ಭಟ್ಕಳ ಎಸ್ ಬಿಐ ಅಲ್ಲಿ 1.5 ಕೋಟಿ ರೂಪಾಯಿ ವಂಚಿಸಿ, ಮ್ಯಾನೇಜರ್ ಪರಾರಿ!

Published : Apr 23, 2022, 07:57 PM IST
ಭಟ್ಕಳ ಎಸ್ ಬಿಐ ಅಲ್ಲಿ 1.5 ಕೋಟಿ ರೂಪಾಯಿ ವಂಚಿಸಿ, ಮ್ಯಾನೇಜರ್ ಪರಾರಿ!

ಸಾರಾಂಶ

ಭಟ್ಕಳದ ನ್ಯೂ ಇಂಗ್ಲೀಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಟ್ಕಳ ಬಜಾರ್ ಶಾಖೆಯಲ್ಲಿ 1.5 ಕೋಟಿ ರೂಪಾಯಿ ವಂಚನೆ ಪ್ರಕರಣ ನಡೆದಿದ್ದು, ಬ್ಯಾಂಕ್ ಮ್ಯಾನೇಜರ್ ಅನೂಪ್ ಪೈ ಪರಾರಿಯಾಗಿದ್ದಾರೆ.

ಭಟ್ಕಳ (ಏ.23): ನ್ಯೂ ಇಂಗ್ಲೀಷ್ ಸ್ಕೂಲ್ ರಸ್ತೆಯಲ್ಲಿರುವ  (New English School Road) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಭಟ್ಕಳ ಬಜಾರ್ ಶಾಖೆಯಲ್ಲಿ (Bhatkal Bazar Branch) ಹಣಕಾಸು ಅವ್ಯವಹಾರ (Financial Irregularities) ಪ್ರಕರಣ ಪತ್ತೆಯಾಗಿದೆ. ಬ್ಯಾಂಕ್ ನ ಉನ್ನತ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಅಮಾನತಿಗೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಬ್ಯಾಂಕ್ ಮ್ಯಾನೇಜರ್ ಅನೂಪ್ ಪೈ (Anoop Pai), ಒಂದೂವರೆ ಕೋಟಿ ರೂ. ಹಣ ದುರುಪಯೋಗಪಡಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ತುರ್ತು ಪರಿಸ್ಥಿತಿಯ ಕಾರಣ ನೀಡಿ, ಶಾಖೆಯ ಮ್ಯಾನೇಜರ್ ಆಗಿದ್ದ ಅನೂಪ್ ಪೈ 1.5 ಕೋಟಿ ರೂಪಾಯಿಯ ವಂಚನೆ ಎಸಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಯನ್ನು ಮೂಲತಃ ಮಂಗಳೂರಿನ ಕಾವೂರು ಬೋಳಪು ಗುಡ್ಡೆ ನಿವಾಸಿ ಎಂದು ಗುರುತಿಸಲಾಗಿದೆ.

ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್ ಗ್ರಾಹಕರೊಂದಿಗೆ ಆರೋಪಿ ಒಳಸಂಚು ರೂಪಿಸಿದ್ದ ಎನ್ನುವ ಮಾಹಿತಿ ಮೇಲ್ನೋಟಕ್ಕೆ ಗೊತ್ತಾಗಿದೆ. ಬ್ಯಾಂಕಿನ ಸಿಸ್ಟಮ್ ಸಸ್ಪೆನ್ ಖಾತೆಗೆ ಖರ್ಚು ಹಾಕಿ ಬ್ಯಾಂಕ್‌ನ ಗ್ರಾಹಕರ ಖಾತೆಗೆ ಮ್ಯಾನೇಜರ್ ಹಣ ಜಮಾ ಮಾಡಿದ್ದ. ಬ್ಯಾಂಕಿನ ಸುಮಾರು ಒಂದೂವರೆ ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗಿದೆ. ದೂರಿನ ಹಿನ್ನೆಲೆ ಆರೋಪಿ ವಾಸವಿದ್ದ ಭಟ್ಕಳ ರೈಲ್ವೇ ಸ್ಟೇಶನ್ ರೋಡ್ ಸಮೀಪದ ಬಾಡಿಗೆ ಮನೆಗೆ ಭಟ್ಕಳ ನಗರ ಪೊಲೀಸರು ತೆರಳಿದ್ದರು. 

ಸರ್ಕಾರ ರಚನೆಗೆ ನಿತೀಶ್ ಕುಮಾರ್ ಜೊತೆ ರಹಸ್ಯ ಮಾತುಕತೆ ಎಂದ ಆರ್ ಜೆಡಿಯ ತೇಜ್ ಪ್ರತಾಪ್!

ಆದರೆ, ಸುದ್ದಿ ತಿಳಿಯುತ್ತಲೇ ಬ್ಯಾಂಕ್ ಮ್ಯಾನೇಜರ್ ಪರಾರಿಯಾಗಿದ್ದರು ಎಂದು ಗೊತ್ತಾಗಿದೆ. ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಇದು ಫೋಟೋನಾ? ಪೇಂಟಿಂಗಾ? ಫಿಲ್ಟರ್ ಕಾಫಿಯ ವೈರಲ್ ಚಿತ್ರಕ್ಕೆ ನೆಟ್ಟಿಗರು ಫುಲ್‌ ಕನ್ಫ್ಯೂಸ್

ಕಳೆದ ಎರಡು ವರ್ಷಗಳಿಂದ ಅನೂಪ್ ಪೈ ಬ್ಯಾಂಕ್ ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವರ್ಷದ ಮಾರ್ಚ್ ನಲ್ಲಿ ನಡೆದ ಅಡಿಟ್ ನಲ್ಲಿ ಈ ಮೋಸ ಬಹಿರಂಗವಾಗಿದೆ. ಅನೂಪ್ ಪೈ ಸ್ಥಾನಕ್ಕೆ ಬಂದಿರುವ ನೂತನ ಮ್ಯಾನೇಜರ್ ರಾಘವೇಂದ್ರ, ಈ ಕುರಿತಾಗಿ ಪ್ರಕರಣ ದಾಖಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!