Nandini Milk Price: ಬೆಲೆ ಏರಿಕೆಯ ಮಧ್ಯೆ ಮತ್ತೊಂದು ಶಾಕಿಂಗ್‌ ಸುದ್ದಿ..!

By Kannadaprabha News  |  First Published Jan 15, 2022, 8:00 AM IST

*   ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್‌ ಪಾರ್ಕ್
*   ಪನ್ನೀರ್‌, ಚೀಸ್‌, ಸಿಹಿ ಉತ್ಪನ್ನ ತಯಾರಿಸಿ ಇಡೀ ದೇಶಕ್ಕೆ ಮಾರಾಟ
*   ಹಾಲಿನ ದರ 3 ರು. ಹೆಚ್ಚಳ ಕುರಿತು ಸಿಎಂ ಜತೆ ಚರ್ಚೆ
 


ಬೆಂಗಳೂರು(ಜ.15):  ನಂದಿನಿ ಉತ್ಪನ್ನಗಳ(Nandini Product) ಮಾರಾಟ ದೇಶಾದ್ಯಂತ(India) ವಿಸ್ತರಿಸಲು ಬೆಳಗಾವಿಯಲ್ಲಿ(Belagavi) ನಂದಿನಿ ಮೆಗಾ ಫುಡ್‌ ಪಾರ್ಕ್(Nandini Mega Food Park) ನಿರ್ಮಿಸಲಾಗುತ್ತಿದೆ. ಪನ್ನೀರ್‌, ಚೀಸ್‌ ಆಧಾರಿತ ಉತ್ಪನ್ನ ಹಾಗೂ ಇತರೆ ನಂದಿನಿ ಸಿಹಿ ಉತ್ಪನ್ನ ಉತ್ಪಾದಿಸಿ ದೇಶಾದ್ಯಂತ ಹಳ್ಳಿಯಿಂದ ಮಹಾನಗರದವರೆಗೆ ಸಮಗ್ರ ಮಾರುಕಟ್ಟೆಅಭಿವೃದ್ಧಿಗಾಗಿ ‘ವಿಜನ್‌ - 2022-2025’ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ(Balachandra Jarkiholi) ಹೇಳಿದ್ದಾರೆ.

ಗುರುವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕೆಎಂಎಫ್‌ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೆಗಾ ಫುಡ್‌ ಪಾರ್ಕ್ ಮೂಲಕ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ(Maharashtra) ರಾಜ್ಯಗಳಲ್ಲಿ ನಮ್ಮ ನಂದಿನಿ ಉತ್ಪನ್ನಗಳ ಮಾರಾಟವು ವಿಸ್ತರಣೆಯಾಗಲಿದೆ ಎಂದು ಹೇಳಿದರು.

Latest Videos

undefined

Viral News: ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ.?

ನಂದಿನಿ ಉತ್ಪನ್ನಗಳನ್ನು ಹೊರ ರಾಜ್ಯಗಳ ಹೈದ್ರಾಬಾದ್‌(Hyderabad), ಆಂಧ್ರ(Andhra Pradesh), ಪುಣೆ(Pune), ಮುಂಬೈ(Mumbai), ಗೋವಾ(Goa), ಚೆನ್ನೈ(Chennai) ಹಾಗೂ ವಿದೇಶಗಳಲ್ಲೂ ಈಗಾಗಲೇ ಪರಿಚಯಿಸಿದ್ದು, ಗ್ರಾಹಕರಿಂದ(Customers) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಮತ್ತಷ್ಟುವಿಸ್ತರಿಸಲು ವಿಷನ್‌ 2025-26 ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಮಾರುಕಟ್ಟೆ ವಿಸ್ತರಣೆಯಲ್ಲಿ ಹಳ್ಳಿಯಿಂದ ಮಹಾನಗರದವರೆಗೆ ಎಂಬ ತತ್ವದಡಿ ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಮಾರಾಟವನ್ನು ಆಯಾ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಮಗ್ರ ಮಾರುಕಟ್ಟೆಅಭಿವೃದ್ಧಿ ಯೋಜನೆಯನ್ನು 2022-2026 ರವರೆಗೆ ಜಾರಿಗೊಳಿಸಲು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಾಸನ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ನೂತನ ಪೆಟ್‌ ಬಾಟಲ್‌ ಘಟಕವನ್ನು ಅಳವಡಿಸಿದ್ದು, ಈ ಸ್ಥಾವರ ವಿವಿಧ ಮಾದರಿಯ ಸುವಾಸಿತ ಹಾಲು, ಲಸ್ಸಿ, ಯೋಗರ್ಟ್‌ ಇತ್ಯಾದಿಯಾಗಿ ಸುಮಾರು 15 ಹೊಸ ಉತ್ಪನ್ನಗಳ ಉತ್ಪಾದನೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಘಟಕದಲ್ಲಿ ಪ್ರತಿನಿತ್ಯ 5 ಲಕ್ಷ ಪೆಟ್‌ ಬಾಟಲ… ಉತ್ಪಾದನೆಯಾಗುತ್ತಿದ್ದು, ಇದನ್ನು ದೇಶ ವ್ಯಾಪ್ತಿಯಲ್ಲಿ ಮಾರಾಟ ಮಾಡಿ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಸಹ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಶಾಸಕರಾದ ಭೀಮಾ ನಾಯಕ್‌, ನಂಜೇಗೌಡ, ಕೆಎಂಎಓ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌, ಕೆಎಂಎಫ್‌ ನಿರ್ದೇಶಕರು, ರಾಜ್ಯದ 14 ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹಾಲಿನ ದರ 3 ರು. ಹೆಚ್ಚಳ ಕುರಿತು ಸಿಎಂ ಜತೆ ಚರ್ಚೆ

ನಂದಿನಿ ಹಾಲು(Nandini Milk) ಕೇವಲ 37 ರು.ಗೆ ಮಾರಾಟ ಮಾಡಲಾಗುತ್ತಿದ್ದು, ದೇಶದಲ್ಲೇ ಅತಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವ ಸಂಸ್ಥೆ ನಮ್ಮದಾಗಿದೆ. ಹೀಗಾಗಿ ಪ್ರತಿ ಲೀಟರ್‌ಗೆ ತಲಾ 3 ರು.ಗಳಂತೆ ದರ ಹೆಚ್ಚಳಕ್ಕೆ ಬೇಡಿಕೆ ಬರುತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೊಂದಿಗೆ ಚರ್ಚಿಸಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Fake Nandini Ghee : ಎಚ್ಚರ ! ರಾಜ್ಯದಲ್ಲಿ ತಲೆ ಎತ್ತಿದೆ ನಕಲಿ ತುಪ್ಪದ ಜಾಲ

ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರುಗಳು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರು. ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಪ್ರತಿ ಲೀಟರ್‌ ದರವನ್ನು 40 ರು. ನಿಗದಿಪಡಿಸಿದಂತಾಗುತ್ತದೆ. ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ 37 ರು.ಗಳಿಂದ ರಿಂದ 40 ರು.ಗೆ ಹೆಚ್ಚಳವಾದರೆ ಆ 3 ರು.ಗಳನ್ನು ರೈತರಿಗೆ ನೀಡಲಾಗುವುದು ಎಂದು ಹೇಳಿದರು.

2021-22ನೇ ಸಾಲಿನಲ್ಲಿ ಕೆಎಂಎಫ್‌ನ 5 ಪಶು ಆಹಾರ ಘಟಕಗಳಿಂದ ಒಟ್ಟು 7.28 ಲಕ್ಷ ಮೆಟ್ರಿಕ್‌ ಟನ್‌ ಪಶು ಆಹಾರ ಉತ್ಪಾದಿಸಿ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದ್ದು, ಒಟ್ಟಾರೆ ಅಂದಾಜು 1,017 ಕೋಟಿ ರು. ವಹಿವಾಟು ನಡೆಯುವ ನಿರೀಕ್ಷೆಯಿದೆ.
 

click me!