ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ... ವೀಡಿಯೋ ಭಾರಿ ವೈರಲ್

Published : Sep 21, 2025, 09:22 PM IST
Chips seller dance

ಸಾರಾಂಶ

ಮೈಸೂರಿನ ಯುವ ದಸರಾ ವೇದಿಕೆ ಹೊರಗೆ, ಚಿಪ್ಸ್ ಮಾರುವ ಯುವಕ ಮತ್ತು ಕಾಲೇಜು ಯುವತಿಯೊಬ್ಬರು 'ಹಂಗೆ ಕುಣಿರೋ ಹಿಂಗೆ ಕುಣಿರೋ' ಹಾಡಿಗೆ ಹಾಕಿದ ಬಿಂದಾಸ್ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅನಿರೀಕ್ಷಿತ ನೃತ್ಯ ಜುಗಲ್ಬಂದಿಯ ವೀಡಿಯೋಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

ದಸರಾ ಬಂತೆಂದರೆ ಸಾಂಸ್ಕೃತಿಕ ನಗರಿ ಮೈಸೂರು ಜಗಮಗಿಸುತ್ತದೆ. ಅದು ಕೇವಲ ಲೈಟಿಂಗ್ಸ್‌ನಿಂದ ಮಾತ್ರವಲ್ಲ, ದಸರಾ ಅಂಗವಾಗಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಪರ್ಧೆಗಳು ಹಾಗೂ ಕಾಡಿನಿಂದ ನಾಡಿಗೆ ದಸರಾಗಾಗಿ ಬಂದ ಆನೆಗಳಿಂದ ಜೊತೆ ದಸರಾಗಾಗಿ ಎಲ್ಲೆಲ್ಲಿಂದಲೂ ಬಂದು ದಸರಾದಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಂದ ದಸರಾ ಅಂಗವಾಗಿ ಹಲವು ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತವೆ. ಆದರಲ್ಲೂ ಕಾಲೇಜು ಯುವಕ ಯುವತಿಯರು ಹಾಗೂ ಯುವ ಸಮುದಾಯವನ್ನು ಹೆಚ್ಚಾಗಿ ಸೆಳೆಯುವ ದಸರಾದ ಒಂದು ಮುಖ್ಯ ಭಾಗವೆಂದರೆ ಯುವ ದಸರಾ...

ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರುವ ಹುಡುಗ & ಕಾಲೇಜ್ ಹುಡ್ಗಿ…

ಹೌದು ಯುವ ದಸರಾದಲ್ಲಿ ನಡೆಯುವ ಡಾನ್ಸ್‌ ಹಾಡು ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಯುವ ಸಮೂಹ ಮೈಸೂರಿಗೆ ಬಂದು ಸೇರುತ್ತದೆ. ಸ್ಟೇಜ್ ಮೇಲೆ ಕಲಾವಿದರು ಹಾಡುಗಾರಿಕೆ ಡಾನ್ಸ್ ಮಾಡಿದರೆ, ವೇದಿಕೆಯ ಹೊರಗೂ ಯುವ ಸಮೂಹ ಅಲ್ಲಿ ಮೂಡಿ ಬರುವ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಅದೇ ರೀತಿ ಈ ಬಾರಿ ದಸರಾದಲ್ಲಿ ಚಿಪ್ಸ್ ಮಾರುವ ಯುವಕ ಹಾಗೂ ಮೈಸೂರಿನ ಹುಡುಗಿಯೊಬ್ಬರ ಬಿಂದಾಸ್ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮೊನ್ನೆ ಮೊನ್ನೆಯಷ್ಟೇ ಮೈಸೂರಿನ ಹುಡುಗಿ ನಿತ್ಯಾ ಹೂವಿನ ಬಾಣದಂತೆ ಹಾಡನ್ನು ತನಗನಿಸಿದಂತೆ ವಕ್ರ ವಕ್ರವಾಗಿ ಹಾಡಿ ವೈರಲ್ ಆಗಿದ್ದಳು, ಸುಸ್ತಾದ ತನ್ನ ಗೆಳತಿಯರ ನಗಿಸಲು ಈ ರೀತಿ ಹಾಡಿದ ಹಾಡಿನಿಂದ ನಿತ್ಯಾ ರಾತ್ರಿ ಬೆಳಗಾಗುವುದರೊಳಗೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದು, ಕೆಲ ದಿನಗಳಲ್ಲೇ ಕೇವಲ ಸಾವಿರದಷ್ಟಿದ್ದ ಫಾಲೋವರ್ಸ್ ಸಂಖ್ಯೆ 50 ಸಾವಿರ ದಾಟಿತ್ತು...

ಹಂಗೆ ಕುಣಿರೋ ಹಿಂಗೆ ಕುಣಿರೋ ಹಾಡಿಗೆ ಬಿಂದಾಸ್ ಡಾನ್ಸ್…

ಈಗ ಮೈಸೂರಿನ ಮತ್ತೊಂದು ಪ್ರತಿಭೆಯ ಸರದಿ, ಹೌದು ಯುವ ದಸರಾದಲ್ಲಿ ಚಿಪ್ಸ್ ಮಾರುತ್ತಲೇ ಯುವಕನೋರ್ವ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾನೆ. ಒಬ್ಬಳು ಹುಡುಗಿ ಈ ಚಿಪ್ಸ್ ಮಾರೋ ಹುಡುಗನ ಡಾನ್ಸ್‌ಗೆ ಸಾಥ್ ಕೊಟ್ಟಿದ್ದು, ಇವರಿಬ್ಬರ ಡಾನ್ಸ್ ವೀಡಿಯೋ ಭಾರಿ ವೈರಲ್ ಆಗಿದೆ. ಶಿವರಾಜ್‌ ಕುಮಾರ್ ನಟನೆಯ ಜೋಗಿ ಸಿನಿಮಾದ ಏಳೋ ಮಲೆ ಮ್ಯಾಲೇರಿ ಬಂದ ನಮ್ಮ ಮಾದೇವ, ಹಂಗೆ ಕುಣಿರೋ ಹಿಂಗೆ ಕುಣಿರೋ ಹಾಡಿಗೆ ಚಿಪ್ಸ್ ಮಾರೋ ಹುಡುಗ ಹಾಗೂ ಮೈಸೂರು ಹುಡ್ಗಿ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಕೈಯಲ್ಲಿ ಚಿಪ್ಸ್ ಹಿಡಿದುಕೊಂಡ ಆ ಹುಡುಗ ಕುಣಿತಿದ್ದರೆ, ಅಲ್ಲಿದ್ದ ಹುಡುಗಿ ಆತನ ನೃತ್ಯಕ್ಕೆ ಸಾಥ್ ಕೊಡುವ ಮೂಲಕ ಇಬ್ಬರು ಬಿಂದಾಸ್ ಆಗಿ ನೃತ್ಯ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್..

ಇದರ ಜೊತೆಗೆ ವಿಷ್ಣುವರ್ಧನ್ ನಟನೆಯ ಸಿಂಹಾದ್ರಿಯ ಸಿಂಹ ಹಾಡಿಗೂ ಅವರು ಚೆನ್ನಾಗಿ ನೃತ್ಯ ಮಾಡಿದ್ದು, ಎರಡು ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಹಾಗೆಯೇ ಕೈಯಲ್ಲಿ ಚಿಪ್ಸ್ ಇರುವ ಚೀಲ ಹಿಡಿದುಕೊಂಡು ಆ ಹುಡುಗ ಪೋರ ನಾನು ಪೋರಿ ನೀನು ಹಾಡಿಗೂ ಡಾನ್ಸ್ ಮಾಡಿದ್ದು, ಹತ್ತಿರದಲ್ಲಿರುವ ಹುಡುಗಿಯರು ನಾಚಿ ನಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ವೀಡಿಯೋ ನೋಡಿದ ಅನೇಕರು ಚಿಪ್ಸ್ ಮಾರುವ ಹುಡುಗನಿಗೂ ಆತನ ಜೊತೆ ಡಾನ್ಸ್ ಮಾಡಿದ ಹುಡುಗಿಗೂ ಮೆಚ್ಚುಗೆ, ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಚಿಪ್ಸ್ ಪಾಕೆಟ್ ಮಾರೋ ನಮ್ಮ ಹುಡುಗನನ್ನ ಸಂಭ್ರಮದಲ್ಲಿ ತೇಲಾಡೋ ಹಾಗೆ ಮಾಡಿದ ಅಕ್ಕ ಅವರಿಗೆ ಥ್ಯಾಂಕ್ಸ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಎಣ್ಣೆಯಾಟಕ್ಕೆ ಬಿಲ್‌ ಬೋರ್ಡ್ ಏರಿದ ಕುಡುಕ: ಸಾಯಲೆತ್ನಿಸಿದವನ ರಕ್ಷಿಸಿ ಸರಿಯಾಗಿ ತದುಕಿದ ಪೊಲೀಸರು

ಇದನ್ನೂ ಓದಿ: ಮುದ್ದು ಮಾಡೋ ಕೆಲಸ : ಸಂಬಳ 30 ಲಕ್ಷ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!