8 ಅಧಿಕಾರಿಗಳ ಮೇಲೆ ಲೋಕಾ ದಾಳಿ: 21 ಕೋಟಿ ಸಂಪತ್ತು ವಶ

Published : Jan 09, 2025, 06:45 AM IST
8 ಅಧಿಕಾರಿಗಳ ಮೇಲೆ ಲೋಕಾ ದಾಳಿ: 21 ಕೋಟಿ ಸಂಪತ್ತು ವಶ

ಸಾರಾಂಶ

ಬೆಂಗಳೂರು, ಚಿಕ್ಕಮಗಳೂರು, ಬೀದರ್‌, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಆರಂಭವಾದ ಕಾರ್ಯಾಚರಣೆ ತಡರಾತ್ರಿವರೆಗೆ ಮುಂದುವರಿದಿತ್ತು.

ಬೆಂಗಳೂರು(ಜ.09):  ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಮೇಲೆ ಎಂಟು ಅಧಿಕಾರಿಗಳಿಗೆ ಸೇರಿದ 8 ಜಿಲ್ಲೆಗಳ 38 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದು, 21.05 ಕೋಟಿ ರು. ಮೊತ್ತದ ನಗದು, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು, ಬೀದರ್‌, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಆರಂಭವಾದ ಕಾರ್ಯಾಚರಣೆ ತಡರಾತ್ರಿವರೆಗೆ ಮುಂದುವರಿದಿತ್ತು.

ಕಾಡಲ್ಲಿ ನಿಂತಿದ್ದ ಕಾರಲ್ಲಿತ್ತು ₹40 ಕೋಟಿಯ 52 ಕೆಜಿ ಚಿನ್ನ, ₹11 ಕೋಟಿ ನಗದು! ಯಾರದು ಈ ಸಂಪತ್ತು?

ಬೆಂಗಳೂರಿನ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ.ಶೋಭಾ, ಚಿಕ್ಕಮಗಳೂರು ಜಿಲ್ಲೆಯ ಕಡೂರು ಆರೋಗ್ಯ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ಉಮೇಶ್‌, ಬೀದರ್‌ ಜಿಲ್ಲೆ ಬಸವಕಲ್ಯಾಣದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವೀಂದ್ರ ಮೆಟ್ರೆ, ಬೆಳಗಾವಿಯ ಖಾನಾಪೂರ ತಾಲೂಕು ತಹಸೀಲ್ದಾರ್‌ ಪ್ರಕಾಶ್‌ ಶ್ರೀಧರ್ ಗಾಯಕವಾಡ್‌, ಬೆಂಗಳೂರು ಆರ್‌ಟಿಓ ಅಧಿಕಾರಿ (ನಿವೃತ್ತ) ಎಸ್‌.ರಾಜು, ಗದಗ ಪುರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪ್ರಭಾರ) ಹುಚ್ಚಪ್ಪ ಎ.ಬಂಡಿವಡ್ಡರ್‌, ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್‌.ಎಚ್‌.ಲೋಕೇಶ್‌, ರಾಯಚೂರು ಜಿಲ್ಲೆಯ ಜೆಸ್ಕಾಂ ಕಿರಿಯ ಎಂಜಿನಿಯರ್‌ ಹುಲಿರಾಜ್‌ ನಿವಾಸಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.

ಅಧಿಕಾರಿಗಳ ಅಕ್ರಮ ಆಸ್ತಿಯ ವಿವರ 

1. ಎಂ.ಶೋಭಾ, ಜಂಟಿ ಆಯುಕ್ತ, ಸಾರಿಗೆ ಇಲಾಖೆ, ಬೆಂಗಳೂರು 
6 ಕಡೆ ಶೋಧ. 1 ಸೈಟ್, 1 ಮನೆ, 21 ಎಕ್ರೆ ಕೃಷಿ ಜಮೀನು ಸೇರಿ 45.36 ಲಕ್ಷರು.ನಸ್ಥಿರಾಸ್ತಿ ಪತ್ತೆ. 60 ಲಕ್ಷ ರು. ಮೌಲ್ಯದ ಚಿನ್ನಾಭರಣ, 20 ಲಕ್ಷ ರು.ನ ವಾಹನ ಗಳು. ಒಟ್ಟು 3.09 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ. 
2.ಎಸ್.ಎನ್.ಉಮೇಶ್, ತಾಲೂಕು ಆರೋಗ್ಯಾಧಿಕಾರಿ, ಕಡೂರು, ಚಿಕ್ಕಮಗಳೂರು 
2 ಸ್ಥಗಳಲ್ಲಿ ಶೋಧ. 2 ಸೈಟ್, 1 ಮನೆ, 8 ಎಕರೆ ಜಮೀನು ಸೇರಿ 56.78 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ದಾಖಲೆಗಳು ಲಭ್ಯ. 68.41 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 1.25 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ. 

3. ರವೀಂದ್ರ ಮೆಟ್ರಿ, ಸಹಾಯಕ ಕಾರ್ಯಪಾಪಕ ಎಂಜಿನಿಯ‌ರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬಸವಕಲ್ಯಾಣ, ಬೀದರ್
5 ಕಡೆ ಪರಿಶೀಲನೆ. 5 ಸೈಟ್, 2 ಮನೆ, 7 ಎಕರೆ ಜಮೀನು ಸೇರಿ 1.72 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 53.60 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು . ಮೌಲ್ಯದ ಆಸ್ತಿ ಪತ್ತೆ.
4. ಪ್ರಕಾಶ್ ಗಾಯಕವಾಡ್, ತಹಸೀಲ್ದಾರ್. ಖಾನಾಪೂರ, ಬೆಳಗಾವಿ 
8 ಕಡೆ ಕಾರ್ಯಾಚರಣೆ. 2 ಸೈಟ್, 3 ಮನೆ, 28 ಎಕರೆ ಕೃಷಿ ಜಮೀನು ಸೇರಿ 3.58 ಕೋಟಿ ರು. ಮೌಲ್ಯದ ಸ್ಥಿರಾಸ್ತಿ. 83.12 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 4.41 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ. 
5. ಎಸ್.ರಾಜು, ಯಲಹಂಕ ಆರ್‌ಟಿಒ (ನಿವೃತ್ತ), ಬೆಂಗಳೂರು 

ಬೆಳ್ಳಂಬೆಳಗ್ಗೆ ಬೆಂಗಳೂರು, ಮಂಡ್ಯ, ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಲೋಕಾ ದಾಳಿ!

5 ಕಡೆ ಶೋಧ. 1 ಸೈಟ್, 2 ಮನೆ, 4 ಎಕರೆ ಕೃಷಿ ಜಮೀನು ಸೇರಿ 4.27 ಕೋಟಿ ರು. ಸ್ಥಿರಾಸ್ತಿ, 74.85 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 5.02 ಕೋಟಿ ರು. ಮೌಲ್ಯದ ಆಸ್ತಿ ಲಭ್ಯ. 
6. ಹುಚ್ಚಪ್ಪ ಎ ಬಂಡಿವಡ್ಡರ್, ಸಹಾಯಕ ಕಾರ್ಯಪಾಲಕ ಎಂಜಿನಿಜಿಯ‌ರ್ (ಪ್ರಭಾರ), ಪುರಸಭೆ, ಗದಗ
5 ಕಡೆ ತಪಾಸಣೆ. 1 ಸೈಟ್, 1 ಕಾಂಪ್ಲೆಕ್ಸ್, 2 ಮನೆ ಸೇರಿ 76.50 ಲಕ್ಷ ರು. ಮೌಲ್ಯದ ಚರಾಸ್ತಿ, 82.46 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. ಒಟ್ಟು 1.58 ಕೋಟಿ ರು. ಮೌಲ್ಯದ ಆಸ್ತಿ ಲಭ್ಯ.
7 ಆರ್‌.ಆರ್‌. ಲೋಕೇಶ್‌, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಬಳ್ಳಾರಿ
5 ಸ್ಥಳಗಳಲ್ಲಿ ಶೋಧನಾ ಕಾರ್ಯ. 2 ಸೈಟ್, 1 ಮನೆ, 6 ಎಕರೆ ಕೃಷಿ ಜಮೀನುಸೇರಿ 1.46 ಕೋಟರು. ಮೌಲ್ಯದ ಸ್ಥಿರಾಸ್ತಿ, 57.60 ಲಕ್ಷ ರು. ಮೌಲ್ಯದ ಚರಾಸ್ತಿ ಲಭ್ಯ. ಒಟ್ಟು 2.03 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ. 
8. ಹುಲಿರಾಜ್, ಕಿರಿಯ ಎಂಜಿನಿಯರ್, ಜೆಸ್ಕಾಂ, ರಾಯಚೂರು
 2 ಸ್ಥಳಗಳಲ್ಲಿ ಶೋಧನಾ ಕಾರ್ಯ. 3 ಸೈಟ್, 2 ಮನೆ, 24 ಎಕರೆ ಕೃಷಿ ಜಮೀನು ಸೇರಿ 1.20 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 17.88 ಲಕ್ಷರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 1.38 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KEA KRIES Recruitment 2026 ರಾಜ್ಯದ ಮೊರಾರ್ಜಿ ಶಾಲೆಗೆ ಶಿಕ್ಷಕರ ನೇಮಕಾತಿ: 1087 ಹುದ್ದೆಗಳ ಬೃಹತ್ ಅವಕಾಶ!
ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಪೋಷಕರು, ಆಫ್ರೀಕಾದಲ್ಲಿ ಯುವತಿ ಆರ್ತನಾದ!