ಮೆಟ್ರೋ ಪ್ರಯಾಣದಲ್ಲಿ ನಿಯಮ ಉಲ್ಲಂಘಿಸಿದ 27 ಸಾವಿರ ಪ್ರಯಾಣಿಕರು! ಇವರ ಕಥೆ ಏನಾಯ್ತು?

ಬೆಂಗಳೂರು ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ಪ್ರಯಾಣಿಕರು ನಿಯಮ ಉಲ್ಲಂಘಿಸಿದ್ದಾರೆ. ಜೋರಾಗಿ ಹಾಡು ಕೇಳುವುದು, ಸೀಟು ಬಿಟ್ಟುಕೊಡದಿರುವುದು, ಆಹಾರ ಸೇವನೆ ಸೇರಿವೆ. ದಂಡ ತಪ್ಪಿಸಲು ನಿಯಮ ಪಾಲಿಸಿ.

over 27000 Namma Metro passengers have been  violating rules says BMRCL Report gow

ಬೆಂಗಳೂರು (ಏ.3): ಕಳೆದ 6 ತಿಂಗಳ ಅವಧಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ  ಬರೋಬ್ಬರಿ 27,000 ಪ್ರಯಾಣಿಕರು  ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಾರೆ.  ಮೆಟ್ರೋ  ನಿಯಮಗಳನ್ನು ಪಾಲಿಸುವುದರಿಂದ ಪ್ರಯಾಣಿಕರು ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ. ಜವಾಬ್ದಾರಿಯುತ ಮೆಟ್ರೋ ಬಳಕೆದಾರರಾಗೋಣ. ಭವಿಷ್ಯದಲ್ಲಿ ದಂಢ ವಿಧಿಸುವುದನ್ನು ತಪ್ಪಿಸಿ ಎಂದು ಬಿಎಂಆರ್‌ಸಿಎಲ್‌ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದೆ.

ಬಹುನಿರೀಕ್ಷಿತ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಸಂಚಾರ ಮೇ 2025ಕ್ಕೆ ಆರಂಭ!

Latest Videos

ಕಳೆದ ಸೆಪ್ಟೆಂಬರ್‌ 2024ರಿಂದ ಮಾರ್ಚ್‌ 2025ರ ನಡುವೆ  ಆರು ತಿಂಗಳ ಅವಧಿಯಲ್ಲಿ ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ಮೆಟ್ರೋದ ಭದ್ರತಾ ದಳವು ನಡೆಸಿದ ತಪಾಸಣೆಯ ಪ್ರಕಾರ ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ ಸುಮಾರು 27,000 ಕ್ಕೂ ಹೆಚ್ಚು ಘಟನೆಗಳು ಬಹಿರಂಗವಾಗಿದೆ.

ಯಾವ್ಯಾವ ನಿಯಮಗಳು? ಎಷ್ಟು ಜನ ಉಲ್ಲಂಘಿಸಿದ್ದಾರೆ?

  • ಒಟ್ಟು 11,922 ಪ್ರಕರಣಗಳು ಜೋರಾಗಿ ಸಂಗೀತವನ್ನು ಮೊಬೈಲ್ ನಲ್ಲಿ ಹಾಕಿ ಕೊಂಡು ಕೇಳುತ್ತಿರುವುದು.
  • ಒಟ್ಟು 14,162 ಪ್ರಕರಣಗಳು  ವಿಕಲಾಂಗ ವ್ಯಕ್ತಿಗಳು (PwD), ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಶಿಶುಗಳೊಂದಿಗೆ ಪ್ರಯಾಣಿಸುವವರಿಗೆ ಆದ್ಯತೆ ಇರುವ ಆಸನಗಳನ್ನು ಬಿಟ್ಟು ಕೊಡದೆ ಇರುವುದು.
  • ಜೊತೆಗೆ  554 ಪ್ರಕರಣಗಳು  ರೈಲಿನಲ್ಲಿ ಪ್ರಯಾಣಿಸುವಾಗ ಆಹಾರಗಳ ಸೇವನೆ ಮಾಡಿರುವುದು.
  • ಅಲ್ಲದೆ, 474 ಘಟನೆಗಳು ಬೃಹತ್ ಗಾತ್ರದ ಲಗೇಜ್ ಗಳನ್ನು ಸಾಗಿಸುವ ಪ್ರಯಾಣಿಕರನ್ನು ಒಳಗೊಂಡಿವೆ.

ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಬೆಮಲ್‌ನಿಂದ 7 ರೈಲು, 405 ಕೋಟಿ ರೂಪಾಯಿ ಆರ್ಡರ್‌!

ಆದರೆ ಇಷ್ಟೆಲ್ಲ ನಿಯಮಗಳನ್ನು ಉಲ್ಲಂಘಿಸಿದ್ದರೂ ಈ ಕ್ರಮಗಳಿಗೆ ಯಾವುದೇ ದಂಡವನ್ನು ವಿಧಿಸಲಾಗಿಲ್ಲ. ಈ ರೀತಿಯ ನಡವಳಿಕೆಗಳನ್ನು  ತಪ್ಪಿಸಿ ಸಾಮರಸ್ಯದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಭದ್ರತಾ ದಳವು ಕಠಿಣ ಎಚ್ಚರಿಕೆಗಳನ್ನು ಭವಿಷ್ಯದಲ್ಲಿ ಕೈಗೊಳ್ಳಲು ಮುಂದಾಗಿದೆ. ಇದು ಪ್ರಯಾಣಿಕರಲ್ಲಿ ಹೆಚ್ಚಿನ ಅರಿವು ಮತ್ತು ಪರಿಗಣನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ನಮ್ಮ ಮೆಟ್ರೋದ 5 ನಿಲ್ದಾಣಕ್ಕೆ ಪ್ಲಾಟಿನಂ ರೇಟಿಂಗ್ ಪ್ರಶಸ್ತಿ

ಸುಗಮವಾದ ಪ್ರಯಾಣಕ್ಕಾಗಿ ನಮ್ಮ ಮಟ್ರೋ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ದಂಡಗಳು ವಿಧಿಸುವ ಅವಕಾಶಗಳನ್ನು ತಪ್ಪಿಸಲು ಬಿಎಂಆರ್‌ಸಿಡಲ್‌ ಪ್ರಯಾಣಿಕರಲ್ಲಿ ವಿನಂತಿಸಿದೆ. ಹೀಗಾಗಿ ನೀವೇನಾದರೂ ಮೆಟ್ರೋ ಪ್ರಯಾಣಿಕರಾಗಿದ್ದರೆ. ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ ಮತ್ತು ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಿ. 

vuukle one pixel image
click me!