ಮಂಡ್ಯ ಬಸ್ ದುರಂತ ನಡೆದಲ್ಲಿ ಹೆಚ್ಚಾಗ್ತಿವೆ ಅಪಘಾತಗಳ ಸಂಖ್ಯೆ!

By Web DeskFirst Published Dec 3, 2018, 11:24 AM IST
Highlights

ಮಂಡ್ಯ ಬಸ್ ದುರಂತ ಸಂಭವಿಸಿದ ಸ್ಥಳದ ಆಸುಪಾಸಿನಲ್ಲಿ ನಡೆಯುತ್ತಿರುವ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ವಾರದಲ್ಲಿ ನಾಲೆಗಳ ಬಳಿ ನಡೆದ ಅಪಘಾತಗಳ ಸಂಖ್ಯೆ 3 ಹಾಗೂ ಸತ್ತವರ ಸಂಖ್ಯೆ 33ಕ್ಕೇರಿದೆ.

ಮಂಡ್ಯ[ಡಿ.03]: ಮಂಡ್ಯದಲ್ಲಿ 30 ಮಂದಿಯನ್ನು ಬಲಿ ಪಡೆದಿದ್ದ ಬಸ್ ದುರಂತ ನಡೆದ ನಲೆ ಬಳಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ದುರಂತ ಸಂಭವಿಸಿದ ಒಂದೇ ವಾರದೊಳಗೆ ಸತ್ತವರ ಸಂಖ್ಯೆ 33ಕ್ಕೇರಿದೆ.

ಇದನ್ನೂ ಓದಿ: ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ

ನ. 24 ರಂದು ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಬಸ್ ಉರುಳಿ 30 ಜನ ಜಲಸಮಾಧಿಯಾಗಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆದರೀಗ ಈ ಘೋರ ಘಟನೆಯ ಬೆನ್ನಲ್ಲೇ ಮತ್ತೆರಡು ಅಪಘಾತಗಳು ಸಂಭವಿಸಿ ಮೃತರ ಸಂಖ್ಯೆ 33ಕ್ಕೇರಿದೆ. ಶನಿವಾರದಂದು ಮದ್ದೂರಿನ ನಾಲೆಯೊಂದಕ್ಕೆ ಕಾರು ಉರುಳಿತ್ತು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಇದನ್ನೂ ಓದಿ: ಮತ್ತೊಂದು ದುರಂತ: ಮಂಡ್ಯಕ್ಕೆ ಎದುರಾಗಿದ್ಯಾ ನಾಲೆ ಗಂಡಾಂತರ?

ಆದರೆ ಇಂದು ಸೋಮವಾರ ನಾಲೆಗೆ ಮೊಪೆಡ್ ಬೈಕ್ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ವಿಸಿ ನಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ‌‌ ಒಂದೇ ಕುಟುಂಬದ ಅಜ್ಜಿ, ‌ಮಗಳು ಹಾಗೂ ಮೊಮ್ಮಗಳು ವಿಧಿವಶರಾಗಿದ್ದಾರೆ. ಮೃತರನ್ನು ಲೋಕಸರ ಗ್ರಾಮದ ನಾಗಮ್ಮ(55) ಅಂಬಿಕ(35) ಮಾನ್ಯತ(3) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಹದೇಶ್ವರ ದೇವಾಲಯದಿಂದ ಲೋಕಸರ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. 

ಇದನ್ನೂ ಓದಿ: ಸಾವಿನ ಶನಿವಾರ: ನಾಲೆ ಬಳಿ ಹೆಣಗಳ ರಾಶಿ!

ರಸ್ತೆ ಕ್ರಾಸ್ ಮಾಡುವ ವೇಳೆ‌ ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಉರುಳಿತ್ತು. ಈ ವೇಳೆ ನಾಲೆಯಲ್ಲಿ ನೀರು ತುಂಬಿದ್ದರಿಂದ ಹೊರಬರಲಾಗದೇ ಮೂವರ ದುರ್ಮರಣಕ್ಕೀಡಾಗಿದ್ದಾರೆ. ಸದ್ಯ ಮೃತದೇಹಗಳನ್ನು‌‌ ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!