ಆಲಮಟ್ಟಿ ಡ್ಯಾಂ ಭರ್ತಿಗೆ ಒಂದೇ ದಿನ ಬಾಕಿ: ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ!

By Govindaraj SFirst Published Aug 7, 2023, 8:43 PM IST
Highlights

ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹಾದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಬಹುತೇಕ ಭರ್ತಿಯಾಗಿದೆ. 

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.07): ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹಾದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಬಹುತೇಕ ಭರ್ತಿಯಾಗಿದೆ. ಇನ್ನೂ ಅರ್ಧ ಮೀಟರ್ ನೀರು ಸಂಗ್ರಹವಾದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಈ ವಿಚಾರ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಡ್ಯಾಂ ಭರ್ತಿಯಾಗಲು ಇನ್ನೊಂದೆ ದಿನ ಬಾಕಿ: 519.60 ಮೀಟರ್ ಹಾಗೂ 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಬೆಳಗ್ಗೆಯವರೆಗೆ 519.60 ಮೀಟರ್ ಅಂದರೆ121.262 ಟಿಎಂಸಿ ನೀರು ಸಂಗ್ರಹವಾಗಿದೆ. ಈಗಲೂ ಒಳಹರಿವು 66,750 ಕ್ಯೂಸೆಕ್ ಇದ್ದು, ಹೊರಹರಿವು ಹೆಚ್ಚಿಸಲಾಗಿದೆ. 70,000 ಕ್ಯೂಸೆಕ್ ಇದೆ.  ಇನ್ನೊಂದೆ ದಿನದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ಮೂಲಗಳು ಖಚಿತ ಪಡಿಸಿವೆ.

ಕುಸಿದ ಒಣದ್ರಾಕ್ಷಿ ದರ: ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ದ್ರಾಕ್ಷಿ ಬೆಳೆಗಾರರು!

ಅಧಿಕ ಮಾಸದ ಬಳಿಕ ಬಾಗಿನ ಅರ್ಪಣೆ?: ಸದ್ಯ ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸಂಪ್ರದಾಯದಂತೆ ನಾಡಿನ ದೊರೆ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಕೃಷ್ಣೆಗೆ ಬಾಗಿನ ಅರ್ಪಿಸಬೇಕು. ಆದರೆ ಸಧ್ಯ ಅಧಿಕ ಮಾಸ ನಡೆಯುತ್ತಿರುವ ಕಾರಣ ಬಾಗಿನ ಅರ್ಪಿಸುವದು ಆಗಸ್ಟ್16ರ ನಂತರವೇ ಎನ್ನುವ ಮಾತು ಕೇಳಿ ಬರುತ್ತಿದೆ. ಶ್ರಾವಣ ಮಾಸದಲ್ಲಿ ಬಾಗಿನ ಅರ್ಪಿಸುವದು ಶುಭಗಳಿಗೆ ಎನ್ನುವದು ಜ್ಯೋತಿಷ್ಯ ಗಳ ಸಲಹೆ ಸಹ ಇದೆ. ಸರ್ಕಾರ ಸಹ ಬಹುತೇಕವಾಗಿ ಅಧಿಕ ಮಾಸ ಮುಗಿದ ಮೇಲೆ ಬಾಗಿನ ಅರ್ಪಿಸಬಹುದು ಎನ್ನುವದು ಕೆಲ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು: ವೃದ್ಧ ದಂಪತಿಗಳ ಬದುಕಿಗೆ ಆಸರೆಯಾದ ಜಿಲ್ಲಾಧಿಕಾರಿ

ವಿದ್ಯುತ್ ಉತ್ಪಾದನೆಗು ಕಳೆ: ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಜುಲೈ 21ರಿಂದಲೇ ಜಲಾಶಯದ 6 ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಪ್ರತಿ ದಿನ  42ಸಾವಿರ ಕ್ಯೂಸೆಕ್ ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಜು.21ರಿಂದ ಆ. 7ರವರೆಗೆ ಇಲ್ಲಿಯವರೆಗೆ 80 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದರ ಸಾಮರ್ಥ್ಯ 290 ಮೆಗಾ ವ್ಯಾಟ್ ಇದೆ. ಸದ್ಯ ಉತ್ಪಾದನೆಯಾದ ವಿದ್ಯುತ್ ಪವರ್ ಗ್ರೀಡ್ ಗೆ ಸರಬರಾಜು ಆಗುತ್ತಿದೆ. ಅಲ್ಲಿಂದ ಅವಶ್ಯವಿರುವ ಕಡೆ ಸರಬರಾಜು ಮಾಡಲಾಗುತ್ತಿದೆ.

click me!