ನಟ ಅಹಿಂಸಾ ಚೇತನ್; ಕೇಂದ್ರದ ವಕ್ಫ್ ಮಸೂದೆ ಅಂಗೀಕಾರಕ್ಕೆ ಸಂತಸ, ರಾಜ್ಯದ ಹಾಲಿನ ದರ ಏರಿಕೆಗೆ ಟೀಕೆ

ನಟ ಅಹಿಂಸಾ ಚೇತನ್ ವಕ್ಫ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದನ್ನು ಟೀಕಿಸಿದ್ದಾರೆ.


ಬೆಂಗಳೂರು (ಏ.03): ಕೇಂದ್ರ ಸರ್ಕಾರದದಿಂದ ಲೋಕಸಭೆಯಲ್ಲಿ ವಕ್ಫ್ ಮಸೂದೆ ತಿದ್ದುಪಡಿಯು ಅಂಗೀಕಾರ ಆಗಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಹೇಳಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, 'ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರವಾಗುವುದನ್ನು ನೋಡಲು ಸಂತೋಷವಾಗಿದೆ. ಯಾವುದೇ ಸದೃಢ ಪ್ರಜಾಪ್ರಭುತ್ವದಲ್ಲಿ 'ಚೆಕ್ ಮತ್ತು ಬ್ಯಾಲೆನ್ಸ್' ಅತ್ಯಗತ್ಯ. ವಕ್ಫ್ ಮಸೂದೆಯು ನ್ಯಾಯಸಮ್ಮತವಲ್ಲದಿದ್ದಲ್ಲಿ ಬಹುಶಃ ಅಂಗೀಕಾರವಾಗುತ್ತಿರಲಿಲ್ಲ. ಮಸೂದೆಗೆ 288 ಮತಗಳು ಕೋಮುವಾದಿ ಮತ್ತು ನಿಜವಾದ ಸೆಕ್ಯುಲರ್ ಶಕ್ತಿಗಳ ಸಂಯೋಜನೆಯಾಗಿದೆ -- ವಿರುದ್ಧ 232 ಮತಗಳು ಹುಸಿ-ಸೆಕ್ಯುಲರ್ ಲಾಬಿಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅವರು, 'ಕರ್ನಾಟಕ ಸರ್ಕಾರ ಹಾಲಿನ ದರವನ್ನು ಹೆಚ್ಚಿಸಿ, ಬೆಲೆ ಏರಿಕೆ 'ರೈತರಿಗೆ ಹೋಗುತ್ತದೆ' ಎಂದು ಹೇಳಿಕೊಂಡಿತು. ಇದು ಕೆಲವು ತಿಂಗಳ ಹಿಂದೆ ಬಸ್ ದರವನ್ನು ಹೆಚ್ಚಿಸಿ 'ಸಾರಿಗೆ ಕಾರ್ಮಿಕರಿಗೆ ಹೋಗುತ್ತದೆ' ಎಂದು ಹೇಳಿಕೊಂಡಂತೆಯೇ ಇದೆ. ಶ್ರಮಜೀವಿ ವರ್ಗಕ್ಕೆ ಹಿಂತಿರುಗಿಸಲು ಸರ್ಕಾರವು ಶ್ರಮಜೀವಿ ವರ್ಗಗಳಿಂದ ಹೇಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಿ. ಕೆರೆಯ ನೀರನ್ನು ಕೆರೆಗೆ ಚಲ್ಲುತ್ತಾ ಹೋಗತ್ತದೆ. ಹೀಗಾಗಿ, ಅನ್ಯಾಯ/ಅಸಮಾನ ವ್ಯವಸ್ಥೆ ಮುಂದುವರಿಯುತ್ತದೆ. ಸರ್ಕಾರವು ಶ್ರೀಮಂತರು ಮತ್ತು ಉಳ್ಳವರಿಂದ ತೆಗೆದುಕೊಳ್ಳುವ ಮೂಲಕ ಶ್ರಮಜೀವಿ ವರ್ಗಗಳ ಜೀವನವನ್ನು ಉತ್ತಮಗೊಳಿಸಬೇಕು' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. 

ಇದನ್ನೂ ಓದಿ: Waqf Amendment Bill passed: ಮೋದಿ ಸರ್ಕಾರದ ಬ್ರಹ್ಮಾಸ್ತ್ರ, ಒಂದೇ ಏಟಿಗೆ ಹಲವು ಗುರಿಗಳು ಫಿನಿಶ್!

click me!