
ಕಲಬುರಗಿ(ಜ.28): ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್, ಆತನ ಅಳಿಯ ಶೀಕಾಂತ ಊಡಗಿಯವರ ಬ್ಯಾಂಕ್ ಖಾತೆಗಳಲ್ಲಿ 2022ರ ಜು.1 ರಿಂದ ಡಿಸೆಂಬರ್ 31ರ ವರೆಗಿನ 6 ತಿಂಗಳ ಅವಧಿಯಲ್ಲಿ ಯಾವುದೇ ಹಣದ ವಹಿವಾಟು ನಡೆದಿಲ್ಲ ಎಂದು ಕಲಬುರಗಿ ಸೂಪರ್ ಮಾರ್ಕೆಟ್ ಮುಖ್ಯರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮುಖ್ಯಶಾಖೆಯ ಮ್ಯಾನೇಜರ್, ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಗರಣದಿಂದ ತಮ್ಮನ್ನು ಬಚಾವ್ ಮಾಡಲು ಸಿಐಡಿ ಅಧಿಕಾರಿ ಶಂಕರಗೌಡರಿಗೆ 76 ಲಕ್ಷ ರು.ಗಳನ್ನು ತನ್ನ ಅಳಿಯ ಶ್ರೀಕಾಂತನ ಮೂಲಕ ನೀಡಿದ್ದೇನೆ. ಬ್ಯಾಂಕ್ ಆಫ್ ಬರೋಡಾ ಮೂಲಕ ಈ ಹಣ ಡ್ರಾ ಮಾಡಲಾಗಿದೆ ಎಂದು ಆರ್‌ಡಿ ಪಾಟೀಲ್ ಆಡಿಯೋದಲ್ಲಿ ಹೇಳಿಕೆ ನೀಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ.
PSI Recruitment Scam: ಎಸ್‌ಐ ಕೇಸ್ ವಿಚಾರಣೆಯಿಂದ ಸಿಜೆ ಪೀಠ ಹಿಂದಕ್ಕೆ
ಈ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲರು, ಬ್ಯಾಂಕ್ ಆಫ್ ಬರೋಡಾಕ್ಕೆ ಪತ್ರ ಬರೆದು, ಆರ್‌ಡಿಪಿ ಹಾಗೂ ಆತನ ಅಳಿಯ ಶ್ರೀಕಾಂತನ ಖಾತೆಗಳ ಹಣಕಾಸು ವಹಿವಾಟಿನ ಮಾಹಿತಿ ಕೋರಿದ್ದರು. ಈ ಕೋರಿಕೆ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್, ಸಿಐಡಿ ಕಚೇರಿಗೆ ಪತ್ರ ಬರೆದಿದ್ದು, ಬ್ಯಾಂಕ್ ಆಫ್ ಬರೋಡಾದಲ್ಲಿ ರುದ್ರಗೌಡ ಪಾಟೀಲ್ ಹೆಸರಲ್ಲಿ 2 ಹಾಗೂ ಅವರ ಅಳಿಯ ಶ್ರೀಕಾಂತ ಸಿದ್ದರಾಮ ಊಡಗಿ ಹೆಸರಲ್ಲಿ ಎರಡು...ಹೀಗೆ ನಾಲ್ಕು ಬ್ಯಾಂಕ್ ಖಾತೆಗಳಿವೆ. 2022ರ ಮೇ ತಿಂಗಳ 19 ರಿಂದಲೇ ಸಿಐಡಿ ಕೋರಿಕೆ ಮೇರೆಗೆ ಈ ಖಾತೆಗಳು ಫ್ರೀಜ್ ಆಗಿವೆ. ಹೀಗಾಗಿ ಈ ಖಾತೆಗಳಿಂದ ಹಣಕಾಸಿನ ವಹಿವಾಟು ನಡೆದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ