ಬೆಂಗ್ಳೂರು ಡಾಕ್ಟರ್‌ಗೆ, ಬಿಎಸ್‌ಎಫ್ ಯೋಧನಿಗೆ ಕೊರೋನಾ ಪಾಸಿಟಿವ್

By Suvarna News  |  First Published Jun 13, 2020, 1:25 PM IST

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಬೆಂಗಳೂರಿನ ವೈದ್ಯರೊಬ್ಬರಿಗೆ ಸೋಂಕಿರುವುದು ದೃಢಪಟ್ಟಿದೆ. ಹಾಗೆಯೇ ಬಿಎಸ್‌ಎಫ್ ಯೋಧರೊಬ್ಬರು ಕೊರೋನಾ ಸೋಂಕಿತರಾಗಿರುವುದು ತಿಳಿದುಬಂದಿದೆ.


ಬೆಂಗಳೂರು(ಜೂ.13): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಬೆಂಗಳೂರಿನ ವೈದ್ಯರೊಬ್ಬರಿಗೆ ಸೋಂಕಿರುವುದು ದೃಢಪಟ್ಟಿದೆ. ಹಾಗೆಯೇ ಬಿಎಸ್‌ಎಫ್ ಯೋಧರೊಬ್ಬರು ಕೊರೋನಾ ಸೋಂಕಿತರಾಗಿರುವುದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮತ್ತೊಬ್ಬ ವೈದ್ಯನಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಚಿಕ್ಕಪೇಟೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ವೈದ್ಯನಲ್ಲಿ ಸೋಂಕು ಪತ್ತೆಯಾಗಿದೆ. ಜಯನಗರ ನಿವಾಸಿಯಾಗಿರುವ ವೈದ್ಯ ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ರೋಗಿಯಿಂದ ಕೊರೋನಾ ಬಂದಿರಬಹುದೆಂದು ಶಂಕೆ ವ್ಯಕ್ತವಾಗಿದೆ.

Latest Videos

undefined

ದೊಡ್ಡ ಪರಂಪರೆ ಹೊಂದಿರುವ ಮಠದ ಸ್ವಾಮಿಯ ರಾಸಲೀಲೆ, ವೈರಲ್ ಆಯ್ತು ವಿಡಿಯೋ!

ಆನೇಕಲ್ ಗೆ ಮತ್ತೊಂದು ಮಹಾರಾಷ್ಟ್ರ ಕಂಟಕ ಎದುರಾಗಿದ್ದು, ಒಂದೇ ದಿನ ಎರಡು ಪ್ರಕರಣ ಪತ್ತೆಯಾಗಿದೆ. ಬಿಎಸ್ಎಪ್ ಯೋಧ ಸೇರಿದಂತೆ , ಎರಡು ಪ್ರಕರಣ ಪತ್ತೆಯಾಗಿದ್ದು, 21 ವರ್ಷದ ಯುವತಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

"

ಮಹಾರಾಷ್ಟ್ರದಿಂದ ರೈಲು ಮೂಲಕ ಬಂದ ಯುವತಿ ಆನೇಕಲ್ ಪಟ್ಟಣದ ಅಮೃತ್ ಮಹಲ್ ನಲ್ಲಿ ಕ್ವಾರಂಟೈನ್ ಆಗಿದ್ದಳು. ಈಗಾಗಲೇ ಇಲ್ಲೇ ಉಳಿದುಕೊಂಡಿದ್ದ ನಾಲ್ವರಿಗೆ ಪಾಸಿಟಿವ್ ಆಗಿತ್ತು. ಆನೇಕಲ್ ತಾಲೂಕಿನಾದ್ಯಂತ ವಲಸಿಗರ ಹಾವಳಿ ಹೆಚ್ಚಿದ್ದು, ಇಲ್ಲಿವರೆಗೆ ಆನೇಕಲ್ ತಾಲ್ಲೂಕಿಗೆ 26 ಪಾಸಿಟಿವ್ ಪ್ರಕರಣಗಳಾಗಿವೆ. ಇಬ್ಬರು ಮೃತಪಟ್ಟಿರುವುದು ಆತಂಕ ಹೆಚ್ಚಿಸುತ್ತಿದೆ.

ಹೈ ಪ್ರೊಫೈಲ್ ಸೆಕ್ಸ್‌ ರಾಕೆಟ್‌ನಿಂದ ನಟಿ ಪಾರು..!

ಹಲಸೂರು ಮಾರ್ಕೆಟ್ ನಲ್ಲೂ ಕೊರೊನಾ ಆತಂಕ ಶುರುವಾಗಿದ್ದು, ಮಾರ್ಕೆಟ್ ನಲ್ಲಿ ಶಾಪ್ ಇಟ್ಟುಕೊಂಡಿದ್ದ ಮೂವರು ಮಾರ್ವಾಡಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಗ್ರಂಧಿಗೆ ಅಂಗಡಿ ಇಟ್ಟುಕೊಂಡಿದ್ದ ತಂದೆ ಮಕ್ಕಳಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸಧ್ಯ ಹಲಸೂರು ಮಾರ್ಕೆಟ್ ನ ಕೆಲ ರಸ್ತೆಗಳನ್ನ ಕ್ಲೋಸ್ ಮಾಡಲಾಗಿದ್ದು ಸೋಂಕಿತ ಸಂಪರ್ಕದಲ್ಲಿದ್ದ 10 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

BSF ಯೋಧನೋರ್ವರಿಗೆ ಕರೋನಾ ಪಾಸಿಟಿವ್ ಇದ್ದು, ದೆಹಲಿ ಮೂಲದ ವ್ಯಕ್ತಿ ನಿನ್ನೆ ಟ್ರೈನ್ ಮುಖಾಂತರ ಬೆಂಗಳೂರಿಗೆ ಬಂದಿದ್ದಾರೆ. ನಿನ್ನೆ ತಮ್ಮ ಸಂಬಂದಿಕರ ಮನೆಗೆ ಬಂದಿರುವ ಯೋಧ ಆನೇಕಲ್ ತಾಲೂಕಿನ ಅನಂತನಗರಕ್ಕೆ ಬಂದಿದ್ದರು. ನಿನ್ನೆ ಬಂದ ತಕ್ಷಣ ಟೆಸ್ಟ್ ಮಾಡಿಸೋದಕ್ಕೆ ಮುಂದಾಗಿದ್ದಾರೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಬಳಿಯಿರುವ ನಾರಾಯಣ ಹೃದಯಾಲಯದಲ್ಲಿ ಟೆಸ್ಟ್ ಮಾಡಿದ್ದು, ಕೊರೋನಾ ಸೋಂಕು ದೃಢವಾಗಿದೆ.

ನಾನು ಬದುಕಿದ್ದಾಗಲೇ ಹಾಸನಕ್ಕೆ ಮತ್ತೆ ಕೃಷಿ ಕಾಲೇಜು ತರುವೆ ಎಂದ ರೇವಣ್ಣ

ಇದೀಗ‌ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಬಂದಿದ್ದರು ಎನ್ನಲಾಗಿದೆ..ಇದೀಗ ಆಟೋ ಚಾಲಕನಿಗಾಗಿ ಹುಡುಕಾಟ ನಡೆದಿದೆ.

ಬೆಂಗಳೂರಿನ ಉಳ್ಳಾಲದಲ್ಲಿ ಗರ್ಭಿಣಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಗರ್ಭಿಣಿಯರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಹಿನ್ನೆಲೆ ಮಾಸಿಕ ತಪಾಸಣೆಗೆ ಹೋಗಿದ್ದ ವೇಳೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಕೊರೋನಾ ದೃಢಪಟ್ಟಿದೆ.

click me!