ಪಾರ್ಲಿಮೆಂಟ್ ಭದ್ರತಾ ಲೋಪ‌ ; ಸಂಸದ ಪ್ರತಾಪ ಸಿಂಹ ವಿರುದ್ಧ ಎಚ್‌ ವಿಶ್ವನಾಥ ವಾಗ್ದಾಳಿ!

By Ravi JanekalFirst Published Dec 14, 2023, 12:55 PM IST
Highlights

ನಿನ್ನೆ ಸಂಸತ್ತಿನಲ್ಲಿ ಆಗಿರುವ ಭದ್ರತಾ ಲೋಪ ಭಾರೀ ದೊಡ್ಡ ವಿಚಾರ. ಇದೇ ದೇಶದ ಭದ್ರತೆಗೆ ಸವಾಲು ಹಾಕುವಂತದ್ದು. ಸಂಸತ್ತಿನೊಳಗೆ ಹೋಗಲು ಯಾರಿಗೆ ಪ್ರವೇಶ ನೀಡಬೇಕು, ನೀಡಬಾರದು ಎಂಬುದು ತಿಳಿದಿರಬೇಕು ಎಂದು ಮೈಸೂರು ಸಂಸದ ಪ್ರತಾಪ ಸಿಂಹ ವಿರುದ್ಧ  ಹೆಚ್‌.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಬೆಂಗಳೂರು (ಡಿ.14) ನಿನ್ನೆ ಸಂಸತ್ತಿನಲ್ಲಿ ಆಗಿರುವ ಭದ್ರತಾ ಲೋಪ ಭಾರೀ ದೊಡ್ಡ ವಿಚಾರ. ಇದೇ ದೇಶದ ಭದ್ರತೆಗೆ ಸವಾಲು ಹಾಕುವಂತದ್ದು. ಸಂಸತ್ತಿನೊಳಗೆ ಹೋಗಲು ಯಾರಿಗೆ ಪ್ರವೇಶ ನೀಡಬೇಕು, ನೀಡಬಾರದು ಎಂಬುದು ತಿಳಿದಿರಬೇಕು ಎಂದು ಮೈಸೂರು ಸಂಸದ ಪ್ರತಾಪ ಸಿಂಹ ವಿರುದ್ಧ  ಹೆಚ್‌.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹ ಅಂತಹ ಹಿರಿಯ ಸದಸ್ಯರು ತಮ್ಮವರಿಗೆ ಪಾಸ್ ನೀಡಿದ್ದಾರೆ. ಈಗ ಅಲ್ಲಿ ದಾಳಿ ನಡೆಸಿರುವ ಆಗಂತುಕರು ಸಭಾಂಗಣದೊಳಗೆ ದಾಂಧಲೆ ಮಾಡಿದ್ದಾರೆ ಇದನ್ನ ಖಂಡಿಸುತ್ತೇನೆ. ಪ್ರತಾಪ ಸಿಂಹರನ್ನ ಕೂಡಲೆ ವಿಚಾರಣೆಗೊಳಪಡಿಸಬೇಕು, ಪ್ರಕರಣದ ತನಿಖೆ ಮುಗಿಯುವವರೆಗೆ ಸಂಸದ ಸ್ಥಾನ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

Latest Videos

ಸಂಸತ್ ಒಳಗೆ ಯಾರೂ ಬೇಕಾದ್ರೂ ಪ್ರವೇಶಿಸಬಹುದು ಸೆಕ್ಯೂರಿಟಿ ಅಷ್ಟರಮಟ್ಟಿಗೆ ಕಡಿಮೆ ಇದೆ. ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳಿಲ್ಲ, ಯಜಮಾನರಿದ್ದಾರೆ. ಹಾಗಾಗಿ ಪ್ರತಾಪ ಸಿಂಹರ ಸಂಸದ ಸ್ಥಾನ ರದ್ದುಪಡಿಸುವಂತೆ ಪುನಃ ಒತ್ತಾಯಿಸಿದರು.

1929ರಲ್ಲೇ ಬಾಂಬ್ ಹಾಕಿದ್ದ ಭಗತ್ ಸಿಂಗ್: 2001ರಲ್ಲಿ ಸಂಸತ್ ಮೇಲೆ ದಾಳಿ ನಡೆದಾಗ ಏನಾಗಿತ್ತು..?

 ಲೋಕಸಭೆ(Lok Sabha) ಕಲಾಪ ನಡೆಯುತ್ತಿದ್ದಾಗಲೇ ಇಬ್ಬರು ವ್ಯಕ್ತಿಗಳಿಂದ ದಾಳಿ ನಡೆಸಲಾಗಿತ್ತು. ಅದರಲ್ಲಿ ಮನೋರಂಜನ್ ಎಂಬ ವ್ಯಕ್ತಿ ಮೈಸೂರಿನ ವಿಜಯನಗರ ನಿವಾಸಿಯಾಗಿದ್ದು,  ಸಂಸದ ಪ್ರತಾಪ ಸಿಂಹರಿಂದ ಪಾಸ್ ಪಡೆದು ಒಳಪ್ರವೇಶಿಸಿದ್ದಾನೆ. ಪ್ಲಾನ್ ಮಾಡಿಕೊಂಡೇ ಸಂಸತ್ತಿನೊಳಗೆ ಬಂದಿದ್ದ ಆಗಂತುಕರು.   ಮೊದಲು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಬಳಿಕ ಅಲ್ಲಿಂದ ಕಲಾಪ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ಕೆಲ ಕಾಲ ಸಂಸತ್ತಿನೊಳಗೆ ಆತಂಕ ಸೃಷ್ಟಿಯಾಗಿತ್ತು. ಬಳಿಕ ದಾಳಿಕೋರನನ್ನು ಸಂಸದರು ಮತ್ತು ಲೋಕಸಭಾ ಸಿಬ್ಬಂದಿ ಸುತ್ತುವರಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ದೇಶಾದ್ಯಂತ ಸುದ್ದಿಯಾಗ್ತಿದೆ. ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ಮೇಲೆ ಈ ವಿಚಾರವನ್ನಿಟ್ಟುಕೊಂಡು ಮುಗಿಬಿದ್ದು ದಾಳಿ ನಡೆಸುತ್ತಿದ್ದಾರೆ. ಪ್ರತಾಪ ಸಿಂಹರ ಸಂಸದ ಸ್ಥಾನ ರದ್ದುಪಡಿಸುವಂತೆ ಆಗ್ರಹಿಸುತ್ತಿದ್ದಾರೆ.

ಪಾರ್ಲಿಮೆಂಟ್‌ ಭದ್ರತಾ ಲೋಪಕ್ಕೆ ರಾಜ್ಯದ ನಂಟು: ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್‌ಗೆ ಸಿಕ್ಕಿತಾ ಪಾಸ್ ?

click me!