ಹೆಚ್‌ಡಿಕೆ ಕೇಂದ್ರ ಸಚಿವರಾದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್ ಸಜ್ಜು?

By Kannadaprabha News  |  First Published Jul 1, 2024, 8:53 AM IST

 ಕೇಂದ್ರದ ಭಾರಿ ಕೈಗಾರಿಕಾ ಸಚಿವರಾಗಿ ಕಾರ್ಯಭಾರ ವಹಿಸಿಕೊಂಡಿರುವ ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಗಲ ಮೇಲಿರುವ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸಲು ಪುತ್ರ ನಿಖಿಲ್ ಕುಮಾರಸ್ವಾಮಿ ಸಜ್ಜಾಗುತ್ತಿದ್ದಾರೆ.


ಬೆಂಗಳೂರು (ಜು.1)  ಕೇಂದ್ರದ ಭಾರಿ ಕೈಗಾರಿಕಾ ಸಚಿವರಾಗಿ ಕಾರ್ಯಭಾರ ವಹಿಸಿಕೊಂಡಿರುವ ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಗಲ ಮೇಲಿರುವ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸಲು ಪುತ್ರ ನಿಖಿಲ್ ಕುಮಾರಸ್ವಾಮಿ ಸಜ್ಜಾಗುತ್ತಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ(channapattana by-election 2024)ದ ಉಪಚುನಾವಣೆ ಹೊತ್ತಿನಲ್ಲಿ ಅಥವಾ ನಂತರ ಕುಮಾರಸ್ವಾಮಿ(hd kumaraswamy) ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವ ನಿರೀಕ್ಷೆಯಿದ್ದು, ಆ ಸ್ಥಾನಕ್ಕೆ ನಿಖಿಲ್(Nikhil kumaraswmy) ಈಗಿನಿಂದಲೇ ನಾಯಕತ್ವದ ತಯಾರಿ ನಡೆಸಿದ್ದಾರೆ. 

Tap to resize

Latest Videos

ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು! ರಾಜು ಕಾಗೆ ತವರು ಕ್ಷೇತ್ರದಲ್ಲೇ ಇದೆಂಥ ಅವ್ಯವಸ್ಥೆ!?

ಕುಟುಂಬ ರಾಜಕಾರಣದ ಟೀಕೆ ಕೇಳಿಬರಬಹುದು ಎಂಬ ಕಾರಣಕ್ಕಾಗಿ ಹಿಂದೇಟು ಹಾಕಿದಲ್ಲಿ ನಿಖಿಲ್ ಅವರ ಬದಲು ಬೇರೊಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬಹುದು. ಆದರೂ, ನಿಖಿಲ್‌ಗೆ ಕಾರ್ಯಾಧ್ಯಕ್ಷ ಅಥವಾ ಪ್ರಧಾನ ಕಾರ್ಯದರ್ಶಿಯಂಥ ಮಹತ್ವದ ಹುದ್ದೆ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ.ಕುಮಾರಸ್ವಾಮಿ ಅವರ ಸಹೋದರ ಎಚ್.ಡಿ.ರೇವಣ್ಣ(HD Revanna) ಅವರ ಕುಟುಂಬ ಈಗ ಆರೋಪಗಳ ಸುಳಿಯಲ್ಲಿ ಸಿಲುಕಿ ಇಬ್ಬರೂ ಪುತ್ರರು ಜೈಲುಪಾಲಾದ ಬಳಿಕ ನಿಖಿಲ್ ಕುಮಾರಸ್ವಾಮಿಯೇ ಮುಂದೆ ಪಕ್ಷವನ್ನು ನಿಭಾಯಿಸಲಿ ಎಂಬ ಅಭಿಪ್ರಾಯ ಸಹಜವಾಗಿಯೇ ಪಕ್ಷದ ಕಾರ್ಯಕರ್ತರಲ್ಲಿ ಮೂಡುತ್ತಿದೆ.

ಕಳೆದ ಲೋಕಸಭಾ ಚುನಾವಣೆಗೂ ಮೊದಲೇ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಮುಖ ಚಟುವಟಿಕೆಗಳಲ್ಲಿ ಪುತ್ರ ನಿಖಿಲ್‌ರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಶುರು ಮಾಡಿದರು. ಪಕ್ಷದ ಪ್ರತಿಯೊಂದು ಸಭೆ, ಮಹತ್ವದ ಮಾತುಕತೆಗಳಲ್ಲಿ ಇತರ ಮುಖಂಡರ ಬದಲು ನಿಖಿಲ್‌ ಅವರನ್ನೇ ಕರೆದೊಯ್ಯುತ್ತಿದ್ದರು. 

ನಿಖಿಲ್ ಉಪಸ್ಥಿತಿ ಕಡ್ಡಾಯ ಎಂಬಂತಾಗಿತ್ತು.ತಂದೆ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತಾ ಸಭೆಗಳನ್ನು ನಿಖಿಲ್‌ ನಡೆಸಿದ್ದರು. ಹೀಗಾಗಿ ಅವರೇ ಮುಂದಿನ ರಾಜ್ಯಾಧ್ಯಕ್ಷರಾಗಲು ಸೂಕ್ತ ಎಂಬ ನಿಲುವು ಪಕ್ಷದಲ್ಲಿ ಕಂಡು ಬಂದಿತು. ಚುನಾವಣೆ ಬಳಿಕವೂ ನಿಖಿಲ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರರಾಜಕಾರಕ್ಕೆ ಹೋಗುತ್ತಿದ್ದಂತೆಯೇ ಮಗನಿಗೆ ರಾಜ್ಯ ರಾಜ್ಯರಾಜಕಾರಣದ ಪಟ್ಟಕಟ್ಟಲು ಮುಂದಾದ ಹೆಚ್‌ಡಿಕೆ

ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಆ ಕ್ಷೇತ್ರದಿಂದ ನಿಖಿಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಒತ್ತಡವೂ ಕೇಳಿಬರುತ್ತಿದೆ. ಆ ಚುನಾವಣೆ ಹೊತ್ತಿಗೆ ಅಥವಾ ಬಳಿಕ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಭವವಿದೆ ಎಂದು ತಿಳಿದು ಬಂದಿದೆ.

click me!