ಪಾದರಾಯನಪುರ ಮುಖ್ಯರಸ್ತೆ ವಿಸ್ತರಣೆ ಶೀಘ್ರ : ವಿ.ಸೋಮಣ್ಣ

By Kannadaprabha NewsFirst Published Dec 6, 2022, 7:18 AM IST
Highlights

 ನಗರದ ಪಾದರಾಯನಪುರ ಮುಖ್ಯರಸ್ತೆ ವಿಸ್ತರಣೆ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದು, .240 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬೆಂಗಳೂರು (ಡಿ.6) : ನಗರದ ಪಾದರಾಯನಪುರ ಮುಖ್ಯರಸ್ತೆ ವಿಸ್ತರಣೆ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದು, .240 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಪಾದರಾಯನಪುರ ರಸ್ತೆ ಅಗಲೀಕರಣ ಸಂಬಂಧ ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್‌, ಬಿಬಿಎಂಪಿ ಎಂಜಿನಿಯರ್‌, ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿರ್ಸಿ ವೃತ್ತದಿಂದ (ಬಿನ್ನಿಮಿಲ್‌ ಟ್ಯಾಂಕ್‌ಬಂಡ್‌ ರಸ್ತೆ) ವಿಜಯನಗರ ಪೈಪ್‌ಲೈನ್‌ವರೆಗೆ ಒಟ್ಟು 1.8 ಕಿ.ಮೀ. ಉದ್ದದ ಪಾದರಾಯನಪುರ ಮುಖ್ಯರಸ್ತೆಯನ್ನ ಅಗಲೀಕರಣ ಮಾಡಲಾಗುವುದು. ಸ್ಥಳೀಯವಾಗಿ ಕೆಲವು ಸಣ್ಣಪುಟ್ಟಸಮಸ್ಯೆಗಳಿದ್ದವು. ಅವುಗಳನ್ನು ಚರ್ಚಿಸಿ ಬಗೆಹರಿಸಲಾಗಿದೆ. ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ ಅದಷ್ಟುಬೇಗ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.

ಪಾದರಾಯನಪುರ ರಸ್ತೆಗಳ ಮರುನಾಮಕರಣ ರದ್ದುಗೊಳಿಸಲು ಮುಂದಾದ ಬಿಬಿಎಂಪಿ

ನಾನಾ ಕಾರಣಗಳಿಂದಾಗಿ ಕಾಮಗಾರಿ ಮುಂದೂಡಿಕೆ ಮಾಡಲಾಗುತ್ತಿತ್ತು. ಕಾಮಗಾರಿಯಲ್ಲಿ ಶೇ.50ರಷ್ಟುಸರ್ಕಾರಿ ಜಾಗ ಇದ್ದು, ಉಳಿದದ್ದು ಸಾರ್ವಜನಿಕರ ಸ್ಥಳವಾಗಿದೆ. ರಸ್ತೆ ಅಗಲೀಕರಣ ವಿಚಾರವಾಗಿ 2017ನೇ ಸಾಲಿನಲ್ಲಿ ಟಿಡಿಆರ್‌ ನೀಡಲು ಸ್ಥಳೀಯರನ್ನು ಒಪ್ಪಿಸಲಾಗಿತ್ತು. ಆದರೆ, ಟಿಡಿಆರ್‌ ಬಗ್ಗೆ ಜನರಲ್ಲಿ ಸಾಕಷ್ಟುಗೊಂದಲಗಳಿರುವುದರಿಂದ ಸುಪ್ರೀಂಕೋರ್ಚ್‌ ಸೂಚನೆ ಮೇರೆಗೆ ಪ್ರಸ್ತುತ ಇರುವ ದರದಂತೆ ಸ್ಥಳೀಯರಿಗೆ ಪರಿಹಾರ ಮೊತ್ತವನ್ನು ನೀಡಲಾಗುವುದು. ಇನ್ನು, ಯಾವುದೇ ಧಾರ್ಮಿಕ ಸ್ಥಳಗಳಿಗೆ ಧಕ್ಕೆಯಾಗದಂತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ದೇವಸ್ಥಾನ, ಮಸೀದಿ, ಚಚ್‌ರ್‍ ಯಾವುದನ್ನೂ ತೆರವು ಮಾಡುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

click me!