ನೈಸ್ ಯೋಜನೆ ವಿಚಾರವಾಗಿ ತಮ್ಮನ್ನು ಕೆಣಕಿರುವ ಡಿ.ಕೆ.ಶಿವಕುಮಾರ್ ಸೋದರರ ವಿರುದ್ಧ ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರಾನೇರ ಸಂಘರ್ಷಕ್ಕೆ ನಿಂತಿದ್ದಾರೆ. ಸೋಮವಾರ ಅಥವಾ ಮಂಗಳವಾರ ನೈಸ್ ಅಕ್ರಮಗಳು, ಡಿ.ಕೆ.ಶಿವಕುಮಾರ್ ಸೋದರರು ಕೊಳ್ಳೆ ಹೊಡೆದಿರುವ ನೈಸ್ ಭೂಮಿಯ ದಾಖಲೆಗಳನ್ನು ಬಹಿರಂಗ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ರಾಮನಗರ (ಆ.21) : ನೈಸ್ ಯೋಜನೆ ವಿಚಾರವಾಗಿ ತಮ್ಮನ್ನು ಕೆಣಕಿರುವ ಡಿ.ಕೆ.ಶಿವಕುಮಾರ್ ಸೋದರರ ವಿರುದ್ಧ ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರಾನೇರ ಸಂಘರ್ಷಕ್ಕೆ ನಿಂತಿದ್ದಾರೆ. ಸೋಮವಾರ ಅಥವಾ ಮಂಗಳವಾರ ನೈಸ್ ಅಕ್ರಮಗಳು, ಡಿ.ಕೆ.ಶಿವಕುಮಾರ್ ಸೋದರರು ಕೊಳ್ಳೆ ಹೊಡೆದಿರುವ ನೈಸ್ ಭೂಮಿಯ ದಾಖಲೆಗಳನ್ನು ಬಹಿರಂಗ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 2004ರಲ್ಲಿ ಡಿ.ಕೆ.ಶಿವಕುಮಾರ್(DK Shivakumar) ನಗರಾಭಿವೃದ್ಧಿ ಸಚಿವರಾಗಿದ್ದು, ರಾಮನಗರ(Ramanagar) ಜಿಲ್ಲೆಯ ಉದ್ಧಾರಕ್ಕೋ ಅಥವಾ ನೈಸ್ ಕಂಪನಿಯನ್ನು ಉದ್ಧಾರ ಮಾಡಿ ರೈತರ ಭೂಮಿ ಲೂಟಿ ಹೊಡೆಯಲಿಕ್ಕೋ? ನೈಸ್ ಕಂಪನಿ ಮಾಡಿರುವ ಲೂಟಿಯಲ್ಲಿ ಡಿ.ಕೆ.ಸಹೋದರರ ಪಾಲು ಎಷ್ಟಿದೆ ಎಂಬ ಕುರಿತ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ನನ್ನಷ್ಟು ಜನರಿಗೆ ಹತ್ತಿರವಾಗಿ ಸಿಗುವವನು ಭೂಮಿಮೇಲೆ ಯಾರೂ ಇಲ್ಲ: ಎಚ್‌ಡಿಕೆ
ಇದೇ ವೇಳೆ ಡಿ.ಕೆ.ಶಿವಕುಮಾರ್ ಸೋದರ ವಿರುದ್ಧವೂ ಕಿಡಿಕಾರಿದ ಅವರು, ನೈಸ್(NICE Scam) ಭೂಮಿ ಸೇರಿ ಬೆಂಗಳೂರು ಸುತ್ತ ರೈತರ ಭೂಮಿ ಲೂಟಿ ಮಾಡಿಕೊಂಡು ಸಂಸದ ಡಿ.ಕೆ.ಸುರೇಶ್(DK Suresh) ಬದುಕುತ್ತಿದ್ದಾರೆ. 2013ರಲ್ಲಿ ಸಂಸದರಾಗುವ ಮೊದಲು ಡಿ.ಕೆ.ಸುರೇಶ್ ಅವರ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಸಂಸದರಾಗಿ ಎಂಟು ವರ್ಷದಲ್ಲಿ ಆಸ್ತಿ ಎಷ್ಟಾಗಿದೆ? ಇದೆಲ್ಲಾ ಗೊತ್ತಿಲ್ಲದ ವಿಷಯವಾ? ಎಂದು ಕಿಡಿಕಾರಿದರು.
ದೇವೇಗೌಡರೇ ಸಹಿ ಹಾಕಿದ್ದು: ನೈಸ್ ಯೋಜನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಒಪ್ಪಂದ ಮಾಡಿಕೊಂಡಿದ್ದು. ಇಲ್ಲ ಎಂದು ನಾನೆಲ್ಲಿ ಹೇಳಿದ್ದೇನೆ ಎಂದ ಕುಮಾರಸ್ವಾಮಿ, ದೇವೇಗೌಡರು ರಸ್ತೆ ಆಗಲಿ, ಬೆಂಗಳೂರು-ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿ ಎಂದು ಯೋಜನೆಗೆ ಒಪ್ಪಿಗೆ ನೀಡಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಮನಗರ ಜಿಲ್ಲೆಯ ಮಾಯಗಾನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ 15-20 ಶಾಲಾ ಮಕ್ಕಳು ಸಾವಿಗೀಡಾಗಿದ್ದರು. ಅವತ್ತೇ ಬೆಂಗಳೂರು-ಮೈಸೂರು ನಡುವೆ ನಾಲ್ಕುಪಥದ ಹೆದ್ದಾರಿ ಮಾಡಬೇಕು ಎಂದು ದೇವಗೌಡರು ತೀರ್ಮಾನ ಮಾಡಿದ್ದರು. ಆದರೆ
ಹಣ ಇಲ್ಲ ಎನ್ನುವ ಕಾರಣಕ್ಕೆ ಹೆಗಡೆ ಅವರ ಕಾಲದಲ್ಲಿ ಆ ಯೋಜನೆ ಆಗಲಿಲ್ಲ. ಕೊನೆಗೆ ದೇವೇಗೌಡರು ಮುಖ್ಯಮಂತ್ರಿ ಆದ ಮೇಲೆ ಈ ಯೋಜನೆಗೆ ಚಾಲನೆ ನೀಡಿದರು ಎಂದರು.
ದೇವೇಗೌಡರು ಮಾಡಿಕೊಂಡ ಒಪ್ಪಂದದಂತೆ ರಸ್ತೆ ಆಗಿದ್ದಿದ್ದರೆ ಏಷ್ಯಾಖಂಡದಲ್ಲೇ ಬೆಂಗಳೂರು-ಮೈಸೂರು ನಗರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ಜನರಿಗೆ ಜೀವನೋಪಾಯ ಸಿಗುತ್ತಿತ್ತು. ಆದರೆ, ಈ ಲೂಟಿಕೋರರು ಮಾಡಿದ್ದೇನು? ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕೊಳ್ಳೆ ಹೊಡೆದರು ಎಂದರು.
ನಮ್ಮಲ್ಲಿ ನೈಸ್ ಆಸ್ತಿ ಇದ್ದರೆ ಇಡೀ ಕುಟುಂಬ ನಿವೃತ್ತಿ: ಎಚ್‌ಡಿಕೆ
ಕುಮಾರಸ್ವಾಮಿ ಮಾಡಿರುವ ಎಲ್ಲಾ ಕೆಲಸಗಳಿಗೆ ಸಾಕ್ಷ್ಯ ಗುಡ್ಡೆಗಳಿವೆ. ಅವೆಲ್ಲ ಕಣ್ಣಿಗೆ ಕಾಣುತ್ತಿವೆ. ಡಿ.ಕೆ.ಸೋದರರು ಬೆಟ್ಟ-ಗುಡ್ಡಗಳನ್ನು ಹೊಡೆದು ಚೀನಾಗೆ ಸಾಗಿಸಿದ್ದರ ಬಗ್ಗೆ ಜಿಲ್ಲೆಯಲ್ಲಿ ಕರಗಿರುವ ಬೆಟ್ಟಗುಡ್ಡಗಳೇ ಸಾಕ್ಷಿ. ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದು ದೇವೇಗೌಡರು, ನೀರಿನ ಯೋಜನೆ ತಂದಿದ್ದು ನಾನು ಎಂದು ಹೇಳಿದರು.