೇ ಭಾರತಕ್ಕೆ ಡೇಂಜರ್ ಆಗಲಿವೆ. ವಿದೇಶಿ ಇಲೆಕ್ಟ್ರಾನಿಕ್ ವಸ್ತುಗಳ ಅಪಾಯವಿದೆ. ಭಾರತಕ್ಕೆ ವಿದೇಶದಿಂದ ರಫ್ತಾಗುವ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳ ವಿಶೇಷ ಸ್ಕ್ಯಾನಿಂಗ್ ಮಾಡುವಂತೆ ಕೇಂದ್ರ ಗೃಹ ಇಲಾಖೆಗೆ ಸೈಬರ್ ತಜ್ಞ ಡಾ.ಅನಂತ ಪ್ರಭು ಮನವಿ ಮಾಡಿದ್ದಾರೆ.
undefined
ಲೆಬನಾನ್, ಸಿರಿಯಾ ದೇಶದಲ್ಲಿ ಹಿಜ್ಜುಲ್ಲಾ ಉಗ್ರರ ಪೇಜರ್‌ಗಳು ಏಕಕಾಲಕ್ಕೆ ಬ್ಲಾಸ್ಟ್: ಏನಿದು ಪೇಜರ್ ದಾಳಿ?
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಡಾ.ಅನಂತ ಪ್ರಭು ಅವರು, ಹಿಜ್ಬುಲ್ ಫೆಬ್ರವರಿಯಿಂದಲೂ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿತ್ತು. ಬದಲಾಗಿ ಅಲ್ಲಿ ಪೇಜರ್‌ಗಳನ್ನು ಸಂವಹನಕ್ಕಾಗಿ ಬಳಸುತ್ತಿತ್ತು. Gold Apollo, ಟೈವಾನ್ ಆಧಾರಿತ ಕಂಪನಿ ವಿಶ್ವದ ಪ್ರಮುಖ ಪೇಜರ್ ತಯಾರಕರಲ್ಲೊಂದಾಗಿದೆ. ಲಿಥಿಯಮ್-ಅಯಾನ್ ಬ್ಯಾಟರಿಗಳೊಂದಿಗೆ ಕೆಲಸ ಮಾಡುತ್ತಿದ್ದ ಈ ಪೇಜರ್‌ಗಳನ್ನೇ ಬಳಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಚಿಪ್ ಮೂಲಕ ಅಳವಡಿಸಲಾದ ಸ್ಫೋಟಕ Kiska 3 ಅನ್ನು ಒಳಗೊಂಡ ಬ್ಯಾಟರಿಗಳನ್ನು ತಯಾರಿಸಿ ಬಳಸಲಾಗಿದೆ. ಇದೇ ರೀತಿಯ ದಾಳಿಯ ಆತಂಕ ಭಾರತ ದೇಶಕ್ಕೂ ಇದೆ. ಚೀನಾ ಸೇರಿ ಬೇರೆ ರಾಷ್ಟ್ರಗಳಿಂದ ಭಾರತಕ್ಕೂ ಇಲೆಕ್ಟ್ರಾನಿಕ್ ವಸ್ತುಗಳ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಭಾರತಕ್ಕೂ ಇದೇ ರೀತಿ ಪೇಜರ್ ಬ್ಲಾಸ್ಟ್ ಮೂಲಕ ಶತ್ರುಗಳು ಆನ್ ಲೈನ್ ದಾಳಿ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳ ಸೆಕ್ಯೂರಿಟಿ ಚೆಕ್ ಹೆಚ್ಚಿಸಲು ಮನವಿ ಮಾಡಲಾಗಿದೆ. ಈ ಬಗ್ಗೆವ ಭಾರತ ಸರ್ಕಾರದ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಕೆ ಮಾಡಿದ್ದೇನೆ. ಭಾರತಕ್ಕೆ ಆಮದು ಮಾಡುವ ಪ್ರತಿ ಉತ್ಪನ್ನವನ್ನು ತಪಾಸಣೆ ಮಾಡುವ ಸಮಿತಿ ರಚಿಸುವಂತೆಯೂ ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ದಾಳಿಗಳನ್ನು ಇನ್ನೂ ಹೆಚ್ಚಿನ ಮಾರಕ ರೀತಿಯಲ್ಲಿ ಮಾಡಬಹುದಾಗಿದ್ದು, ಕೂಡಲೇ ದೇಶದ ಗೃಹ ಸಚಿವಾಲಯ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಟೊಮೆಟೋ ಸಾಲ ತೀರಿಸಲು 50 ಲ್ಯಾಪ್‌ಟಾಪ್ ಕದ್ದ ಬೆಂಗಳೂರಿನ ಟೆಕ್ಕಿ!
ಪೇಜರ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?
ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗೆ ಮೊಬೈಲ್ ಹಾಗೂ ಸ್ಮಾರ್ಟ್ ಫೋನ್ ಬರುವ ಮುನ್ನ ಪೇಜರ್‌ಗಳು ಹೆಚ್ಚು ಬಳಕೆಯಲ್ಲಿದ್ದವು. ಈ ಪೇಜರ್‌ಗಳನ್ನ ಮೊದಲು ಮೊಬೈಲ್ ಮಾದರಿಯ ಸಂವಹನ ಉಪಕರಣ ಎಂದು ಹೇಳಲಾಗುತ್ತಿತ್ತು. ಇದು ಸಣ್ಣ ಡಬ್ಬಿಯ ಆಕಾರದ ಈ ಎಲೆಕ್ಟ್ರಾನಿಕ್ ಉಪಕರಣ ಆಗಿದ್ದು, ಇದು ಬಳಕೆದಾರರಿಗೆ ಮೆಸೇಜ್ ಕಳಿಸಲು ಹಾಗೂ ಸ್ವೀಕರಿಸಲು ನೆರವಾಗುತ್ತದೆ. ತರಂಗಾಂತರಗಳ ಆಧಾರದ ಮೇಲೆ ಪೇಜರ್‌ಗಳು ಮೆಸೇಜ್ ಕಳಿಸಲು ಹಾಗೂ ಸಂದೇಶ ಸ್ವೀಕರಿಸುತ್ತವೆ. ಈ ಮೆಸೇಜ್‌ಗಳಲ್ಲಿ ಅಕ್ಷರ, ಸಂಖ್ಯೆ ಎರಡನ್ನೂ ರವಾನಿಸಬಹುದು. ಸ್ಮಾರ್ಟ್ ಫೋನ್ ಯುಗದಲ್ಲಿ ಪೇಜರ್ ತಂತ್ರಜ್ಞಾನ ತುಂಬಾನೇ ಹಳೆಯದಾದರೂ ತುಂಬಾ ಹಳೆಯದು. ಅಮೆರಿಕಾದಲ್ಲಿ 1921ರಲ್ಲಿ ಮೊದಲ ಬಾರಿಗೆ ಡೆಟ್ರಾಯಿಟ್ ಪೊಲೀಸ್ ಇಲಾಖೆ ಪೇಜರ್ ಬಳಸಿತ್ತು. ಈ ಹಳೆಯ ತಂತ್ರಜ್ಞಾನದ ಪೇಜರ್ ಅನ್ನು ಹಿಜ್ಬೊಲ್ಲಾ ಉಗ್ರರು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.