ಖಾಸಗಿ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿ: ಕೆಎಸ್‌ಆರ್‌ಟಿಸಿಗೆ ಭರ್ಜರಿ ‘ಲಾಭ’

By Girish Goudar  |  First Published Apr 23, 2022, 11:32 AM IST

*   ತಿಂಗಳಿಗೆ 22 ಕೋಟಿ ರು. ನಷ್ಟ ಇಳಿಕೆ
*   ಚಿಲ್ಲರೆ ಡೀಸೆಲ್‌ಗಿಂತ ಸಗಟು ಡೀಸೆಲ್‌ ದುಬಾರಿ
*  ಕೆಲ ಅಧಿಕಾರಿಗಳಿಂದ ಡೀಸೆಲ್‌ ಖರೀದಿಯಲ್ಲಿಯೂ ಅವ್ಯವಹಾರ 
 


ಬೆಂಗಳೂರು(ಏ.23):  ಈಗಾಗಲೇ ನಷ್ಟದ ಸುಳಿಯಲ್ಲಿ ಸಿಲುಕಿರುವ ಕೆಎಸ್‌ಆರ್‌ಟಿಸಿ(KSRTC) ಸಂಸ್ಥೆಗೆ ಆಗುತ್ತಿದ್ದ ನಷ್ಟದ ಪ್ರಮಾಣ ತಗ್ಗಿಸುವ ಸಲುವಾಗಿ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್‌(Diesel) ಖರೀದಿ ಮಾಡುತ್ತಿದ್ದು, ಇದರಿಂದ ಮಾಸಿಕ 22 ಕೋಟಿ ರು.ಗಳ ವೆಚ್ಚ ಕಡಿಮೆಯಾಗಿದೆ.

ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿನ ಎಲ್ಲ ಬಸ್‌ಗಳಿಗೆ ಪ್ರತಿ ದಿನ ಸುಮಾರು 5,57,000 ಲೀಟರ್‌ ಡೀಸೆಲ್‌ ಬಳಕೆ ಮಾಡಲಾಗುತ್ತಿದೆ. ಇಷ್ಟು ಪ್ರಮಾಣದ ಡೀಸೆಲ್‌ನ್ನು ಸಗಟು ದರದಲ್ಲಿ(Wholesale Price) ಖರೀದಿ ಮಾಡಿದಲ್ಲಿ ಪ್ರತಿದಿನ ಸುಮಾರು 75 ಲಕ್ಷ ರು.ಗಳು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಚಿಲ್ಲರೆ ದರಲ್ಲಿ ಖಾಸಗಿಯವರಿಂದ ಖರೀದಿ ಮಾಡುವುದಕ್ಕೆ ಮುಂದಾಗಿದ್ದೇವೆ. ಹೀಗಾಗಿ ಪ್ರತಿ ದಿನ 75 ಲಕ್ಷ ರು. ಕಡಿಮೆ ವೆಚ್ಚವಾಗುತ್ತಿದೆ. ಮಾಸಿಕ ಸುಮಾರು 22.52 ಕೋಟಿ ರು.ಉಳಿತಾಯವಾದಂತಾಗಿದೆ ಎಂದು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tap to resize

Latest Videos

ತೈಲ ಬೆಲೆ ಏರಿಕೆ ಮಧ್ಯೆ ಕೋರ್ಟ್‌ ಮಹತ್ವದ ಆದೇಶ, ಸಾರಿಗೆ ಸಂಸ್ಥೆಗೆ ಕೊಂಚ ನೆಮ್ಮದಿ!

ಡೆಡ್‌ ಕಿಲೋಮೀಟರ್‌ ಹೆಚ್ಚಳ:

ಚಿಲ್ಲರೆ ಮಾರುಕಟ್ಟೆಯಲ್ಲಿ(Retail Market) ಡೀಸೆಲ್‌ ಖರೀದಿ ಮಾಡುವುದರಿಂದ ಸಂಸ್ಥೆಗೆ ಆಗುವ ವೆಚ್ಚ ಕಡಿಮೆಯಾಗುತ್ತಿದೆ. ಆದರೆ, ಖಾಸಗಿ ಬಂಕ್‌ಗಳಿಂದ(Private Bunk) ಡಿಪೋವರೆಗಿನ ದೂರ ಕ್ರಮಿಸಲು ಬಳಕೆಯಾಗುವ ಡೀಸೆಲ್‌ (ಡೆಡ್‌ ಕಿಲೋಮೀಟರ್‌) ಲೆಕ್ಕಕ್ಕೆ ಸಿಗುತ್ತಿಲ್ಲ. ಕೆಲ ಕೆಎಸ್‌ಆರ್‌ಟಿಸಿ ಡಿಪೋಗಳು 5 ಕಿ.ಮೀ. ದೂರದ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿಸುತ್ತಿವೆ. ಇದರಿಂದ ಡೆಡ್‌ ಕಿ.ಮೀ. ಹೆಚ್ಚಳವಾಗುವ ಸಾಧ್ಯತೆಯಿದೆ. ಆದರೆ, ಡಿಪೋಗಳಲ್ಲಿ ಸಗಟು ಡೀಸೆಲ್‌ ಖರೀದಿ ಮಾಡುವುದರಿಂದ ಈ ರೀತಿಯ ಡೆಡ್‌ ಕಿ.ಮೀ. ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೆಲ ಚಾಲಕರು ಅಭಿಪ್ರಾಯ ಪಡುತ್ತಾರೆ.

PUC Exams in Karnataka: ಪಿಯು ಪರೀಕ್ಷಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ

ಅಲ್ಲದೆ, ಕೆಲ ಅಧಿಕಾರಿಗಳು ಡೀಸೆಲ್‌ ಖರೀದಿಯಲ್ಲಿಯೂ ಅವ್ಯವಹಾರ ಮಾಡುತ್ತಿರುತ್ತಾರೆ. ಲೆಕ್ಕದಲ್ಲಿ ಹೆಚ್ಚು ಕಡಿಮೆ ಮಾಡುವ ಸಾಧ್ಯತೆಗಳಿವೆ. ಆದರೆ, ಈ ಎಲ್ಲ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಸಂಸ್ಥೆಗೆ ಮತ್ತಷ್ಟುವೆಚ್ಚ ಕಡಿಮೆಯಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.

ಕೇರಳ ಹೈಕೋರ್ಟ್‌ ಆದೇಶ:

ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ ಚಿಲ್ಲರೆ ಮಾರುಕಟ್ಟೆ ಬೆಲೆಯಲ್ಲಿ ಡೀಸೆಲ್‌ ವಿತರಣೆ ಮಾಡಬೇಕು ಎಂದು ಕೇಂದ್ರ ಪೆಟ್ರೋಲಿಯಂ(Ministry of Petroleum and Natural Gas) ಸಚಿವಾಲಯಕ್ಕೆ ಕೇರಳ ಹೈಕೋರ್ಟ್‌(High Court of Kerala) ಸೂಚನೆ ನೀಡಿದೆ. ಈ ಸೂಚನೆಯಂತೆ ಎಲ್ಲ ರಾಜ್ಯಗಳ ಸಾರ್ವಜನಿಕ ಸಾರಿಗೆ ನಿಗಮಗಳಿಗೆ ಚಿಲ್ಲರೆ ಬೆಲೆಯಲ್ಲಿ ಡೀಸೆಲ್‌ ವಿತರಣೆ ಮಾಡಬೇಕು. ಆದರೆ, ಈ ಸಂಬಂಧ ಕೇಂದ್ರ ಸರ್ಕಾರ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.
 

click me!