Panchamasali Reservation; ಬೊಮ್ಮಾಯಿ ಮುಂದೆ 3 ಆಯ್ಕೆಯಿಟ್ಟ ಜಯ ಮೃತ್ಯುಂಜಯ ಸ್ವಾಮೀಜಿ

By Suvarna NewsFirst Published Jun 8, 2022, 1:37 AM IST
Highlights

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ ಎಂದಿರುವ ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಸಿಎಂಗೆ 3 ಆಯ್ಕೆ ನೀಡಿದ್ದಾರೆ.

ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್  

ಹಾವೇರಿ ( ಜೂನ್ 8): ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ  ನಿರ್ಧಾರ ಹೇಳಬೇಕು ಎಂದು ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ.

ಮೊದಲು ಕೂಡಲ ಸಂಗಮನಾಥನ ಸನ್ನಿದಿಯಲ್ಲಿ 14 ದಿನ ಸತ್ಯಾಗ್ರಹ ಮಾಡಿದ್ದೆವು.ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಚಳುವಳಿ ಮಾಡಿದೆವು.ಬರುವ ಜೂನ್ 27 ನೇ ತಾರೀಖು ಶಿಗ್ಗಾವಿಯಲ್ಲಿರುವ ಸಿಎಂ ಮನೆ ಮುಂದೆ ಧರಣಿ ಮಾಡಲು ನಿರ್ಧರಿಸಲಾಗಿದೆ.ಅಂದು ಏನೇ ಅನಾಹುತಗಳಾದರೂ ಸರ್ಕಾರವೇ ಹೊಣೆ ಅಂತ ನಾವು ಮೊದಲೇ ತಿಳಿಸುತ್ತಿದ್ದೇವೆ. ಈಗಾಗಲೇ ಸಿಎಂ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದಿದ್ದೇವೆ.

ಗೃಹ ಕಚೇರಿ ಕೃಷ್ಣಾದಲ್ಲಿ ಒಂದು ಸಭೆ ಕರೆದು ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಕುರಿತು ಸ್ಪಷ್ಟ ತೀರ್ಮಾನ‌ ಕೈಗೊಳ್ಳಬೇಕು. ಮುಖ್ಯಮಂತ್ರಿಗಳಿಗೆ ಮೂರೇ ಆಪ್ಷನ್ ಕೊಡ್ತೀವಿ.ಒಂದು ಮೀಸಲಾತಿ ಕೊಟ್ಟು ಪಂಚಮಸಾಲಿ ಸಮುದಾಯದ ಋಣ ತೀರಿಸಬೇಕು.ಅಥವಾ ಮೀಸಲಾತಿ  ಈ ದಿನ ಕೊಡ್ತೀವಿ ಅಂತ ಘೋಷಣೆ ಮಾಡಬೇಕು.

KUD ANNUAL CONVOCATION; ಎಂ.ಎ ಪತ್ರಿಕೋದ್ಯಮದಲ್ಲಿ ಸುಜಾತ ಜೋಡಳ್ಳಿಗೆ 9 ಚಿನ್ನದ ಪದಕ!

ಇಲ್ಲದಿದ್ದರೆ ಮೀಸಲಾತಿ ಕೊಡೋಕೆ ಆಗಲ್ಲ ನೀವು ಹೀಗೇ ನಮಗೆ ಆಶೀರ್ವಾದ ಮಾಡಬೇಕು‌,  ನಾನು ಹೀಗೆ ಬೆಳೆದುಕೊಂಡು ಹೋಗ್ತೀನಿ ಅಂತಾನಾದರೂ ಹೇಳಬೇಕು ಎಂದು ಆಗ್ರಹಿಸಿದರು. ನಾವು ಯಾವುದೇ ಕಾರಣಕ್ಕೂ ಸಿಎಂಗೆ ಮುಜುಗರ ಮಾಡಲ್ಲ. ನಮ್ಮ ಸಮುದಾಯದ ಅನೇಕ ವ್ಯಕ್ತಿಗಳಿಗೆ ಆಮಿಷ ತೋರಿಸಲಾಗ್ತಿದೆ. ಆಮಿಷ ತೋರಿಸಿ ಮೀಸಲಾತಿಗಾಗಿ ಧರಣಿ ಕೂರೋದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೂರಬೇಕು ಅಂತ ಹೇಳಸ್ತಿದ್ದಾರೆ. 

ಹಾಗಾದರೆ ಕೂಡಲ ಸಂಗಮದಲ್ಲಿ ಧರಣಿ ಕುಳಿತಾಗ ಯಾಕೆ ಮಾತಾಡಲಿಲ್ಲ?ಫ್ರೀಡಂ ಪಾರ್ಕ್ ನಲ್ಲಿ ಧರಣಿ ಕುಳಿತಾಗ ಯಾಕೆ ಮಾತಾಡಲಿಲ್ಲ?ಹಾಗಾದರೆ ಈಗ ಮುಖ್ಯಮಂತ್ರಿಗಳ ಮನೆ ಮುಂದೆ ಬಿಟ್ಟು ಯಡಿಯೂರಪ್ಪನವರ ಮನೆ ಮುಂದೆ ಧರಣಿ ಮಾಡೋಕೆ ಆಗುತ್ತಾ? ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದರು. 

ಬೆಂಗಳೂರಿನಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ಬೊಮ್ಮಾಯಿಯವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.ಶಿಗ್ಗಾವಿಯಲ್ಲಿರೋದು ನಮ್ಮ ಮನೆಯಲ್ಲ, ಅದು ಗುರುಗಳ ಮನೆ.ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು ಎಂದಿದ್ದಾರೆ.ನಾವೂ ಕೂಡಾ ನಿಮ್ಮನ್ನು ನಮ್ಮ ಮುಖ್ಯಮಂತ್ರಿ ಅಂತ ತಿಳಿದುಕೊಂಡಿದ್ದೇವೆ.ನಾವೇನು ನಿಮ್ಮ ಮನೆಗೆ ಪ್ರಸಾದ ಮಾಡಲು ಹೋಗುತ್ತಿಲ್ಲ.ಮೀಸಲಾತಿ ಕೇಳುವ ಸಂಬಂಧ ನಿಮ್ಮ ಮನೆ ಮುಂದೆ ಕೂರುತ್ತಿದ್ದೇವೆ.ನೀವು ನಮಗೆ ಮೀಸಲಾತಿ ಎಂಬ ಪ್ರಸಾದ ಕೊಡಿ ಎಂದರು.

DAVANGERE: ಕೊಚ್ಚಿಹೋದ ಕಾಲುವೆಯಿಂದ 15 ಕೋಟಿ ಭತ್ತ ಬೆಳೆ ಒಣಗುವ ಭೀತಿ

ಜೂನ್ 11 ನೇ ತಾರೀಖಿನಿಂದ  ಪಂಚಮಸಾಲಿ ಪ್ರತಿಜ್ಞಾ ಅಭಿಯಾನ:  ಜೂನ್ 11 ನೇ ತಾರೀಖಿನಿಂದ ಹಾವೇರಿ ಜಿಲ್ಲೆಯ ಎಲ್ಲಾ ಜಿ.ಪಂ ಕ್ಷೇತ್ರಗಳಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಕೈಗೊಳ್ಳುತ್ತೇವೆ.

ಜೂನ್ 22 ರಿಂದ 27 ರವರೆಗೆ ಶಿಗ್ಗಾವಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಂಚರಿಸಿ ಜನರ ಸಹಕಾರ ಕೋರುತ್ತೇವೆ.ಬಹಳ ಶಾಂತಿಯುತವಾಗಿಯೇ ಧರಣಿ ಮಾಡುತ್ತೇವೆ.ಸದ್ಯದಲ್ಲೇ ಸಿಎಂ  ಮೀಟಿಂಗ್ ಮಾಡಲಿ, ಆದರೂ ನಮ್ಮ ಹೋರಾಟ ಅಂತೂ ನಡೆದೇ ನಡೆಯುತ್ತೆ. ಹಿಂದೆ ಮೀಸಲಾತಿ ವಿಚಾರವಾಗಿ ಧರಣಿ ಕುಳಿತಾಗ ಯಡಿಯೂರಪ್ಪ ಮಾತು ಕೊಟ್ಟಿದ್ರು. ಹೀಗಾಗಿ ನಾವು ಧರಣಿ ತಾತ್ಕಾಲಿಕವಾಗಿ ಹಿಂಪಡೆದಿದ್ದೆವು. ಅಂದು ಸಚಿವರಾಗಿದ್ದ ಬೊಮ್ಮಾಯಿವರು, ಹಾಗೂ ಸಿ.ಸಿ ಪಾಟೀಲ್ ನಮ್ಮ ಮನವೊಲಿಸಿದ್ದರು.

ಆದರೆ ಈಗ ನಾವು ಶಿಗ್ಗಾವಿಯಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ.ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಲಿ.ಆ ಮೇಲೆ ನಮ್ಮ ಮುಖಂಡರು ಏನು ಹೇಳ್ತಾರೋ ಅದಕ್ಕೆ ನಾವು ಬದ್ಧರಿದ್ದೇವೆ.ಸಿಎಂ ಇಂದು ಸ್ಪಂದಿಸಿರೋದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಸಿಎಂ ಮೊದಲು ಸ್ಪಷ್ಟವಾಗಿ ಹೇಳಲಿ.ಸಿಎಂ ಬೊಮ್ಮಾಯಿ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಾನು ಕೇವಲ ಈ ಚಳುವಳಿಯ ಚಾಲಕ ಮಾತ್ರ.ನನ್ನ ಹಿಂದೆ ಇಡೀ ಸಮಾಜ ನಿಂತಿದೆ.ಎಂ.ಎಲ್. ಎ ಗಳ ಸಭೆ ಕರೆಯಬೇಕು ಅಂತ ನಾನು ಹೇಳಲ್ಲ. ಈ ಹೋರಾಟದ ಚಳುವಳಿಗಾರರನ್ನು ಕರೆದು ಸಿಎಂ ಮಾತಾಡಲಿ. ಎಂ.ಎಲ್ ಎ ಗಳೇನು ಇದಕ್ಕೆ ದುಡಿದವರೇನು ಅಲ್ಲ. ಎಂ.ಎಲ್ ಎ ಗಳು ನಮಗೆ ಅಪ್ರತ್ಯಕ್ಷ ಬೆಂಬಲ ನೀಡಿದ್ದಾರೆ ಅಷ್ಟೆ.ಸಿಎಂ ಇಂದು ಸ್ಪಂದನೆ ಮಾಡಿದ್ದಕ್ಕೆ ನಾನು ಸ್ವಾಗತ ಮಾಡ್ತೀನಿ. ಆದರೆ ಸ್ಪಂದನೆ ಘೋಷಣೆ ಆಗುವ ಹಾಗೆ ಸಿಎಂ ಗಟ್ಟಿ ನಿರ್ಧಾರ ಕೈಗೊಳ್ಳಲಿ ಎಂದರು. 
 

click me!