ನಮ್ಮ ಗುರುಕುಲ ಪದ್ಧತಿ ವಿಶ್ವಕ್ಕೇ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

By Kannadaprabha NewsFirst Published Jul 4, 2023, 5:02 AM IST
Highlights

ದೇಶವು ಇತ್ತೀಚಿನ ದಿನಗಳಲ್ಲಿ ಸರ್ವಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದೆ, ದೇಶ ಅಕ್ಷರಶಃ ಬದಲಾಗುತ್ತಿದೆ ಎಂಬುದಕ್ಕೆ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಸತ್ಯಸಾಯಿ ಗುರುಕುಲ ಶಿಕ್ಷಣ ಸಂಸ್ಥೆ, ಸತ್ಯಸಾಯಿ ಸರಳ ಮೆಮೋರಿಯಲ್‌ ಮೆಡಿಕಲ್‌ ಕಾಲೇಜು ಉಚಿತ ಶಿಕ್ಷಣ, ಆಹಾರ,ಆರೋಗ್ಯ ಇತ್ಯಾದಿ ಸೇವಾ ಕಾರ್ಯಗಳೇ ಸಾಕ್ಷಿ ಎಂದು ರಾಷ್ಟಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ (ಜು.4) ದೇಶವು ಇತ್ತೀಚಿನ ದಿನಗಳಲ್ಲಿ ಸರ್ವಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದೆ, ದೇಶ ಅಕ್ಷರಶಃ ಬದಲಾಗುತ್ತಿದೆ ಎಂಬುದಕ್ಕೆ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಸತ್ಯಸಾಯಿ ಗುರುಕುಲ ಶಿಕ್ಷಣ ಸಂಸ್ಥೆ, ಸತ್ಯಸಾಯಿ ಸರಳ ಮೆಮೋರಿಯಲ್‌ ಮೆಡಿಕಲ್‌ ಕಾಲೇಜು ಉಚಿತ ಶಿಕ್ಷಣ, ಆಹಾರ,ಆರೋಗ್ಯ ಇತ್ಯಾದಿ ಸೇವಾ ಕಾರ್ಯಗಳೇ ಸಾಕ್ಷಿ ಎಂದು ರಾಷ್ಟಪತಿ ದ್ರೌಪದಿ ಮುರ್ಮು(President of india) ಅಭಿಪ್ರಾಯಪಟ್ಟರು.

ತಾಲೂಕಿನ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಗ್ರಾಮ(Sri satya sai village chikkaballapur)ದ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 2ನೇ ಘಟಿಕೋತ್ಸ(University convocation)ವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ದೇಶದಾದ್ಯಂತ ಇಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಸನಾತನ ಭಾರತೀಯ ಪರಂಪರೆಯಲ್ಲಿ ಗುರುಪೂರ್ಣಿಮೆಗೆ ಭಾರತೀಯ ಜೀವನಕ್ರಮದಲ್ಲಿ ವಿಶೇಷ ಸ್ಥಾನ ಮಾನವಿದೆ. ಇಲ್ಲಿ ಗುರುವಿಗೆ ದೈವದ ಸ್ಥಾನವನ್ನು ನೀಡಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ನಾವು ನೀವು ಮಾಡಬೇಕಿದೆ ಎಂದರು.

Latest Videos

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌

ಪೌಷ್ಟಿಕ ಆಹಾರ ಯೋಜನೆಗೆ ಪ್ರೇರಣೆ

ನಮ್ಮ ಗುರುಕುಲ ಶಿಕ್ಷಣ(Gurukula education system) ಪದ್ಧತಿಯು ವಿಶ್ವಕ್ಕೆ ಮಾದರಿಯಾಗಿದೆ. ಈ ಸಂಸ್ಥೆಯ ಸಂಸ್ಥಾಪಕ ಮಧುಸೂಧನ್‌ ಸಾಯಿ ದೇಶದ ಅಖಂಡತೆ, ಐಕ್ಯತೆಯನ್ನು ಎತ್ತಿಹಿಡಿಯುತ್ತಾ ಸೇವಾ ಮನೋಭಾವವನ್ನು ವಿದ್ಯಾರ್ಥಿ ಸಮೂಹ, ಸಮಾಜದಲ್ಲಿ ಬಿತ್ತುವ ಮೂಲಕ,ಆದರ್ಶವಾದ ಮಾನವ ಅಭ್ಯುದಯ ಶಿಕ್ಷಣವನ್ನು ನೀಡುತ್ತಾ ಸಾಗುತ್ತಿದ್ದಾರೆ. ಈ ಹಾದಿಯಲ್ಲಿ ಸಾಗುವ ಪ್ರತಿಯೊಬ್ಬರಿಗೂ ಉಚಿತವಾಗಿ ಶಿಕ್ಷಣ ಆರೋಗ್ಯ, ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಬಡವರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಭಾರತ ಸರಕಾರ ನೀಡುತ್ತಿರುವ ಪೌಷ್ಟಿಕ ಆಹಾರ ಯೋಜನೆಗೆ ಸತ್ಯ ಸಾಯಿ ಆಶ್ರಮದ ಸೇವಾ ಕಾರ್ಯವೇ ಮಾದರಿ ಪ್ರೇರಣೆಯಾಗಿದೆ ಎಂದರು.

ಮಾನವ ಅಭ್ಯುದಯ ವಿಶ್ವವಿದ್ಯಾಲಯದ 2 ನೇ ಘಟಿಕೋತ್ಸವದಲ್ಲಿ 17 ಸಾಧಕ ಅರ್ಹ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಿದ್ದಾರೆ. ಇವರಲ್ಲಿ ಶೆ.60ಮಹಿಳೆಯರೇ ಇದ್ದಾರೆ ಎನ್ನುವುದು ಸಂತೋಷದ ಸಂಗತಿಯಾಗಿದೆ. ಬೇಟಿ ಬಜಾವೋ ಪಡಾವೋ ಎನ್ನುವುದು ಇಲ್ಲಿ ಕಣ್ಣಾರೆ ಕಾಣುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ಭಾರತದಲ್ಲಿ ಇಂದು ಅಮೂಲಾಗ್ರ ಬದಲಾವಣೆ ಆಗುತ್ತಿದೆ ಎನ್ನುವುದಕ್ಕೆ ಸತ್ಯಸಾಯಿಗ್ರಾಮದ ಸಾಧನೆ ಕೇವಲ ಟ್ರೇಲರ್‌ ಮಾತ್ರ. ಪಿಚ್ಚರ್‌ ಇನ್ನೂ ಬಾಕಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಉತ್ತಮ ಸಂಸ್ಥೆಯಲ್ಲಿ ಶಿಕ್ಷಣ

ಪೋಷಕರಷ್ಟೇ ಅಲ್ಲದೆ ವಿದ್ಯಾರ್ಥಿಗಳು ಕೂಡ ಉತ್ತಮ ಭವಿಷ್ಯ ಮತ್ತು ಉತ್ತಮ ಶಿಕ್ಷಣಕ್ಕಾಗಿ, ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಓದುವುದು ಕೂಡ ಅಷ್ಟೇ ಮುಖ್ಯ. ಮಾನವ ಅಭ್ಯುದಯ ವಿಶ್ವವಿದ್ಯಾಲಯ ಇದಕ್ಕೆ ಉತ್ತಮ ನಿದರ್ಶನದಂತಿದೆ. ಇಲ್ಲಿ ಶಿಕ್ಷಣ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗೌರವ ಡಾಕ್ಟರೇಟ್‌ ಪಡೆದ ಸಾಧಕರಿಗೆ ಮತ್ತೊಮ್ಮೆ ಶುಭಾಶಯ ಹೇಳುತ್ತೇನೆ. ನನಗೆ ವಿಶ್ವಾಸವಿದೆ ಆರೋಗ್ಯವಂತ ಸಮಾಜ ಸೃಷ್ಟಿಮಾಡುವಲ್ಲಿ ಸತ್ಯಸಾಯಿ ಸಂಸ್ಥೆ ವಿಶ್ವಕ್ಕೆ ಮಾದರಿಯಾಗಿ ಸಾಗುತ್ತಿದೆ. ಇದು ಹೀಗೆಯೇ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ಸದ್ಗುರು ಮಧುಸೂಧನ್‌ ಸಾಯಿ ಮಾತನಾಡಿ ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ ಎನ್ನುವುದೇ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಧ್ಯೇಯವಾಗಿದೆ. ಇದರ ಎರಡನೇ ಘಟಿಕೋತ್ಸವದಲ್ಲಿ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಭಾಗಿಯಾಗಿ ವಿಶ್ವವಿದ್ಯಾಲಯದ ಏಳಿಗೆ, ವಿದ್ಯಾರ್ಥಿಗಳ ಗುಣಾತ್ಮಕ ಸಾಧನೆ, ಸಸ್ಯಸಾಯಿ ಸೇವಾ ಸಂಸ್ಥೆಯ ಸಮಾಜಮುಖೀ ಕಾರ್ಯಗಳನ್ನು ಕಣ್ಣಾರೆ ಕಂಡು ಆನಂದತುಂದಿಲರಾಗಿದ್ದಲ್ಲದೆ,ವಿದ್ಯಾರ್ಥಿಗಳಿಗೆ ಶುಭಹಾರೈಸಿರುವುದು ಐತಿಹಾಸಿಕ ಗಳಿಗೆಯಾಗಿದೆ ಎಂದರು.

 ಸುರಿನಾಮ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು: ಪ್ರಧಾನಿ ಮೋದಿ ಶುಭ ಹಾರೈಕೆ

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರೊ.ವಿಜಯಶಂಕರ್‌ ಶುಕ್ಲ, ಆರೋಗ್ಯ ಕ್ಷೇತ್ರದಲ್ಲಿ ನಿಮ್ಹಾನ್ಸ್‌ನ ಡಾ. ಪ್ರತಿಮಾಮೂರ್ತಿ, ಕ್ರೀಡಾ ಕ್ಷೇತ್ರದಲ್ಲಿ ಪುಲ್ಲೇಲ ಗೋಪಿಚಂದ್‌, ಸಂಗೀತ ಕ್ಷೇತ್ರದಲ್ಲಿ ವಿದ್ವಾನ್‌ ಡಾ.ಆರ್‌.ಕೆ.ಪದ್ಮನಾಭ, ವಿಜ್ಞಾನ ಕ್ಷೇತ್ರದಲ್ಲಿ ಪ್ರೊ.ಅಜಯ್‌.ಕೆ.ಸೂದ್‌, ಪರಿಸರ ಸೇವಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸೀಗೌಡ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಈ ವೇಳೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಡಾ. ನರಸಿಂಹಮೂರ್ತಿ,ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮತ್ತಿತರರು ಉಪಸ್ಥಿತರಿದ್ದರು.

click me!