ನಮ್ಮ ಪೊಲೀಸರು ಮಫ್ತಿಯಲ್ಲಿ ಹೋಗಿದ್ದಾರೆ. ಅಲ್ಲಿನ ಪೊಲೀಸನವರಿಗೆ ತಿಳಿಸಬೇಕಿತ್ತು. ಆದರೆ ತಿಳಿಸದೇ ಹೊಗಿದ್ದೇ ಪ್ರಮಾದಕ್ಕೆ ಕಾರಣವಾಗಿದೆ ಎಂದು ಉತ್ತರ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ಘಟನೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.
ಬೆಂಗಳೂರು (ಜೂ.21): ನಮ್ಮ ಪೊಲೀಸರು ಮಫ್ತಿಯಲ್ಲಿ ಹೋಗಿದ್ದಾರೆ. ಅಲ್ಲಿನ ಪೊಲೀಸನವರಿಗೆ ತಿಳಿಸಬೇಕಿತ್ತು. ಆದರೆ ತಿಳಿಸದೇ ಹೊಗಿದ್ದೇ ಪ್ರಮಾದಕ್ಕೆ ಕಾರಣವಾಗಿದೆ ಎಂದು ಉತ್ತರ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ಘಟನೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ ಅವರು, ನಮ್ಮ ಪೊಲೀಸರು ಉತ್ತರ ಪ್ರದೇಶಕ್ಕೆ ಹೋಗುವ ಮೊದಲು ಅಲ್ಲಿನ ಪೊಲೀಸರಿ ವಿಚಾರ ತಿಳಿಸಬೇಕಿತ್ತು. ತಿಳಿಸದೇ ಹೋಗಿದ್ದರಿಂದ ಅಲ್ಲಿನ ಪೊಲೀಸರು ಮೊದಲು ನೋಟಿಸ್ ಕೊಡಿ ನಂತರ ನೋಡೋಣ ಎಂದಿದ್ದಾರೆ. ನೋಟಿಸ್ ಕೊಟ್ಟ ಮೇಲೆ ಆ ಯುಟ್ಯೂಬರ್ ಬರದೇ ಹೋದ್ರೆ ವಾರೆಂಟ್ ತಗೆದುಕೊಂಡು ಹೋಗಿ ಅರೆಸ್ಟ್ ಮಾಡ್ತಾರೆ. ಕೆಲವೊಮ್ಮೆ ಇಂತಹ ಗೊಂದಲವಾಗುತ್ತೆ. ಆದರೆ ನಮ್ಮ ಪೊಲೀಸರು ತಪ್ಪು ಮಾಡಿಲ್ಲ. ಅಜಿತ್ ಭಾರತಿ ಎಂಬ ಯುಟ್ಯೂಬರ್ ಅವನನ್ನು ಅರೆಸ್ಟ್ ಮಾಡಲು ಹೋಗಿದ್ದರು ಅಷ್ಟೇ ಎಂದರು.
undefined
ರಾಹುಲ್ ಗಾಂಧಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಬಂಧನಕ್ಕೆ ಯುಪಿಗೆ ತೆರಳಿ ಪೇಚಿಗೆ ಸಿಲುಕಿದ ಕರ್ನಾಟಕ ಪೊಲೀಸ್!
ಇನ್ನು ದರ್ಶನ್ ಪೊಲೀಸ್ ಕಸ್ಟಡಿಗೆ ಪಡೆದ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಸೇರಿ ನಾಲ್ಕು ಜನರನ್ನ ಪೊಲೀಸರು ಒಂದು ವಾರ ಕಸ್ಟಡಿಗೆ ಕೇಳಿದ್ದರು. ಆದರೆ ಎರಡು ದಿನ ಕೊಟ್ಟಿದ್ದಾರೆ. ಅಷ್ಟರಲ್ಲಿ ವಿಚಾರಣೆ ಮುಗಿಸಿ ಜೆಸಿಗೆ ರಿಪೋರ್ಟ್ ಕೊಡ್ತಾರೆ. ದರ್ಶನ್ ವಿಚಾರವಾಗಿ ಸಚಿವರಿಗೆ ಮುಖ್ಯಮಂತ್ರಿ ಒತ್ತಡ ಅದು ಇದು ಏನೂ ಇಲ್ಲ. ಸಿಎಂ
ಸಿಎಂ ಗೆ ಬ್ರೀಫಿಂಗ್ ಮಾಡೋ ಅಧಿಕಾರಿಗಳು ಬಿಟ್ರೆ ಯಾರೂ ಇದರಲ್ಲಿ ಇಂಟರ್ ಫಿಯರ್ ಆಗಿಲ್ಲ. ಅದರ ಅವಶ್ಯಕತೆನೂ ಯಾರಿಗೂ ಇಲ್ಲ. ನಾನಾಗಲಿ, ಸಿಎಂ ಸಿದ್ದರಾಮಯ್ಯ ಅವರಾಗಲಿ ಯಾರೂ ಕೂಡ ಇದರಲ್ಲಿ ಇಲ್ಲ ಎಂದರು.
ಬಿಜೆಪಿ ಶಾಸಕರ ಸಂಬಂಧಿ ಈ ಕೇಸ್‌ನಲ್ಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಇರಬಹುದೇನೋ ಆ ಬಗ್ಗೆ ನನಗೆ ಗೊತ್ತಿಲ್ಲ. ಯಾವುದೇ ಪಕ್ಷದ ಆಧಾರದ ಮೇಲೆ ಈ ಕೇಸ್ ನೋಡುತ್ತಿಲ್ಲ. ಒಂದು ವೇಳೆ ನಮ್ಮ ಪಕ್ಷದಲ್ಲೇ ಇದ್ದರೂ ತಪ್ಪಿತಸ್ಥರೇ ಆಗಿರ್ತಾರೆ. ಬೇರೆ ಪಕ್ಷದಲ್ಲಿದ್ದರೂ ತಪ್ಪಿತಸ್ಥರೇ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಹೋಗುತ್ತೆ ಎಂದರು.
ಲೋಕಸಭೆ ಫಲಿತಾಂಶದ ಬಗ್ಗೆ ಎಐಸಿಸಿಯಿಂದ ಸತ್ಯ ಶೋಧನಾ ಕಮಿಟಿ ರಚನೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಎಐಸಿಸಿ ಮಟ್ಟದಲ್ಲಿ ಗೆಲುವಿನ ನಿರೀಕ್ಷೆ ಬೇರೆ ಇತ್ತು. ಸುಮಾರು 15ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ನಾವು 15 ಸ್ಥಾನ ಗೆಲ್ಲಲಿಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಅಂತ ಆತ್ಮಾವಲೋಕನ ಅಥವಾ ಫ್ಯಾಡಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲ, ಎಲ್ಲ ರಾಜ್ಯಕ್ಕೂ ಮಾಡಿದ್ದಾರೆ ಎಂದರು. ಇದೇ ವೇಳೆ ಈ ವರದಿ ಆಧಾರದ ಮೇಲೆ ಸಚಿವ ಸಂಪುಟ ಬದಲಾವಣೆ ಆಗುತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನಮಗೆ ಗೊತ್ತಾಗಲ್ಲ. ಫ್ಯಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ. ಎಐಸಿಸಿ ಇರೋದೆ ನಮ್ಮನ್ನ ರೆಗ್ಯುಲೇಟ್ ಮಾಡೋಕೆ ಎಂದು ಸ್ಪಷ್ಟಪಡಿಸಿದರು.
ಪ್ರಭಾವಿಗಳಿಗೂ ತಟ್ಟುತ್ತಾ ಪೊಲೀಸರ ತನಿಖೆ ಬಿಸಿ..? ದರ್ಶನ್ ಜೊತೆ ಮಾತಾಡಿದ್ದು ಏನು ಮತ್ತು ಯಾಕೆ?
ಇನ್ನು ವಾಲ್ಮೀಕಿ ನಿಗಮ ಹಗರಣ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಆ ಪ್ರಕರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಬ್ಯಾಂಕಿಂಗ್ ವಿಚಾರವಾಗಿ ಸಿಬಿಐ ತನಿಖೆ ಮಾಡುತ್ತಿದ್ದಾರೆ. ನಿಗಮದ ವಿಚಾರವಾಗಿ ಎಸ್‌ಐಟಿ ತನಿಖೆ ಮಾಡುತ್ತಿದೆ ಎಂದರು. ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಅರೋಪಿಗಳಿಗೆ ಜೈಲಿನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್ ಕೊಡ್ತಾರೆ ಎನ್ನುವ ಪ್ರಶ್ನೆಗೆ, ಕೆಲವು ಬಾರಿ ಇದು ಸತ್ಯ ಇರಬಹುದು, ಹಿಂದೆ ಫೋನ್ ಜೊತೆಗೆ ಒಂದಿಷ್ಟು ವಸ್ತು ಸಿಕ್ಕಿವೆ. ಯಾರು ಜೈಲರ್ ಇರ್ತಾರೆ ಅದನ್ನ ರೆಗ್ಯುಲೆಟ್ ಮಾಡ್ತಾರೆ ಎಂದರು.