
ಬೆಂಗಳೂರು, (ಸೆ.27): ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವಂತೆ ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇವಸ್ಥಾನ (Temple) ತೆರವು ಪ್ರಕರಣದಲ್ಲಿ ತಹಶೀಲ್ದಾರ್‌ಗೆ ಶಿಕ್ಷೆಯಾಗಿದೆ.
ಹೌದು...ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ವರ್ಗಾವಣೆ ಆದೇಶ ಹೊರಡಿಸಲಾಗಿದೆ. ವರ್ಗಾವಣೆ (transfe) ಮಾಡಿ ಕಂದಾಯ ಇಲಾಖೆ ಇಂದು (ಸೆ.27) ಆದೇಶ ಹೊರಡಿಸಲಾಗಿದೆ.
'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'
ನಂಜನಗೂಡು ತಹಶೀಲ್ದಾರ್ ಹುದ್ದೆಯನ್ನು ಸರ್ಕಾರ ಖಾಲಿ ಉಳಿಸಿದೆ. ಸೂಕ್ತ ಪ್ರಭಾರ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ಗೆ ಸೂಚನೆ ನೀಡಲಾಗಿದೆ.
ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷದ ಹಲವು ನಾಯಕರು ಕೂಡ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಮೈಸೂರು ದೇಗುಲ ಧ್ವಂಸ : ಅಧಿಕಾರಿಗಳ ತಲೆದಂಡ ಶೀಘ್ರ?
ಕೋರ್ಟ್ ಆದೇಶವಿದೆ ಎಂದು ದೇವಸ್ಥಾನ ತೆರವು ಮಾಡುವಂತೆ ಮೇಲಿಂದ ದೊಡ್ಡ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ನಂಜನಗೂಡಿನ ತಹಶೀಲ್ದಾರ್ ಮೋಹನ ಕುಮಾರಿ ಅವರು ಹುಚ್ಚಗಣಿ ಮಹದೇವಮ್ಮ ದೇವಸ್ಥಾನವನ್ನು ತೆರವು ಮಾಡಿಸಿದ್ದಾರೆ.
ಆದ್ರೆ, ಶಿಕ್ಷೆಗೆ ಗುರಿಯಾಗಿದ್ದು ಮಾತ್ರ ತಹಶೀಲ್ದಾರ್. ದೇಗುಲ ತೆರವು ಮಾಡುವಂತೆ ಸೂಚಿಸಿದ ಇನ್ನುಳಿದ ಅಧಿಕಾರಿಗಳಿಗೆ ಯಾವ ಶಿಕ್ಷೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವಿಗೆ ಮೇಲೆ ಕೂತು ಸೂಚನೆ ಕೊಟ್ಟ ಅಧಿಕಾರಿಗಳು ಬಚಾವ್ ಆಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ