ಕೇಂದ್ರ ಸಚಿವ ಭಗವಂತ ಖೂಬಾಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿಮತ್ತು ಎಂಎಲ್‌ಸಿ ಅರವಿಂದ ಅರಳಿ ತಿರುಗೇಟು ನೀಡಿದ್ದಾರೆ.
ಬೀದರ್ (ಜು.13) ಕೇಂದ್ರ ಸಚಿವ ಭಗವಂತ ಖೂಬಾಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿಮತ್ತು ಎಂಎಲ್‌ಸಿ ಅರವಿಂದ ಅರಳಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿ ಈಶ್ವರ ಖಂಡ್ರೆ(Eshwar khandre) ಬಗ್ಗೆ ತೀರಾ ಹಗುರವಾಗಿ ಮಾತನಾಡಿರುವ ಖೂಬಾ(Bhagwant khooba MP) ವಿರುದ್ಧ ವಾಗ್ದಾಳಿ ನಡೆಸಿರುವ ಈ ಇಬ್ಬರು ನಾಯಕರು ಖಾಲಿ ಡಬ್ಬ ಸದಾ ಸದ್ದು ಮಾಡುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
undefined
'ಮೋದಿ ಹಠಾವೋ' ಎನ್ನುವ ದುಷ್ಟ ಶಕ್ತಿಗಳಿಗೆ ಪಾಠ ಕಲಿಸಿ: ಕೇಂದ್ರ ಸಚಿವ ಖೂಬಾ ಕರೆ
ಬೀದರ್-ಕಮಲನಗರ ಹಾಗೂ ನೌಬಾದ್- ಹುಮ್ನಾಬಾದ್ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು ಕಾಂಗ್ರೆಸ್ ಸರ್ಕಾರ. ನಂತರ ಈ ಕಾಮಗಾರಿ ಟೆಂಡರಾಗಿ, ಪ್ರಗತಿಯಲ್ಲಿದ್ದಾಗ ನೀವೇ ಸಂಸದರಾಗಿದ್ದಿರಿ, ಗುಣಮಟ್ಟದ ಕಾಮಗಾರಿ ಮಾಡಿಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲೇ ಇತ್ತು. ಆದರೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಬೀದರ್ ಜನತೆಗೆ ದ್ರೋಹ ಮಾಡಿದವರು ನೀವು. ಕಳಪೆ ಕಾಮಗಾರಿ ಮತ್ತು ಲೋಪವನ್ನು ಬಯಲು ಮಾಡಿದ್ದೇ ಈಶ್ವರ ಖಂಡ್ರೆ ಅವರು, ಈಗ ಅವರ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ(Congress government) ನುಡಿದಂತೆ ನಡೆಯುತ್ತಿದ್ದು, ಎಲ್ಲ ಗ್ಯಾರಂಟಿಗಳನ್ನೂ ಈಡೇರಿಸುತ್ತಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಹಬಾಳ್ವೆ ಎನ್ನುವಂತೆ 52 ಸಾವಿರ ಕೋಟಿ ರು. ವೆಚ್ಚ ಮಾಡಿ ಜನ ಕಲ್ಯಾಣಕ್ಕೆ, ಸಾಮಾಜಿಕ ಭದ್ರತೆಗೆ ಮುಂದಾಗಿದೆ. ಇದರಿಂದ ರಾಜ್ಯದಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಜನರ ವಿಶ್ವಾಸ ನೂರು ಪಟ್ಟು ಹೆಚ್ಚಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಖಾತ್ರಿ ಆಗಿರುವ ಖೂಬಾ ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಜಿಲ್ಲೆಗಾಗಿ ಮೂರು ಕಾಸಿನ ಕೆಲಸ ಮಾಡದಿದ್ದರೂ ಕೆಲಸ ಮಾಡುವವರ ವಿರುದ್ಧ ಅನಗತ್ಯ ಹೇಳಿಕೆ ನೀಡುತ್ತಾ ಓಡಾಡುವ ಬದಲು, ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿರುವ ಈಶ್ವರ ಖಂಡ್ರೆ ಅವರೊಂದಿಗೆ ಸೌಹಾರ್ದಯುತವಾಗಿದ್ದು, ಕೆಲಸ ಮಾಡಿದರೆ ಜಿಲ್ಲೆಯ ಉದ್ಧಾರ ಆಗುತ್ತದೆ.
ಕಾಂಗ್ರೆಸ್‌ಗೆ 5 ಗ್ಯಾರಂಟಿ ಯೋಜನೆಗಳು ಈಡೇರಿಸುವ ಮನಸ್ಸಿಲ್ಲ, ಹೀಗಾಗಿ ಷರತ್ತು: ಖೂಬಾ ಕಿಡಿ
ಅದು ಬಿಟ್ಟು ಹೇಳಿಕೆಯಲ್ಲೇ ಕಾಲ ಕಳೆದರೆ, ಜಿಲ್ಲೆಯ ಜನರೇ ನಿಮಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಬಸವರಾಜ ಜಾಬಶೆಟ್ಟಿಮತ್ತು ಅರವಿಂದ ಅರಳಿ ಕಿವಿಮಾತು ಹೇಳಿದ್ದಾರೆ.