ಎನ್ಇಪಿ ನಾಗ್ಪುರ ಎಜ್ಯುಕೇಶನ್ ಪಾಲಿಸಿ ಎಂದು ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ನೀಡಿದ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, ಹಾಗಾದರೆ ಡಿಕೆಶಿ ತರಲು ಎಸ್‌ಇಪಿ ಏನು ಅರ್ಥ ಕೊಡುತ್ತೆ?. ಎಸ್ ಇ ಪಿ ಅಂದ್ರೆ ಸೋನಿಯಾ ಎಜುಕೇಷನ್ ಪಾಲಿಸಿನಾ? ಅಥವಾ ಸಿದ್ದರಾಮಯ್ಯ ಎಜುಕೇಷನ್ ಪಾಲಿಸಿನಾ? ಶಿವಕುಮಾರ್ ಎಜುಕೇಷನ್ ಪಾಲಿಸಿ ಅಂತ ಹೇಳೋದಾ? ಎಂದು ತಿರುಗೇಟು ನೀಡಿದರು.
ಬೆಂಗಳೂರು (ಆ.18) : ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎನ್‌ಇಪಿ ರದ್ದು ಮಾಡುವ ಬಗ್ಗೆ ನಿರ್ಧಾರ ಮಾಡಿರುವ ಕುರಿತಂತೆ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯಾವ ರೀತಿ ಶಿಕ್ಷಣ ನೀತಿ ಇರಬೇಕು ಯಾವೆಲ್ಲ ಪಠ್ಯ,ವಿಚಾರಗಳು ಒಳಗೊಳ್ಳಬೇಕು ಎಂದು ಕಾರ್ಯಾಗಾರ ನಡೆಸಿ, ಕಸ್ತೂರಿ ರಂಗನ್ ನೇತೃತ್ವದಲ್ಲಿ ಶಿಕ್ಷಣ ನೀತಿ ರೂಪಿಸಿದ್ದಾರೆ.ಇದು ಏಕಾಏಕಿ ಜಾರಿಗೆ ತಂದುದ್ದಲ್ಲ, ಅನೇಕ ಆಯಾಮಗಳಲ್ಲಿ ಸಭೆ ನಡೆಸಿ,ಅಭಿಪ್ರಾಯ ಸಂಗ್ರಹಿಸಿ ನೀತಿ ರೂಪಿಸಲಾಗಿದೆ.ಆದರೆ ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ದೃಷ್ಟಿಯಿಂದ ಎನ್ ಇ ಪಿ ವಿರೋಧಿಸಿ ತೆಗೆದುಹಾಕಿದ್ರೆ ಅದರಿಂದ ಕರ್ನಾಟಕದ ಬಡ ಮಕ್ಕಳಿಗೆ ಅನ್ಯಾಯ ಆಗಲಿದೆ ಎಂದರು.
ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿಗಳು ನಡೆಸುತ್ತಿದ್ದಾರೆ:
ಇಂದು ಬಹುತೇಕ ಖಾಸಗಿ ಶಾಲೆಗಳನ್ನು ರಾಜಕಾರಣಿಗಳು, ಅಧಿಕಾರಿಗಳು, ದೊಡ್ಡ ದೊಡ್ಡ ಬ್ಯುಸಿನೆಮನ್‌ಗಳು ನಡೆಸುತ್ತಿದ್ದಾರೆ.ಹಾಗಾಗಿ ಎನ್ಇಪಿ ರದ್ದುಗೊಳಿಸುವ ಮೂಲಕ ಖಾಸಗಿ ಶಾಲೆಗಳ ಉಳಿವಿಗೆ ಸರ್ಕಾರಿ ಶಾಲೆಗಳನ್ನು ಮುಚ್ಚಿಸಬೇಕು ಎಂಬ ಷಡ್ಯಂತ್ರವಿರಬಹುದು. ಡಿಕೆಶಿ,ಪರಮೇಶ್ವರ್, ಎಸ್ ಎಸ್ ಮಲ್ಲಿಕಾರ್ಜುನ, ಎಂ ಬಿ ಪಾಟೀಲ್ ಎಲ್ಲರೂ ಕೂಡ ಶಾಲೆಗಳನ್ನು ನಡೆಸುತ್ತಿದ್ದಾರೆ. ಎನ್‌ಇಪಿ ರದ್ದುಗೊಳಿಸಿರುವ ಸರ್ಕಾರದ ನಿರ್ಧಾರದ ಹಿಂದೆ ದೊಡ್ಡ ಹುನ್ನಾರ ಇದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಇರಬಾರದು ಹುನ್ನಾರವಿದೆ.
ಎನ್‌ಇಪಿ ರದ್ದು ಮಾಡುವ ಮುನ್ನ ಸಿಎಂ ಓದಲಿ: ಎಲ್ಲಿ ದೋಷವಿದೆ ಹೇಳಲಿ: ಬಿಸಿ ನಾಗೇಶ್ ಗರಂ
ಹಿಂದೆ ಸರ್ವಶಿಕ್ಷಣ ಅಭಿಯಾನದಡಿ ಶಿಕ್ಷಣ ಸಿಗಬೇಕು ಎಂದು ವಾಜಪೇಯಿ ನೀತಿ ತಂದ್ರು ಆದ್ರೆ ಇವರು ಅದು ಪೂರ್ಣವಾಗಬಾರದು ಎಂಬ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರು ರಾಷ್ಟ್ರೀಯ ಯೋಜನೆಯನ್ನು ತೆಗೆದುಹಾಕುವ ಮೊದಲು ಜನರ ಮುಂದಿಡಲಿ ಎಂದು ಸವಾಲು ಹಾಕಿದರು. ಮುಂದುವರಿದು ಅದರಲ್ಲಿ ಏನೆಲ್ಲ ಲೋಪದೋಷಗಳಿದೆ ಎಂದು ಬಹಿರಂಗಪಡಿಸಬೇಕು. ಖಾಸಗಿ ಸಂಸ್ಥೆಗಳು ಒತ್ತಡಕ್ಕೆ ಲಾಭಿಗೆ ಬಗ್ಗಿ ಈ ರೀತಿ ನಡೆದುಕೊಳ್ಳಬಾರದು ಎಂದು ತಿವಿದರು.
ಸೋನಿಯಾ ಎಜ್ಯುಕೇಶನ್ ಪಾಲಿಸಿ:
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿ ಸೋನಿಯಾ ಎಜ್ಯುಕೇಶನ್ ಪಾಲಿಸಿ ತರಲು ಹೊರಟಿದ್ದಾರೆ.ಮೆಕಾಲೆ ಯುರೋಪ್‌ನಿಂದ ಬಂದು ಶಿಕ್ಷಣ ನೀತಿ ಕೊಟ್ಟವನು.ಸೋನಿಯಾ ಗಾಂಧಿ ಕೂಡ ಯುರೋಪ್‌ನಿಂದ ಬಂದವರು. ಹಾಗಾಗಿ ಕಾಂಗ್ರೆಸ್ ಸರ್ಕಾರ ಸೋನಿಯಾ ಎಜುಕೇಶನ್ ಪಾಲಿಸಿ ಮುಂದುವರೆಸುತ್ತಿದ್ದಾರೆ.
ಎನ್‌ಇಪಿ ನಾಗ್ಪುರ ಎಜ್ಯುಕೇಶನ್ ಪಾಲಿಸಿ ಎಂದು ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ನೀಡಿದ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, ಹಾಗಾದರೆ ಡಿಕೆಶಿ ತರಲು ಎಸ್‌ಇಪಿ ಬೇರೆ ಅರ್ಥ ಕೊಡುತ್ತದೆ. ರಾಜ್ಯದಲ್ಲಿರುವ ಎಸ್ ಇ ಪಿ ಅಂದ್ರೆ ಸೋನಿಯಾ ಎಜುಕೇಷನ್ ಪಾಲಿಸಿ, ಅಥವಾ ಸಿದ್ದರಾಮಯ್ಯ ಎಜುಕೇಷನ್, ಶಿವಕುಮಾರ್ ಎಜುಕೇಷನ್ ಪಾಲಿಸಿ ಅಂತ ಹೇಳೋದಾ? ಒಟ್ಟಿನಲ್ಲಿ ಎನ್ಇಪಿ ರದ್ದುಗೊಳಿಸುವುದರ ಹಿಂದೆ ಸರ್ಕಾರಿ ಶಾಲೆ ಮುಚ್ಚಲು ಮಾಡಿರುವ ಹುನ್ನಾರ ಇದೆ ಎಂದು ಗಂಭೀರ ಆರೋಪ ಮಾಡಿದರು.
ಎನ್‌ಇಪಿ ರದ್ದತಿ ನಿರ್ಧಾರ ಕೈಬಿಡಿ, ಇಲ್ಲದಿದ್ರೆ ಹೋರಾಟ: ಬೊಮ್ಮಾಯಿ
ಇತ್ತೀಚೆಗೆ ಬಂದ ಅನ್ಯಭಾಷೆಯ ಚಲನಚಿತ್ರದಲ್ಲಿನ ವಿಚಾರ ನೋಡಿ ಈ ಯೋಜನೆ ಜಾರಿಗೆ ಡಿಸಿಎಂ ಮುಂದಾಗುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜನ ಇದನ್ನು ಗಮನಿಸಬೇಕು.
ಶಿಕ್ಷಕರ ನೇಮಕಾತಿ ಕಾರ್ಯ ಶ್ರೀಘ್ರವೇ ಅಗಲಿ. ಆ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೆ ಉತ್ತಮ ದೊರಕುವಂತಾಗಲಿ. ಸರ್ಕಾರದ ಗ್ಯಾರಂಟಿ ಜಾರಿಗೆ ದುಡ್ಡು ಹೊಂದಿಸಲು ಇತರೆ ಹಣ ಬಳಕೆ ಮಾಡಿರುವ ಕಾರಣ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇವೆಲ್ಲವನ್ನೂ ಬದಿಗೆ ಸರಿಸಿ ಮೊದಲು ಶಿಕ್ಷಕರ ನೇಮಕಾತಿ ಮಾಡಲಿ ಎಂದು ಸಲಹೆ ನೀಡಿದರು.