ಗೋಡೆಗಳ ನಡುವೆ ಹೊಸ ವರ್ಷದ ಸಂಭ್ರಮ

By Kannadaprabha NewsFirst Published Jan 1, 2021, 8:12 AM IST
Highlights

ಹೋಟೆಲ್‌, ಪಬ್‌, ಫಾರ್ಮ್ ಹೌಸ್‌ಗಳಲ್ಲಿ ಕಳೆಗಟ್ಟಿದ ಸಂಭ್ರಮಾಚರಣೆ | ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಸ್ನೇಹಿತರು ಕುಟುಂಬ ಸದಸ್ಯರು ಸೇರಿ ಸಂಭ್ರಮ

ಬೆಂಗಳೂರು(ಜ.01): ಕೊರೋನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರ ಪರಿಣಾಮ ಈ ಬಾರಿ ಹೊಸ ವರ್ಷಾಚರಣೆಯ ಸಂಭ್ರಮ ನೀರಸವಾಗಿದ್ದರೂ ಮನೆಗಳು, ಹೊಟೇಲ್‌, ಪಬ್‌, ಕ್ಲಬ್‌ ಮುಂತಾದ ಸ್ಥಳಗಳಲ್ಲಿ ಸಾಕಷ್ಟುಕಳೆಗಟ್ಟಿತ್ತು.

ಸಾರ್ವಜನಿಕ ಸ್ಥಳಗಳು, ಹೊರಾಂಗಣದಲ್ಲಿ ಎಲ್ಲ ರೀತಿಯ ಸಂಭ್ರಮಾಚರಣೆಗೆ ನಿಷೇಧಿಸಿದ ಹಿನ್ನೆಲೆಯಲ್ಲಿ ಮನೆಗಳು, ಹೋಟೆಲ್‌ಗಳು, ಪಬ್‌ಗಳು, ಕ್ಲಬ್‌ಗಳು, ಫಾಮ್‌ರ್‍ ಹೌಸ್‌ಗಳಲ್ಲಿ ಈ ಬಾರಿ ಸಂಭ್ರಮಾಚರಣೆ ಕಳೆಗಟ್ಟಿತ್ತು. ಸ್ನೇಹಿತರು, ಕುಟುಂಬದ ಸದಸ್ಯರು, ಪರಿಚಿತರು ಆಯ್ದ ಜಾಗಳಲ್ಲಿ ಸೇರಿಕೊಂಡು ಈ ಬಾರಿ ಹೊಸ ವರ್ಷವನ್ನು ಸ್ವಾಗತಿಸಿದರು. ರಾತ್ರಿ ಹನ್ನೆರಡು ಗಂಟೆಗೆ ಕೇಕ್‌ ಕತ್ತರಿಸಿ, ಸಿಹಿ ವಿತರಿಸಿ ಚಪ್ಪಾಳೆಗಳೊಂದಿಗೆ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು.

ನಗರದ ಹೊರವಲಯದಲ್ಲಿ ಪಾರ್ಟಿ, ಮೋಜು, ಮಸ್ತಿ: ಟೋಲ್‌ನಲ್ಲಿ ವಾಹನಗಳ ಸಾಲು

ಪಬ್‌, ಕ್ಲಬ್‌ಗಳಲ್ಲಿ ಹೊಸ ವರ್ಷಾಚರಣೆ ಮಾಡಿದ ಯುವಕ-ಯುವತಿಯರು ಕೊರೋನಾ ನಿಯಮಾವಳಿ ನಡುವೆ ತಗ್ಗಿದ ಡಿಜೆ ಸಂಗೀತ, ಹಿಂದಿ, ಇಂಗ್ಲಿಷ್‌ ಹಾಡುಗಳ ನಡುವೆ ಪರಪಸ್ಪರ ಅಪ್ಪಿಕೊಂಡು ಆತ್ಮೀಯವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು.

ಸಾಮಾನ್ಯವಾಗಿ ನಗರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ಹಾಟ್‌ ಸ್ಪಾರ್ಟ್‌ಗಳೆಂದೇ ಕರೆಯಲಾಗುವ ಬ್ರಿಗೇಡ್‌ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಚಚ್‌ರ್‍ ಸ್ಟ್ರೀಟ್‌, ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆಗಳಲ್ಲಿ ಈ ಬಾರಿ ಮುಕ್ತವಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್‌ ಹಾಕಿದ್ದರಿಂದ ಆ ರಸ್ತೆಗಳಲ್ಲಿ ಬೆರಳೆಣಿಕೆ ಜನರು ಓಡಾಡುತ್ತಿದ್ದರು. ಹಿಂದಿನ ವರ್ಷಗಳಲ್ಲಿ ಈ ರಸ್ತೆಗಳಲ್ಲಿ ಝಗಮಗಿಸುವ ವಿದ್ಯುತ್‌ ದೀಪಾಲಂಕಾರದ ನಡುವೆ ಸಾವಿರಾರು ಮಂದಿ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ಹೊಸ ವರ್ಷ ಸ್ವಾಗತಿಸುತ್ತಿದ್ದರು. ಆದರೆ, ಈ ಬಾರಿ ಜನದಟ್ಟಣೆ ತಪ್ಪಿಸುವ ಉದ್ದೇಶದಿಂದಲೇ ಈ ಪ್ರದೇಶದಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಹೀಗಾಗಿ ಆ ಪ್ರದೇಶದಲ್ಲಿ ಜನಸಂಚಾರವೇ ವಿರಳವಾಗಿತ್ತು.

2020ರ ಕೊನೆಯ ದಿನ 150 ಕೋಟಿ ಮದ್ಯ ಮಾರಾಟ! 2 ವರ್ಷದಲ್ಲಿ ಇದೇ ದಾಖಲೆ

ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಈ ಪ್ರದೇಶದ ಪಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಈ ಬಾರಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಕೇವಲ ಒಂದೇ ರಾತ್ರಿಯಲ್ಲಿ ಲಕ್ಷಾಂತರ ರು. ವ್ಯಾಪಾರ-ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ಭಾರೀ ನಿರಾಸೆ ಅನುಭವಿಸಿದರು. ಬೆಳಗ್ಗೆಯಿಂದ ಜನ ಸಂಚಾರ ಸಾಮಾನ್ಯವಾಗಿದ್ದ, ಈ ರಸ್ತೆಗಳನ್ನು ಸಂಜೆ ಬಳಿಕ ರಸ್ತೆಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳನ್ನು ಬ್ಯಾರಿಕೇಡ್‌ ಹಾಕಿ ಮುಚ್ಚಿದ ಪರಿಣಾಮ ಜನಸಂಚಾರವೇ ಇಲ್ಲದಂತಾಗಿ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ಪಬ್‌ಗಳಲ್ಲಿ ಯುವಕರ ಮಸ್ತಿ:

ಈ ನಡುವೆ ಮುಂಗಡವಾಗಿ ಪಬ್‌ಗಳಲ್ಲಿ ಬುಕಿಂಗ್‌ ಮಾಡಿದ್ದ ಬೆರಳೆಣಿಕೆ ಮಂದಿ ಸಂಜೆ ಆರರ ಹೊತ್ತಿಗೆ ಪಬ್‌ಗಳನ್ನು ಹೊಕ್ಕಿದರು. ರಸ್ತೆಗಳಲ್ಲಿ ಓಡಾಡುವುದನ್ನು ನಿಷೇಧಿಸಿದ್ದರಿಂದ ಪಬ್‌ಗಳ ಒಳಗೆ ಹೆಚ್ಚು ಸಮಯ ಕಳೆದರು. ಪಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಸ್ಥಳೀಯರಿಗಿಂತ ಹೊರರಾಜ್ಯದ ಯುವಕ-ಯುವತಿಯರ ಸಂಖ್ಯೆಯಲ್ಲಿ ಕಂಡು ಬಂದರು. ಇಂದಿರಾನಗರ, ಕಲ್ಯಾಣನಗರ, ಕೋರಮಂಗಲ ಸುತ್ತಮುತ್ತಲ ಪ್ರದೇಶಗಳ ಪಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕೊಂಚ ಹೆಚ್ಚಾಗಿ ಕಂಡು ಬಂದಿತ್ತು. ಪಾನಮತ್ತ ಮಂದಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸಿದರು.

click me!