ಪರಿಸರ ಪ್ರೇಮಿ ’ಕೇರ್ ಮೋರ್ ’ ಸಂಸ್ಥೆ ಯಿಂದ ಶಾಲಾ ಮಕ್ಕಳಿಗಾಗಿ ಹೊಸ ಕ್ಯಾಂಪೇನ್

By Sharath Sharma  |  First Published Jun 7, 2022, 5:30 PM IST

ಸೌಲಭ್ಯ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಕೇರ್ ಮೋರ್ ಫೌಂಡೇಷನ್‌ ವತಿಯಿಂದ ವಿನೂತನ  ಅಭಿಯಾನ ಆರಂಭಿಸಲಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ ನಡೆಯಲಿದೆ.


ಜೂನ್ ತಿಂಗಳೆಂದರೆ ಬೇಸಿಗೆ ರಜೆ ಕಳೆದು ಶಾಲೆ ಶುರುವಾಗ ಮಾಸ.  ಮಕ್ಕಳೆಲ್ಲ ಖುಷಿಯಾಗಿ ಸಮವಸ್ತ್ರ ಧರಿಸಿ, ಬ್ಯಾಗ್ ಹಿಡಿದು ಶಾಲೆಗೆ ತೆರಳುವ ಸಮಯ. ಆದರೆ  ಅದೆಷ್ಟೋ ಮಕ್ಕಳಿಗೆ ಮನೆಯಲ್ಲಿನ ಬಡತನ   ಇಂಥಾ  ಎಷ್ಟೋ ಖುಷಿಯನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ ನೀಡೋದೇ ಇಲ್ಲ. ಆದ್ರೆ ಶಿಕ್ಷಣ ಎಲ್ಲ ಮಕ್ಕಳ ಹಕ್ಕಾಗಿದ್ದರೂ ಅದರ ಫಲ ಪಡೆಯದೇ ಇರುವ ಹಲವು ಮಕ್ಕಳಿದ್ದಾರೆ. ಇಂಥಾ ಸೌಲಭ್ಯ ವಂಚಿತ ಮಕ್ಕಳಿಗೆ ಆಸರೆಯಾಗುವಂಥಾ ಕಾರ್ಯಕ್ರಮವನ್ನು ‘ಕೇರ್ ಮೋರ್’  ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾಗಿ ಬಡ ಮಕ್ಕಳಿಗೆ ನೆರವಾಗುವ, ಅವರ ಕಲಿಕೆಗೆ ಸಹಾಯವಾಗುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ ‘ಕೇರ್ ಮೋರ್’  ಫೌಂಡೇಶನ್ ಈಗಾಗಲೇ ಹೆಸರುವಾಸಿಯಾಗಿದ್ದು, ಇದೊಂದು ಪರಿಸರ ಪ್ರೇಮಿಗಳ ತಂಡದ ಮೂಲಕ ಪ್ರಕೃತಿಗೆ ಪೂರಕವಾದಂಥಾ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಮೆಚ್ಚುಗೆ ಗಳಿಸಿಕೊಂಡಿರುವ ಸಂಸ್ಥೆ. ಇದರಲ್ಲಿ ಬೆಂಗಳೂರಿನ ಸಿನಿಮಾ ಕಲಾವಿದರು, ಉದ್ಯಮಿಗಳು, ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಾನಾ ವರ್ಗಗಳ ಯುವ ಜನರು ಭಾಗಿಯಾಗಿದ್ದಾರೆ. ಯುವ ನಟಿ ಸಂಯುಕ್ತ ಹೊರನಾಡು ಕೂಡ ಈ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು ಹಲವರಿಗೆ ನೆರವಾಗುತ್ತಾ, ಯುವ ಜನತೆಗೆ ಪ್ರೋತ್ಸಾಹ ನೀಡ್ತಿದ್ದಾರೆ. 

Tap to resize

Latest Videos

ಸಮರ್ಥವಾದ ಪರಿಸರ ಪ್ರೇಮಿ ಬಳಗವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಾರ್ಯಕ್ರಮಗಳ ಮೂಲಕ ಪರಿಸರ ಜಾಗೃತಿ ಮೂಡಿಸುವ ಧ್ಯೇಯವನ್ನು ಈ ಸಂಸ್ಥೆ ಹೊಂದಿದ್ದು,  ಇದೀಗ ಮರು ಬಳಕೆ ಮರು ಉಪಯೋಗ ಎಂಬ ಕಾನ್ಸೆಪ್ಟಿನಲ್ಲಿ ಬಡ ಮಕ್ಕಳಿಗೆ ನೆರವಾಗುವಂಥಾ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ಹಾಗಾದರೆ ಇಂಥಾದ್ದೊಂದು ಸಾರ್ಥಕ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದರೆ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಮನೆಯಲ್ಲಿ ಬಳಸದೇ ಹಾಗೇ ಇಟ್ಟಿರುವ ಮಕ್ಕಳ ಶಾಲಾ ಬ್ಯಾಗುಗಳಿದ್ದರೆ ಅವುಗಳನ್ನು ಸದರಿ ಫೌಂಡೇಷನ್ನಿಗೆ ದಾನ ಮಾಡುವಂತೆ ವಿನಂತಿಸಲಾಗಿದೆ. ದಿನಾಂಕ 05-07-2022 ರಿಂದ 20-06-2022ರ ವರೆಗೂ ಬ್ಯಾಗುಗಳನ್ನು ದಾನವಾಗಿ ನೀಡಲು ಅವಕಾಶವಿದೆ. ಬ್ಯಾಗ್ಗಳನ್ನು ದಾನ ಮಾಡಲಿಚ್ಚಿಸುವವರು CareMore Foundation @Caremorefdn ಅನ್ನು ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ತೆರೆದು ಮಾಹಿತಿ ಪಡೆದುಕೊಳ್ಳಬಹುದು...

ಈ ವಿನೂತನ ಅಭಿಯಾನದಲ್ಲಿ  ಎಲ್ಲರೂ ಪಾಲ್ಗೊಂಡು ತಂತಮ್ಮ ಪರಿಚಯಸ್ಥರು, ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬಸ್ಥರು ಎಲ್ಲರನ್ನೂ ಪಾಲ್ಗೊಳ್ಳಲು ಪ್ರೇರೇಪಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ‘ಕೇರ್ ಮೋರ್’  ಫೌಂಡೇಶನ್ ಕಡೆಯಿಂದ ವಿನಂತಿಸಿಕೊಳ್ಳಲಾಗಿದೆ. 

ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚೆಚ್ಚು ಯುವ ಸಮೂಹವನ್ನು ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಿದೆ.  ಅದರ ಭಾಗವಾಗ ಈ ಬ್ಯಾಗ್ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕೆಂಬುದು ಈ ಸಂಸ್ಥೆಯ ಆಶಯವಾಗಿದೆ.

click me!