ಸಮಾಜದಲ್ಲಿ ಪತ್ರಕರ್ತರ ಪ್ರಾಮುಖ್ಯತೆ ಬಹಳಷ್ಟಿದೆ. ಕೊರೋನಾ ಮಹಾಮಾರಿ ಅಪ್ಪಳಿಸಿದ ಸಂದರ್ಭ, ಇತರ ನೈಸರ್ಗಿಕ ವಿಕೋಪಗಳ ಅಪಾಯಕಾರಿ ಸಮಯದಲ್ಲಿಯೂ ಅವಿರತವಾಗಿ ಶ್ರಮಿಸಿ ಜನರಿಗೆ ಸುದ್ದಿ ತಲುಪಿಸುವ ಪತ್ರಕರ್ತರು ಕಷ್ಟದ ಸಂದರ್ಭಗಳಲ್ಲಿಯೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇದೀಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ವಾರ್ಷಿಕ ದತ್ತನಿಧಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ (Ravi Hegde) ಡಿವಿಜಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಪಡೆದ ಇತರ ಪತ್ರಕರ್ತರ ವಿವರಗಳು ಹೀಗಿವೆ.
ಪತ್ರಕರ್ತರ ವೃತ್ತಿ ಸವಾಲು & ಸಾಮಾಜಿಕ ಹೊಣೆಗಾರಿಕೆ ಗೋಷ್ಠಿಗೆ ರವಿ ಹೆಗಡೆ ಚಾಲನೆ
ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ ಡಿವಿಜಿ ಪ್ರಶಸ್ತಿ ಪಡೆದಿದ್ದು, ಪ್ರಜಾವಾಣಿಯ ಬಿ.ಎಂ ಹನೀಫ್ ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೊಮ್ಮಟವಾಣಿ ಸಂಪಾದಕ ಎಸ್.ಎನ್.ಅಶೋಕಕುಮಾರ್ ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪಾಟೀಲ್ ಪುಟ್ಟಪ್ಪ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕ ಆಯ್ಕೆಯಾಗಿದ್ದಾರೆ.
ಎಸ್.ವಿ.ಜಯಶೀಲರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಮುಡಿಗೇರಿಸಿಕೊಂಡಿದ್ದು ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ ಪಿ.ಆರ್.ರಾಮಯ್ಯಪ್ರಶಸ್ತಿ ಪಡೆದಿದ್ದಾರೆ. ಮಲೆನಾಡ ಮಂದಾರ ಸಂಪಾದಕ ಕೆ.ಆರ್.ಮಂಜುನಾಥ್ ಗರುಡನಗಿರಿ ನಾಗರಾಜ್ ಪ್ರಶಸ್ತಿ ಪಡೆದಿದ್ದಾರೆ.
ಹಿರಿಯ ಪತ್ರಕರ್ತ ಕೋಡಿ ಹೊಸಳ್ಳಿ ರಾಮಣ್ಣ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪಡೆದಿದ್ದಾರೆ. ಕಿಡಿ ಶೇಷಪ್ಪ ಪ್ರಶಸ್ತಿಗೆ ಹೊಸಪೇಟೆ ಟೈಮ್ಸ್ ಸಂಪಾದಕಿ ಕಿಡಿ ಶೇಷಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿಡ್ಲು ಪತ್ರಿಕೆ ಸಂಪಾದಕ ರೇವಣ್ಣಸಿದ್ದಯ್ಯ ಮಹಾನುಭವಿಮಠ ಪಿ.ರಾಮಯ್ಯ ಪ್ರಶಸ್ತಿಗೆಭಾಜನರಾಗಿದ್ದು, ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿಗೆ ಪ್ರಜಾವಾಣಿ, ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥೆ ರಶ್ಮಿ ಆಯ್ಕೆಯಾಗಿದ್ದಾರೆ.
ವಿಜಯವಾಣಿ ಶಿವಮೊಗ್ಗ ಬ್ಯೂರೊ ಮುಖ್ಯಸ್ಥ ಶಾಂತಕುಮಾರ್ ಕೆ.ಎನ್. ಎಂ. ನಾಗೇಂದ್ರರಾವ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜಯಕರ್ನಾಟಕದ ರಾಮಸ್ವಾಮಿ ಹುಲಕೋಡು ಮಿಂಚು ಶ್ರೀನಿವಾಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹೆಚ್.ಎಸ್‌ರಂಗಸ್ವಾಮಿ ಪ್ರಶಸ್ತಿಗೆ 'ಸಿಟಿ ಹೈಲೈಟ್ಸ್' ಬೆಂಗಳೂರು ಸಂಪಾದಕ ಪಿ.ಸುನೀಲ್‌ಕುಮಾರ್ ಆಯ್ಕೆಯಾಗಿದ್ದು, ಸಂಘದ ವಿಶೇಷ ಪ್ರಶಸ್ತಿಗಳಿಗೆ ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು, ಮುನಿವೆಂಕಟೇಗೌಡ ಹಿರಿಯ ಪತ್ರಕರ್ತರು ಕೋಲಾರ, ಎಂ.ಕೆ ರಾಘವೇಂದ್ರ ಮೇಗರವಳ್ಳಿ. 'ವಿಜಯಕರ್ನಾಟಕ' ತೀರ್ಥಹಳ್ಳಿ, ಪ್ರಕಾಶ್ ರಾಮಜೋಗಿಹಳ್ಳಿ ವಾರ್ತಾಭಾರತಿ ಬೆಂಗಳೂರು ಆಯ್ಕೆಯಾಗಿದ್ದಾರೆ.
ಅ. 3 ರ ಭಾನುವಾರ ಸಂಜೆ 5 ಕ್ಕೆ ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನ ಆವರಣದಲ್ಲಿ ಆಯೋಜನೆಗೊಂಡಿರುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಬೆಂಗಳೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.