ಪಾಕಿಸ್ತಾನ್ ಹಾಗೂ ನಾಸಿರ್‌ಸಾಬ್ ಜಿಂದಾಬಾದ್ ಕೂಗಿದವನು ಒಬ್ಬನೇ ವ್ಯಕ್ತಿ: ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಮಾಹಿತಿ

By Sathish Kumar KH  |  First Published Mar 4, 2024, 5:04 PM IST

ವಿಧಾನಸೌಧದಲ್ಲಿ ಪಾಕಿಸ್ತಾನ್ ಹಾಗೂ ನಾಸಿರ್‌ಸಾಬ್ ಜಿಂದಾಬಾದ್ ಎಂದು ಕೂಗಿದವನು ಒಬ್ಬನೇ ವ್ಯಕ್ತಿಯಾಗಿದ್ದಾನೆ ಎಂದು ಎಫ್ಎಸ್ಎಲ್ ತಜ್ಞ ಫಣೀಂದ್ರ ಅವರು ಮಾಹಿತಿ ಬಹಿರಂಗ ಮಾಡಿದ್ದಾರೆ.


ಬೆಂಗಳೂರು (ಮಾ.04): ರಾಜ್ಯಸಭಾ ಚುನಾವಣಾ ಫಲಿತಾಂಶ ದಿನದಂದು ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಅವರ ವಿಜಯೋತ್ಸವದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಮತ್ತು ನಾಸಿರ್‌ಸಾಬ್ ಜಿಂದಾಬಾದ್ ಎಂದು ಎರಡೂ ಘೋಷಣೆ ಕೂಗಿರುವುದು ಎಫ್‌ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಈ ಎರಡೂ ಘೋಷಣೆಯನ್ನು ಒಬ್ಬನೇ ವ್ಯಕ್ತಿ ಕೂಗಿದ್ದಾನೆ ಎಂದು ಎಫ್ಎಸ್ಎಲ್ ತಜ್ಞ ಫಣೀಂದ್ರ ಅವರು ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆಯ ವೇಳೆ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಬೆಂಬಲಿಗನೊಬ್ಬ ವಿಧಾನಸೌಧದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದನು. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರೆ ಕಾಂಗ್ರೆಸ್‌ನ ಹಲವು ನಾಯಕರು ಹಾಗೂ ಸ್ವತಃ ರಾಜ್ಯಸಭಾ ಸದ್ಯ ನಾಸಿರ್ ಹುಸೇನ್ ಇದು ಸುಳ್ಳು ಸುದ್ದಿ. ವಿಡಿಯೋ ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಹೇಳಿದ್ದರು. ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯಾದ ನಂತರ ಎಫ್‌ಎಸ್‌ಲ್‌ ವರದಿಗೆ ಕಳುಹಿಸಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ ಎಂದು ದಿನಗಳನ್ನು ಮುಂದೂಡುತ್ತಿದೆ.

Tap to resize

Latest Videos

ಶಕ್ತಿಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ; FSL Report ಬಂದ ನಂತರ ಕ್ರಮ: ಗೃಹ ಸಚಿವ ಪರಮೇಶ್ವರ್

ಆದರೆ, ಬಿಜೆಪಿ ಖಾಸಗಿಯಾಗಿ ಎಫ್‌ಎಸ್ಎಲ್ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿರುವುದು ಸ್ಪಷ್ಟವಾಗಿ ಗೋಚರವಾಗಿದೆ ಎಂದು ತಿಳಿದುಬಂದಿದೆ. ಇನ್ನು ಎಫ್‌ಎಸ್‌ಎಲ್ ವರದಿ ತಜ್ಞ ಫಣೀಂದ್ರ ಅವರೂ ಈ ಬಗ್ಗೆ ಮಾತನಾಡಿ, ಪಾಕಿಸ್ತಾನ ಜಿಂದಾಬಾದ್ ಹಾಗೂ ನಾಸಿರ್‌ಸಾಬ್ ಜಿಂದಾಬಾದ್ ಎಂದು ಎರಡೂ ಘೋಷಣೆ ಕೂಗಲಾಗಿದೆ. ಈ ಎರಡೂ ಘೋಷಣೆಯನ್ನೂ ಒಬ್ಬನೇ ವ್ಯಕ್ತಿ ಕೂಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಫಣೀಂದ್ರ ಅವರು, ರಿಪೋರ್ಟ್ ನಲ್ಲಿ ಫೈಂಡಿಂಗ್ ಪ್ರಕಾರ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಸ್ಪಷ್ಟವಾಗಿದೆ. ಅನೆಕ್ಷರ್ ಹಾಗೂ ಪೆನ್ಡ್ರೈವ್ ಕವರಿಂಗ್ ಲೆಟರ್ ಇದೆ. ಇದರಲ್ಲಿ ಕೇವಲ ರಿಪೋರ್ಟ್ ಮಾತ್ರ ರಿಲೀಸ್ ಆಗಿದೆ. ಒಟ್ಟು 9 ಸೆಂಕೆಡ್ ಇದೆ. ಅದರಲ್ಲಿ 7 ಸೆಂಕೆಂಡ್ ಕಂಟೆಂಟ್ ಇದೆ. ಅದರಲ್ಲಿ 7 ಸೆಂಕೆಂಡ್‌ನಲ್ಲಿ ಪಾಕಿಸ್ತಾನ್ ಅಂತ ಕೂಗಿರುವುದು ಇದೆ. ಇನ್ನು ಎಕ್ಸಾಮಿನೇಷನ್ ಮಾಡುವಾಗ ಎಷ್ಟು ಧ್ವನಿಯನ್ನ ಎಳೆಯಲಾಗಿದೆ ಎಂದು ಅದರಲ್ಲಿ ತಿಳಿದು ಬರತ್ತದೆ. ಕೆಲವು ಅಕ್ಷರಗಳಿಗೆ ಇಂಥದ್ದೇ ಫ್ರೀಕ್ವೆವ್ಸಿ ಇರಬೇಕು ಅಂತ ಇದೆ.  ಅದರಂತೆ ನಾವು ಎಕ್ಸಾಮಿನೇಷನ್‌ಗೆ ಒಳಪಡಿಸಿದ್ದೆವು. ಮೊದಲು ಏನು ಹೇಳಿದ್ದಾರೆ, ಎರಡನೇ ಬಾರಿಗೆ ಏನು ಹೇಳ್ತಾರೆ ಅನ್ನೊದು ಅದರಲ್ಲಿ ಇದೆ. ಆ ವ್ಯಕ್ತಿ ಹೇಳಿರುವುದು ಓವರ್ ಲ್ಯಾಪ್ ಆಗಿದೆ. ಪಾಕಿಸ್ತಾನ್ ಮತ್ತು ನಾಸೀರ್ ಸಾಬ್ ಎರಡೂ ಒಬ್ಬರೇ ಹೇಳಿರೋದು. ಫೋರೆನ್ಸಿಕ್ ಸೈನ್ಸ್ ಅಂದ್ರೆ ಅದರಲ್ಲಿ ಏನು ಇದೆಯೋ ಅದೆ ಬರಬೇಕಿದೆ ಎಂದು ಹೇಳಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ; ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದ ಸಂಸದ ಡಿಕೆ ಸುರೇಶ್! 

click me!