ಪ್ರೆಸ್ ಕ್ಲಬ್ ಎಲೆಕ್ಷನ್ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಶ್ರೀಧರ್, ಉಪಾಧ್ಯಕ್ಷರಾಗಿ ಬೈದನಮನೆ ನೇಮಕ

Published : Jun 12, 2022, 05:48 PM ISTUpdated : Jun 12, 2022, 06:07 PM IST
ಪ್ರೆಸ್ ಕ್ಲಬ್ ಎಲೆಕ್ಷನ್ ಫಲಿತಾಂಶ ಪ್ರಕಟ: ಅಧ್ಯಕ್ಷರಾಗಿ ಶ್ರೀಧರ್, ಉಪಾಧ್ಯಕ್ಷರಾಗಿ ಬೈದನಮನೆ ನೇಮಕ

ಸಾರಾಂಶ

* ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟ * ಅಧ್ಯಕ್ಷರಾಗಿ ಶ್ರೀಧರ್, ಬೈದನಮನೆ ಉಪಾಧ್ಯಕ್ಷರಾಗಿ ನೇಮಕ * ಹಮೀದ್ ಪಾಳ್ಯ ವಿರುದ್ದ 200 ಮತಗಳ ಅಂತರದಲ್ಲಿ ಆನಂದ್ ಬೈದನಮನೆ ಗೆಲುವು

ಬೆಂಗಳೂರು, (ಜೂನ್.12): ತೀವ್ರ ಕುತೂಹಲ‌ ಕೆರಳಿಸಿದ್ದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ (Bangalore Press Club Election  Result) ಇಂದು(ಭಾನುವಾರ) ಪ್ರಕಟವಾಗಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ‌ ಅಧ್ಯಕ್ಷರಾಗಿ ಶ್ರೀಧರ್ , ಉಪಾಧ್ಯಕ್ಷರಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ವರದಿಗಾರ  ಆನಂದ್ ಪಿ. ಬೈದನಮನೆ ಆಯ್ಕೆಯಾಗಿದ್ದಾರೆ.

Digital Media Forum : ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ ಲಾಂಚ್

ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ ಹಾಗೂ ಕಾರ್ಯದರ್ಶಯಾಗಿ  ದೊಡ್ಡ ಬೊಮ್ಮಯ್ಯ, ಜಂಟಿ ಕಾರ್ಯದರ್ಶಿ- ಮಹಾಂತೇಶ್ ಹಿರೇಮಠ, ಹಾಗೂ ಖಜಾಂಚಿ- ಮೋಹನ್ ನೇಮಕವಾಗಿದ್ದಾರೆ.

ಪ್ರೆಸ್ ಕ್ಲಬ್ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಜಿ.ಗಣೇಶ್, ಆಲ್ಫ್ರೆಡ್, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯೆರಾಗಿ ರೋಹಿಣಿ ಹಾಗೂ ಮಿನಿ ತೇಜಸ್ವಿ ಅವರು ಗೆಲುವಿನ‌ ನಗೆ ಬೀರಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ಹಮೀದ್ ಪಾಳ್ಯ ವಿರುದ್ದ ಆನಂದ್ ಬೈದನಮನೆ ಅವರು  200 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ಅಧ್ಯಕ್ಷರಾದ ಶ್ರೀಧರ್ ಅವರಿಗೆ 302 ಮತ ಪಡೆದರೆ, ಕಮಿಟಿ ಸದಸ್ಯೆ ರೋಹಿಣಿಯವರಿಗೆ ಅತಿ ಹೆಚ್ಚು 307 ಮತ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ