ಈ ಹೆದ್ದಾರಿ ಕರ್ನಾಟಕದ ವಿಕಾಸಕ್ಕೆ ನಾಂದಿ; ಭೂಮಿ ನೀಡಿದ ರೈತರಿಗೆ 4 ಸಾವಿರ ಕೋಟಿ ರೂ. ಪರಿಹಾರ ನೀಡಿದ್ದೇವೆ: ನಿತಿನ್‌ ಗಡ್ಕರಿ

By BK Ashwin  |  First Published Mar 12, 2023, 1:51 PM IST

ಒಂದು ಗಂಟೆಯಲ್ಲಿ ಈ ಹೆದ್ದಾರಿ ಮೂಲಕ ಬೆಂಗಳೂರು - ಮೈಸೂರು ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಆರಂಭದಲ್ಲಿ ಈ ಹೆದ್ದಾರಿ ಮಾಡುವಾಗ ಅನೇಕ ಅಡಚಣೆ ಎದುರಾಯ್ತು. ಭೂಮಿ ಸ್ವಾಧೀನ ಪ್ರಕ್ರಿಯೆ ಸಹ ಆರಂಭದಲ್ಲಿ ಕಷ್ಟವಾಗಿತ್ತು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 


ಮಂಡ್ಯ (ಮಾರ್ಚ್‌ 12, 2023): ಮಂಡ್ಯದ ಗೆಜ್ಜಲಗೆರೆಯ ಸಮಾವೇಶದಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಸಹ ಪ್ರಧಾನಿ ಮೋದಿಯೊಂದಿಗೆ ಭಾಗಿಯಾಗಿದ್ದಾರೆ. ಸಮಾವೇಶಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಜತೆ ಇವರು ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿಯ ಗ್ಯಾಲರಿಯನ್ನು ವೀಕ್ಷಣೆ ಮಾಡಿದ್ರು. ನಂತರ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ, ಮೈಸೂರು - ಕುಶಾಲನಗರ ಹೆದ್ದಾರಿ ಸೇರಿ ಅನೇಕ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿಗೂ ಮಾತನಾಡಿದ ನಿತಿನ್‌ ಗಡ್ಕರಿ, ಈ ಹೆದ್ದಾರಿ ಕರ್ನಾಟಕದ ವಿಕಾಸಕ್ಕೆ ನಾಂದಿ ಹಾಡಲಿದೆ. ಹಾಗೂ, ಪ್ರವಾಸೋದ್ಯಮಕ್ಕೆ ಈ ಹೆದ್ದಾರಿ ಅನುಕೂಲ ಮಾಡಿಕೊಡಲಿದೆ ಎಂದು ಭವಿಷ್ಯ ನುಡಿದರು.

ಅಲ್ಲದೆ, ಒಂದು ಗಂಟೆಯಲ್ಲಿ ಈ ಹೆದ್ದಾರಿ ಮೂಲಕ ಬೆಂಗಳೂರು - ಮೈಸೂರು (Bengaluru - Mysuru) ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಆರಂಭದಲ್ಲಿ ಈ ಹೆದ್ದಾರಿ (Highway) ಮಾಡುವಾಗ ಅನೇಕ ಅಡಚಣೆ ಎದುರಾಯ್ತು. ಭೂಮಿ ಸ್ವಾಧೀನ ಪ್ರಕ್ರಿಯೆ (Land Acquisition Process) ಸಹ ಆರಂಭದಲ್ಲಿ ಕಷ್ಟವಾಗಿತ್ತು. ಆದರೆ, ರೈತರ ಜಮೀನನ್ನು (Land) ಪಡೆದರೂ ನಾಲ್ಕು ಸಾವಿರ ಕೋಟಿ ರೂ. ಯನ್ನು ಅವರಿಗೆ ಪರಿಹಾರವಾಗಿ ನೀಡಿದ್ದೇವೆ‌ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Union Minister Nitin Gadkari) ಹೇಳಿದ್ದಾರೆ. 

Tap to resize

Latest Videos

ಇದನ್ನು ಓದಿ: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ: ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಜ್ಜೆ ಹಾಕಿದ ನಮೋ

ಹಾಗೂ, ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಆರಂಭದಲ್ಲಿ 7 ಅಂಡರ್‌ಪಾಸ್‌ ಮಾತ್ರ ಇತ್ತು. ಬಳಿಕ, ಇದನ್ನು ಬದಲಾಯಿಸಿ 89 ಅಂಡರ್ ಪಾಸ್ ಮಾಡಲಾಗಿದೆ. ಸ್ಥಳೀಯ ಜನರ ಬೇಡಿಕೆಗಳ ಆಧಾರದ ಮೇಲೆ ಹೆಚ್ಚಿಸಲಾಗಿದೆ. ಇನ್ನು, ಈ ಹೆದ್ದಾರಿಗಾಗಿ ಶ್ರಮಿಸಿದ ಎಲ್ಲಾ ಸಂಸದರಿಗೂ ಧನ್ಯವಾದಗಳು ಎಂದು ಸಹ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 

ಈ ಮಧ್ಯೆ, ಜಗತ್ತಿನಲ್ಲೇ ಗುರುತಿಸಿಕೊಂಡಿರುವ ಮೈಸೂರು ಭಾಗಕ್ಕೆ ಈ ಹೆದ್ದಾರಿ ಕೊಡುಗೆ ನೀಡಿದ್ದೇವೆ. ಪ್ರಧಾನಿ ಮೋದಿಗೆ ಧನ್ಯವಾದಗಳು. ಇಂದು ಐತಿಹಾಸಿಕ ದಿನ. ಸಾಂಸ್ಕೃತಿಕ ನಗರ ಮೈಸೂರು ಹಾಗೂ ಜಗತ್ತಿನ ಐಟಿ ರಾಜಧಾನಿ ಬೆಂಗಳೂರನ್ನು ಈ ರಸ್ತೆ ಸಂಪರ್ಕಿಸುತ್ತದೆ ಎಂದೂ ನಿತಿನ್‌ ಗಡ್ಕರಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!

ಜತೆಗೆ,  ಬೆಂಗಳೂರು - ಚೆನ್ನೈ ಸೂರತ್ ಹೆದ್ದಾರಿ ಕಾಮಗಾರಿ ಸಹ ಡಿಸೆಂಬರ್‌ನಲ್ಲಿ ಮುಕ್ತಾಯ ಆಗಲಿದೆ ಎಂದೂ ನಿತಿನ್‌ ಗಡ್ಕರಿ ಹೇಳಿದ್ದಾರೆ. ಹಾಗೂ, ತಮ್ಮ ಭಾಷಣದಲ್ಲಿ ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿವಾರಿಸುವ ಬಗ್ಗೆಯೂ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಾತನಾಡಿದ್ದಾರೆ. 

ಇದನ್ನೂ ಓದಿ: PM Modi In Karnataka: 44 ವರ್ಷಗಳ ಬಳಿಕ ಮಂಡ್ಯಕ್ಕೆ ಪ್ರಧಾನಿ ಭೇಟಿ!

click me!