ಸಿಎಂ ಸಮ್ಮುಖದಲ್ಲೇ ನಕ್ಸಲರ ಶರಣು!

By Kannadaprabha News  |  First Published Jan 9, 2025, 7:36 AM IST

ಶರಣಾದ ನಕ್ಸಲರಿಗೆ ಮುಖ್ಯಮಂತ್ರಿಗಳು ಸಂವಿಧಾನ ಪುಸ್ತಕ ಮತ್ತು ಗುಲಾಬಿ ನೀಡುವ ಮೂಲಕ ಅವರ ಶರಣಾಗತಿಯನ್ನು ಅಂಗೀಕರಿಸಿದರು. ಆ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದಂತಾಗಿದೆ. 


ಬೆಂಗಳೂರು(ಜ.09):  ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸತತ ಎರಡು ದಶಕಕ್ಕೂ ಹೆಚ್ಚಿನ ಕಾಲ ಸಶಸ್ತ್ರವಾಗಿ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ 6 ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ ಶರಣಾದರು. 

ಶರಣಾದ ನಕ್ಸಲರಿಗೆ ಮುಖ್ಯಮಂತ್ರಿಗಳು ಸಂವಿಧಾನ ಪುಸ್ತಕ ಮತ್ತು ಗುಲಾಬಿ ನೀಡುವ ಮೂಲಕ ಅವರ ಶರಣಾಗತಿಯನ್ನು ಅಂಗೀಕರಿಸಿದರು. ಆ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದಂತಾಗಿದೆ. 

Tap to resize

Latest Videos

ಸಿಎಂ ಸಿದ್ದರಾಮಯ್ಯ ಹಾಕಿದ ಒಂದೇ ಅವಾಜ್‌ಗೆ ಸರ್ಕಾರಕ್ಕೆ ಶರಣಾಗಲು ಒಪ್ಪಿಕೊಂಡ 6 ನಕ್ಸಲರು!

2024ರ ನವೆಂಬರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟ‌ರ್ ನಂತರ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಶಸ್ತ್ರತ್ಯಾಗ ಮಾಡಿ ಶರಣಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಕ್ಸಲ್ ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಮತ್ತಿತರ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸಕ್ರಿಯರಾಗಿದ ನಕ್ಸಲೀಯರೊಂದಿಗೆ ಮಾತುಕತೆ ನಡೆಸಿ ಸಮಾಜದ ಮುಖ್ಯವಾಹಿನಿಯೊಂದಿಗೆ ಬರುವಂತೆ ಮಾತುಕತೆ ನಡೆಸಿದ್ದರು. ಅವರ ಮಾತುಕತೆ ಫಲವಾಗಿ ಪ್ರಮುಖ ನಕಲ್ ನಾಯಕಿ ಮುಂಡಗಾರು ಲತಾ ಸೇರಿ ಒಟ್ಟು 6 ಮಂದಿ ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಬುಧವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದರು.

ನಕ್ಸಲ್ ಮುಕ್ತ ಗುರಿಗೆ ಯಶಸ್ಸು ರಾಜ್ಯವನ್ನು ನಕ್ಸಲ್ ಚಟುವಟಿಕೆ ಯಿಂದ ಮುಕ್ತವಾಗಿಸುವುದು ನಮ್ಮ ಗುರಿಯಾಗಿದೆ. ಅದರಲ್ಲಿ ನಾವು ಬಹುತೇಕ ಯಶಸ್ಸು ಕಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಬಿಜಾಪುರದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟಕ್ಕೆ 8 ಪೊಲೀಸರು ಹುತಾತ್ಮ

ಬೆಂಗ್ಳೂರಲ್ಲೇ ಶರಣಾಗಿದ್ದೇಕೆ? 

• ನಕ್ಸಲರ ಶರಣಾಗತಿ ವಿಷಯ ತಿಳಿದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಭಾರಿ ಜನ ಜಮಾವಣೆ 
• ಜತೆಗೆ ಮುಖ್ಯಮಂತ್ರಿ ಅವರನ್ನು ನೇರ ಭೇಟಿ ಮಾಡಲು ನಕ್ಸಲರು ಬಯಸಿದ ಕಾರಣ ಬೆಂಗಳೂರಲ್ಲಿ ಶರಣಾಗತಿ 

ಮುಂದೇನು? 

• ಸಿಎಂ ಬಳಿ ಶರಣಾದ ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕಾನೂನು ಪ್ರಕ್ರಿಯೆ ಆರಂಭವಾಗಲಿದೆ 
• ನಕ್ಸಲರ ವಿರುದ್ಧದ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಲಿದ್ದಾರೆ 
• ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಅವಕಾಶ ಸರ್ಕಾರಕ್ಕಿದೆ 
• ನಕ್ಸಲರ ವಿರುದ್ಧದ ಪ್ರಕರಣಗಳು ರದ್ದಾಗುವುದಿಲ್ಲ. ಶಿಕ್ಷೆಯಾದರೆ ಅದರ ಪ್ರಮಾಣ ಕಡಿಮೆ ಇರುವಂತೆ ಮಾಡಲಾಗುತ್ತದೆ. 

click me!