ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಫೆ ಪುನಾರಂಭವನ್ನು ಮಾ.8ರ ಬದಲು ಮುಂದೂಡಿಕೆ ಮಾಡಲಾಗಿದೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಮಾ.04): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಫೆ ಪುನಾರಂಭವನ್ನು ಮಾ.8ರ ಬದಲು ಮುಂದೂಡಿಕೆ ಮಾಡಲಾಗಿದೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಮಾ.1ರಂದು ರಾಮೇಶವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದ ತನಿಖೆ ಮುಗಿದಿಲ್ಲ. ಮುಖ್ಯವಾಗಿ ಬಾಂಬ್ ಇಟ್ಟುಹೋದ ಆರೋಪಿಯೂ ಸಿಕ್ಕಿಲ್ಲ. ಇಂಥದ್ದರಲ್ಲಿ ರಾಮೇಶ್ವರಂ ಕೆಫೆಯನ್ನು ಮಾ.8ರಂದು ಪುನಾರಂಭಿಸಲಾಗುವುದು ಎಂದು ಮಾಲೀಕರು ಹೇಳಿದ್ದರು. ಆದರೆ, ಈಗ ತನಿಖೆ ಬಾಕಿ ಇರುವ ಹಿನ್ನೆಲೆಯಲ್ಲಿ ಕೆಫೆ ಪುನಾರಂಭಕ್ಕೆ ಅನುಮತಿ ಕೊಡುವುದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕೆಫೆ ಪುನಾರಂಭ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
undefined
ಮಾ.8ರಂದು ರಾಮೇಶ್ವರಂ ಕೆಫೆ ಮರು ಆರಂಭ; ಬಾಂಬ್ ಸಿಡಿಸಿದರೆ ನಾವು ಬೆದರೊಲ್ಲ ಎಂದ ಸ್ಥಳೀಯರು!
ನಗರದ ಬ್ರೂಕ್ ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮೇಶ್ವರಂ ಕೆಫೆ ಮರು ಆರಂಭಕ್ಕೆ ಪೊಲೀಸ್ ಇಲಾಖೆಯಿಂದ ಪರ್ಮಿಷನ್ ಕೊಟ್ಟಿಲ್ಲ. ಬಾಂಬ್ ಸ್ಫೋಟದ ಕೇಸ್ ತನಿಖೆ ಬಾಕಿಯಿರುವ ಹಿನ್ನೆಲೆಯಲ್ಲಿ ಹೋಟೆಲ್ ಪುನಾರಂಭ ಮಾಡಲು ಅವಕಾಶ ನೀಡುತ್ತಿಲ್ಲ. ಬಾಂಬ್ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಕೆಲವು ಸಾಕ್ಷಿಗಳಿಗಾಗಿ ಇಲ್ಲಿನ ಸ್ಥಳದ ಪರಿಶೀಲನೆ ಅಗತ್ಯ ಬೀಳಬಹುದು. ಈ ಹಿನ್ನೆಲೆಯಲ್ಲಿ ಕೆಫೆ ಪುನಾರಂಭ ಮಾಡುವುದು ಬೇಡವೆಂದು ಪೊಲೀಸ್ ಇಲಾಖೆಯು ಮಾಲೀಕರಿಗೆ ಸೂಚನೆ ನೀಡಿದೆ.
ರಾಮೇಶ್ವರಂ ಕೆಫೆ ಮಾಲೀಕರು ನಾವು ಕೆಫೆಯನ್ನು ಮಾ.8ರ ಶುಕ್ರವಾರ (ಶಿವರಾತ್ರಿ ದಿನ) ಮರು ಆರಂಭ ಮಾಡುವುದಾಗಿ ತಿಳಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಸಾವಿರಾರು ಜನರು ನಾವು ರಾಮೇಶ್ವರಂ ಕೆಫೆ ಪರವಾಗಿ ನಿಲ್ಲುತ್ತೇವೆ. ಬಾಂಬ್ ಬೆದರಿಕೆಗೆ ನಾವು ಬೆದರೋದಿಲ್ಲ ಎಂಬ ಸಂದೇಶವನ್ನು ಹಾಕಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ರಾಮೇಶ್ವರಂ ಕೆಫೆಯ ಅಧಿಕೃತ ಪೇಜ್ ಗಳಲ್ಲಿ ಕೂಡ ಮರು ಉದ್ಘಾಟನೆಯ ದಿನಾಂಕದ ಬಗ್ಗೆ ಪೋಸ್ಟ್ ಮಾಡಲಾಗಿತ್ತು. ಆದರೆ, ಈಗ ತನಿಖೆ ಇನ್ನೂ ಪ್ರಗತಿಯಲ್ಲಿ ಇರೋ ಕಾರಣ ಮರು ಆರಂಭಕ್ಕೆ ಅನುಮತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
Rameshwaram Cafe Blast ಆತುರದಲ್ಲಿ ಬಂದು 45 ಸೆಕೆಂಡ್ ನಲ್ಲಿ ಬಾಂಬರ್!
ರಾಮೇಶ್ವರಂ ಕೆಫೆ ಸೋಷಿಯಲ್ ಮೀಡಿಯಾದಲ್ಲಿ ತಂಡದಿಂದ ನಾವು ಕೆಫೆಯನ್ನು ಇನ್ನೂ ಸ್ವಲ್ಪ ದಿನಗಳವರೆಗೆ ಮರು ಉದ್ಘಾಟನೆ ಮಾಡುವುದಿಲ್ಲ. ಇನ್ನೂ ಸ್ವಲ್ಪ ದಿನ ಕೆಫೆಯನ್ನು ಕ್ಲೋಸ್ ಮಾಡಿರಲಾಗುತ್ತದೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಜೊತೆಗೆ, ಈ ಹಿಂದೆ ಮಾ.8ರಂದು ಕೆಫೆ ರೀ ಓಪನ್ ಬಗ್ಗೆ ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ. ಕೆಲವು ದಿನಗಳಲ್ಲಿ ಮತ್ತೆ ರೀ ಓಪನ್ ಮಾಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಯಾವಾಗ ರೀ ಓಪನ್ ಮಾಡೋದು ಎನ್ನುವ ದಿನಾಂಕವನ್ನು ಹಂಚಿಕೊಂಡಿಲ್ಲ.