ಅಧಿಕ ಭಾರ ಹೊತ್ತು ಹೊಗೆ ಉಗುಳುತ್ತಿರುವ ಬಂಡಿಗಳು; ಕಣ್ಮುಚ್ಚಿ ಕುಳಿತ ಆರ್‌ಟಿಒ ಅಧಿಕಾರಿಗಳು

By Kannadaprabha News  |  First Published Jul 13, 2023, 6:00 AM IST

ಹೆಲ್ಮೆಟ್‌ ಇಲ್ಲ, ತ್ರಿಬಲ್‌ ರೈಡ್‌ ಎಂದು ಪೊಲೀಸರು ದಂಡ, ಕೇಸು ಹಾಕುವ ಕೆಲಸ ಅಲ್ಲಲ್ಲಿ ಮಾಡುತ್ತಿದ್ದಾರೆ. ಆದರೆ, ಗುಜರಿಗೆ ಸೇರಬೇಕಾದ ವಾಹನಗಳ ಹೊಗೆ ಬಂಡಿಯಂತೆ ಉಗುಳಿತ್ತಿದ್ದರೂ ಆರ್‌ಟಿಒ ಅ​ಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.


ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ (ಜು.13) : ಹೆಲ್ಮೆಟ್‌ ಇಲ್ಲ, ತ್ರಿಬಲ್‌ ರೈಡ್‌ ಎಂದು ಪೊಲೀಸರು ದಂಡ, ಕೇಸು ಹಾಕುವ ಕೆಲಸ ಅಲ್ಲಲ್ಲಿ ಮಾಡುತ್ತಿದ್ದಾರೆ. ಆದರೆ, ಗುಜರಿಗೆ ಸೇರಬೇಕಾದ ವಾಹನಗಳ ಹೊಗೆ ಬಂಡಿಯಂತೆ ಉಗುಳಿತ್ತಿದ್ದರೂ ಆರ್‌ಟಿಒ ಅ​ಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಒಂದೆಡೆ ಫಿಟ್ನೆಸ್‌ ಇಲ್ಲದ ವಾಹನಗಳ ಸಂಚಾರ, ಮತ್ತೊಂದೆಡೆ ಓವರ್‌ ಲೋಡ್‌, ಕಲ್ಲು ಹಾಗೂ ಕ್ರಷರ್‌ ಉತ್ಪನ್ನಗಳ ಸಾಗಾಣಿಕೆ ತಡೆಗೂ ಆರ್‌ಟಿಒ ಅಧಿಕಾರಿಗಳು ಮುಂದಾಗಿಲ್ಲ. ಇದನ್ನು ಗಮನಿಸಿದರೆ ಆರ್‌ಟಿಒ ಅಧಿಕಾರಿಗಳ ಶಾಮೀಲಾಗಿದ್ದಾರೆ.

Latest Videos

undefined

ಗುಂಡ್ಲುಪೇಟೆ-ಹಿರೀಕಾಟಿ ತನಕ ಮತ್ತು ಗುಂಡ್ಲುಪೇಟೆ-ತೆರಕಣಾಂಬಿ ಬಳಿಯ ಕ್ವಾರಿಯಿಂದ ಕ್ರಸರ್‌ಗೆ, ಕ್ರಸರ್‌ನಿಂದ ನಗರ ಪ್ರದೇಶಗಳಿಗೆ ತೆರಳುವ ಹಳೆಯ ಟಿಪ್ಪರ್‌ಗಳಿಂದ ಅಧಿಕ ವಾಯು ಮಾಲಿನ್ಯ

ಆಗುತ್ತಿದ್ದರೂ ಆರ್‌ಟಿಒ ಅಧಿಕಾರಿಗಳು ಫೀಲ್ಡಿಗಿಳಿಯದ ಕಾರಣ ಟಿಪ್ಪರ್‌ ಹಾಗೂ ಹಳೆಯ ವಾಹನಗಳ ಅರ್ಭಟ ಹೆಚ್ಚಿದೆ.

ಹೊಗೆ ಉಗುಳುವುದು ಕೇವಲ ಟಿಪ್ಪರ್‌ಗಳಲ್ಲ ಹಳೆಯ ಗೂಡ್‌್ಸ ಮತ್ತು ಪ್ಯಾಸೆಂಜರ್‌ ಆಟೋ, ಗೂಡ್‌್ಸ ಟೆಂಪೋ, ಲಾರಿಗಳು ಹೊಗೆ ಉಗುಳುವುದರಿಂದ ವಾಯು ಮಾಲಿನ್ಯ ಮಾಡುತ್ತಿವೆ. ಆದರೆ, ಪೊಲೀಸರ ಕಂಡು ಕಾಣದಂತೆ ಇದ್ದಾರೆ.

TEMPO: ಬಾಹ್ಯಾಕಾಶಕ್ಕೆ ಟೆಂಪೋ ಕಳಿಸಲಿರುವ ನಾಸಾ, ಏನಿದರ ಉಪಯೋಗ?

ಟಿಪ್ಪರ್‌ಗಳಲ್ಲಿ ಬಳಿ ಕಲ್ಲು ಹಾಗೂ ಕ್ರಷರ್ಸ್‌ ಉತ್ಪನ್ನಗಳ ಸಾಗಾಣಿಕೆಗೆ ಸ್ಥಳೀಯ ಪೊಲೀಸರ ಮೌಖಿಕ ಅನುಮತಿ ಪಡೆದು ಓವರ್‌ ಲೋಡ್‌ ಹಾಗೂ ಫಿಟ್ನೆಸ್‌ ಸರ್ಟಿಫಿಕೇಟ್‌ ಇಲ್ಲ, ಟಿಪ್ಪರ್‌ಗಳ ನಂಬರ್‌ ಪ್ಲೇಟ್‌ ಇರಲ್ಲ, ನಂಬರ್‌ ಪ್ಲೇಟ್‌ ಇದ್ರೂ ನಂಬರ್‌ ಇರಲ್ಲ. ಆದರೂ, ಟಿಪ್ಪರ್‌ಗಳ ತಪಾಸಣೆ ನಡೆಸುವುದಿಲ್ಲ.

ಪೊಲೀಸರು ಮೌನ: ಗುಂಡ್ಲುಪೇಟೆ ಹಾಗೂ ಬೇಗೂರು ಸುತ್ತಮುತ್ತಲಿನ ಕ್ರಷರ್ಸ್‌ಗಳಿಂದ ಮೈಸೂರು ಹಾಗೂ ಚಾಮರಾಜನಗರ ಕಡೆಗೆ ಎಂ.ಸ್ಯಾಂಡ್‌, ಜಲ್ಲಿ ಇನ್ನಿತರ ಉತ್ಪನ್ನಗಳನ್ನು ಟಿಪ್ಪರ್‌ಗಳು 30ರಿಂದ 40 ಟನ್‌ ಹಾಗೂ ಕ್ವಾರಿಯಿಂದ ಕಲ್ಲು ಸಾಗಾಣಿಕೆ ಅದು ಬೇಗೂರು, ತೆರಕಣಾಂಬಿ ಪೊಲೀಸ್‌ ಠಾಣೆ ಮುಂದೆಯೇ ಸಂಚರಿಸುತ್ತಿವೆ.

ಗುಂಡ್ಲುಪೇಟೆ ಮೂಲಕ ಓವರ್‌ ಲೋಡ್‌ ಕಲ್ಲು, ಕ್ರಷರ್ಸ್‌ ಉತ್ಪನ್ನಗಳನ್ನು ತುಂಬಿಕೊಂಡು ಪೊಲೀಸರ ಎದುರೇ ಟಿಪ್ಪರ್‌ ಸಂಚರಿಸಿದರೂ ಸ್ಥಳೀಯ ಪೊಲೀಸ್‌ ಸಿಬ್ಬಂದಿ ತಡೆದು ಕೇಳಲು ಅವಕಾಶವಿಲ್ಲ. ಕೇಳಿದರೆ ನಿಮ್ಮ ಸಾಹೇಬರಿಗೆ ನೋಡಿದ್ದೇವೆ ಎಂದು ಹೇಳುತ್ತಾರೆಂದು ಸ್ವತಃ ಪೊಲೀಸ್‌ ಸಿಬ್ಬಂದಿ ಹೇಳಿದ್ದಾರೆ.

ಗುಂಡ್ಲುಪೇಟೆ ಮಾರ್ಗ ಹಾಗೂ ಬೇಗೂರು, ತೆರಕಣಾಂಬಿ ಠಾಣೆಯ ಮುಂದೆಯೇ ಓವರ್‌ ತುಂಬಿದ ಟಿಪ್ಪರ್‌ ಸಂಚರಿಸುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ ಎಂಬ ಮಾತಿದೆ.

ಠಾಣೆ ಮುಂದೆ ಸಿಸಿ ಕ್ಯಾಮೆರಾ ಹಾಕಿದ್ರೆ ಸತ್ಯ ಬಹಿರಂಗ !

ಗುಂಡ್ಲುಪೇಟೆ: ಬೇಗೂರು ಹಾಗೂ ತೆರಕಣಾಂಬಿ ಠಾಣೆಯ ಮುಂದೆ ಮತ್ತು ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಹಾಕಿದರೆ ಸ್ಥಳೀಯ ಪೊಲೀಸರ ಬಣ್ಣ ಬಯಲಾಗಲಿದೆ.

ಟಿಪ್ಪರ್‌ಗಳಲ್ಲಿ ಮಿತಿ ಮೀರಿದ ಭಾರ ಹಾಕಿಕೊಂಡು ಸಂಚರಿಸುತ್ತಿವೆ. ಇದನ್ನು ತಡೆಯಲು ಪೊಲೀಸರಿಂದ ಆಗದ ಕಾರಣ ಜಿಲ್ಲಾಡಳಿತ ಎಚ್ಚೆತ್ತು ಠಾಣೆ ಮುಂದೆ ಹಾಗೂ ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಹಾಕಲು ಮುಂದಾಗಲಿ ಎಂದು ಪುರಸಭೆ ಮಾಜಿ ಸದಸ್ಯ ಬಿ.ಎಂ.ಸುರೇಶ್‌ ಒತ್ತಾಯಿಸಿದ್ದಾರೆ.

 

ವಿಶ್ವದ 20 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳಿಗೆ ಸ್ಥಾನ!


ಅಧಿಕ ಭಾರದ ವಾಹನಗಳನ್ನು ತಡೆದು ಪೊಲೀಸರು ತಪಾಸಣೆಯನ್ನು ನಡೆಸುವಂತಿಲ್ಲ. ಹೊಗೆ ಉಗುಳುವ, ಫಿಟ್ನೆಸ್‌ ಇಲ್ಲದ ವಾಹನಗಳ ಮೇಲಿನ ಕ್ರಮ ಕೂಡ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸೇರಿದ್ದು, ಆರ್‌ಟಿಒ ಸಹಕಾರ ಕೇಳಿದರೆ ನಾವು ಜಂಟಿಯಾಗಿ ತಪಾಸಣೆ ನಡೆಸಬಹುದು.

-ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಚಾಮರಾಜನಗರ

ಓವರ್‌ ಲೋಡ್‌, ವಾಯು ಮಾಲಿನ್ಯ ಉಲ್ಲಂಘಿಸುವ ಟಿಪ್ಪರ್‌, ಆಟೋ ಸೇರಿದಂತೆ ಇನ್ನಿತರ ವಾಹನಗಳ ತಪಾಸಣೆಗೆ ಆರ್‌ಟಿಒ ಇನ್ಸ್‌ಪೆಕ್ಟರ್‌ಗಳ ಕೊರತೆಯಿದೆ. ಸ್ಪೆಷಲ್‌ ತಂಡ ರಚಿಸಿ ತಪಾಸಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.

-ಸುಧಾಮಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ

click me!