ಮಡಿಕೇರಿ-ವಿರಾಜಪೇಟೆ ರಸ್ತೆ: ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಿಸಲು ಗಡ್ಕರಿ ಒಪ್ಪಿಗೆ

By Govindaraj S  |  First Published Jun 13, 2022, 5:00 AM IST

ನಗರದ ಹೊರವಲಯದ ರೆಸಾರ್ಚ್‌ ಒಂದರಲ್ಲಿ ತಂಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೊಡಗಿನ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌ ಮತ್ತು ಕೆ.ಜಿ.ಬೋಪಯ್ಯ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಕೊಡಗಿನ ರಸ್ತೆಗಳ ಅಭಿವೃದ್ಧಿ ಸಂಬಂಧ ಮನವಿ ಸಲ್ಲಿಸಿದರು.


ಮಡಿಕೇರಿ (ಜೂ.13): ನಗರದ ಹೊರವಲಯದ ರೆಸಾರ್ಚ್‌ ಒಂದರಲ್ಲಿ ತಂಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಕೊಡಗಿನ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌ ಮತ್ತು ಕೆ.ಜಿ.ಬೋಪಯ್ಯ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಕೊಡಗಿನ ರಸ್ತೆಗಳ ಅಭಿವೃದ್ಧಿ ಸಂಬಂಧ ಮನವಿ ಸಲ್ಲಿಸಿದರು.

ಚೆನ್ನರಾಯಪಟ್ಟಣ- ಸೋಮವಾರಪೇಟೆ- ಮಡಿಕೇರಿ ವಿರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ದ್ವಿಪಥ ರಸ್ತೆಯನ್ನಾಗಿ ಮಾರ್ಪಾಡು ಮಾಡುವಂತೆ ಶಾಸಕ ಅಪ್ಪಚ್ಚು ರಂಜನ್‌ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗುವ ಮಾರ್ಪಡಿಸಲಾಗುವುದು ಎಂದು ತಿಳಿಸಿದರು. ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿ ಗುರುತಿಸಿಕೊಂಡಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೇಬಲ್‌ ಕಾರ್‌ ನೀಡಲು ಅವಕಾಶವಿದ್ದು, ಕೂಡಲೇ ಅಂದಾಜು ಪಟ್ಟಿಸಲ್ಲಿಸಿದಲ್ಲಿ ಕೇಬಲ್‌ ಕಾರು ಮಂಜೂರು ಮಾಡುವುದಾಗಿಯೂ ನಿತಿನ್‌ ಗಡ್ಕರಿ ಹೇಳಿದರು.

Tap to resize

Latest Videos

ಸಂಸದಗೆ ಗಡ್ಕರಿ ತೂಕ ಇಳಿಕೆ ಚಾಲೆಂಜ್: 15 ಕೇಜಿ ತೂಕ ಇಳಿಸಿ 15,000 ಕೋಟಿ ಕೇಳಿದ ಅನಿಲ್‌!

ಚನ್ನರಾಯಪಟ್ಟಣ-ವಿರಾಜಪೇಟೆ ಹೆದ್ದಾರಿ ಮೇಲ್ದರ್ಜೆಗೆ: ಚನ್ನರಾಯಪಟ್ಟಣ- ಮಡಿಕೇರಿ- ವಿರಾಜಪೇಟೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ. ಮಡಿಕೇರಿ ಹೊರ ವಲಯದ ರೆಸಾರ್ಚ್‌ನಲ್ಲಿ ತಂಗಿರುವ ಸಚಿವರನ್ನು ಭೇಟಿ ಮಾಡಿದ ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್‌ ಅವರು ಈ ಸಂಬಂಧ ಮನವಿ ಸಲ್ಲಿಸಿದರು. 

ಚೆನ್ನರಾಯಪಟ್ಟಣ- ಸೋಮವಾರಪೇಟೆ- ಮಡಿಕೇರಿ ವಿರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ದ್ವಿಪಥ ರಸ್ತೆಯನ್ನಾಗಿ ಮಾರ್ಪಾಡು ಮಾಡುವಂತೆ ಶಾಸಕರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗುವ ಮಾರ್ಪಡಿಸಲಾಗುವುದು ಎಂದು ತಿಳಿಸಿದರು. ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿ ಗುರುತಿಸಿಕೊಂಡಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೇಬಲ್‌ ಕಾರ್‌ ನೀಡಲು ಅವಕಾಶವಿದ್ದು, ಕೂಡಲೇ ಅಂದಾಜು ಪಟ್ಟಿಸಲ್ಲಿಸಿದಲ್ಲಿ ಕೇಬಲ್‌ ಕಾರು ಮಂಜೂರು ಮಾಡುವುದಾಗಿಯೂ ನಿತಿನ್‌ ಗಡ್ಕರಿ ಹೇಳಿದರು. 

ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ: ಕೇಂದ್ರ ಸಚಿವ ಗಡ್ಕರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಖಾಸಗಿ ಭೇಟಿಯಾಗಿ ಕೊಡಗಿಗೆ ಜೂ.9ರಂದು ಆಗಮಿಸಿದ್ದರು. ಕುಶಾಲನಗರದ ಖಾಸಗಿ ರೆಸಾರ್ಚ್‌ಗೆ ಆಗಮಿಸಿದ ಕೇಂದ್ರ ಸಚಿವರನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಆತ್ಮೀಯವಾಗಿ ಬರಮಾಡಿಕೊಂಡರು. ಸಚಿವರು ನಾಲ್ಕು ದಿನಗಳಿಂದ ತಮ್ಮ ಕುಟುಂಬದೊಂದಿಗೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕಳೆದ ಗುರುವಾರ ಪಾಲಿಬೆಟ್ಟಖಾಸಗಿ ರೆಸಾರ್ಚ್‌ನಲ್ಲಿ ವಾಸ್ತವ ಹೂಡಿದ್ದ ಅವರು, ಶುಕ್ರವಾರದಿಂದ ಮಡಿಕೇರಿಯ ಹೊರ ವಲಯದಲ್ಲಿನ ಖಾಸಗಿ ರೆಸಾರ್ಚ್‌ನಲ್ಲಿ ತಂಗಿದ್ದಾರೆ.

click me!