
ಶಿವಮೊಗ್ಗ (ಏ.2): ಮಾರಿಕಾಂಬ ಹಾಗೂ ಓಂ ಶಕ್ತಿ ಸದಸ್ಯರನ್ನು ಅಯೋಧ್ಯೆ ಹಾಗೂ ಕಾಶಿಗೆ ನಿಮ್ಮನ್ನು ಕರೆದುಕೊಂಡು ಹೋಗ್ತೇನೆ. ಪೂರ್ಣ ಖರ್ಚನ್ನು ನಾನೊಬ್ಬನೇ ಹಾಕಿಕೊಂಡರೆ ಅದರ ಪುಣ್ಯ ನಿಮಗೆ ಸಿಗಲ್ಲ. ಅದಕ್ಕಾಗಿ ನೀವು ಸ್ವಲ್ಪ ಖರ್ಚು ಭರಿಸಿ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ತಿಳಿಸಿದರು.
ಇಂದು ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಇಂದು ಮುಂಜಾನೆ ಅಮಿತ್ ಶಾ ಫೋನ್ ಮಾಡಿದ್ದರು. ಯಾರೋ ಬಲವಂತವಾಗಿ ಅಮಿತ್ ಶಾ ಅವರಿಂದ ಪೋನ್ ಮಾಡಿಸಿದ್ದರು ಅನಿಸುತ್ತದೆ. ಅಮಿತ್ ಶಾ ಅವರು ನಾಳೆ ದೆಹಲಿಗೆ ಬರಲು ಹೇಳಿದ್ದಾರೆ. ಶಾ ಅವರಿಗೂ ಚುನಾವಣೆ ಸ್ಪರ್ಧೆ ಮಾಡ್ತೇನೆ ಅಂತಾ ಹೇಳಿ ಬರುತ್ತೇನೆ. ನಾನು ನಿರ್ಧಾರ ಮಾಡಿಯಾಗಿದೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದರು.
Amit Shah calls Eshwarappa: ಬಂಡಾಯ ಸ್ಪರ್ಧೆ ಬೇಡ, ಬೇಡಿಕೆ ಈಡೇರಿಸೋಣ ಎಂದಿರುವ ಅಮಿತ್ ಶಾ : ಈಶ್ವರಪ್ಪ
ಹಲವರು ಚುನಾವಣೆಗೆ ಸ್ಪರ್ಧೆ ಮಾಡಬೇಡಿ ಅಂದ್ರು. ನಾನು ಏಕೆ ಮಾಡಬಾರದು ಮಾಡಿಯೇ ಮಾಡ್ತೀನಿ ಅಂತಾ ಹೇಳಿದ್ದೇನೆ. ನನ್ನ ಮೇಲೆ ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ನೀವು ಆರೋಪ ಮುಕ್ತರಾದ ಬಳಿಕ ಮಂತ್ರಿ ಮಾಡ್ತೀನಿ ಅಂದ್ರು. ಆರೋಪ ಮುಕ್ತವಾದರೂ ಮಂತ್ರಿ ಮಾಡಲಿಲ್ಲ. ವಿಧಾನಸಭೆ ಚುನಾವಣೆಗೆ ಟಿಕೇಟ್ ಇಲ್ಲ ಅಂದ್ರು. ಆಗಲೂ ಮರು ಮಾತನಾಡದೇ ಸುಮ್ಮನಾದೆ. ಇನ್ನೊಂದ್ಕಡೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋದ್ರು ಈಗ ಮತ್ತೆ ಬಿಜೆಪಿಗೆ ಬಂದಿದ್ದಾರೆ ಅಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನೇನು ತಪ್ಪು ಮಾಡಿದ್ದೆ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಕರೆ ಮಾಡಿ ದೆಹಲಿಗೆ ಬುಲಾವ್ ಮಾಡಿದ ಕೇಂದ್ರ ಸಚಿವ ಅಮಿತ್ ಶಾ
ನರೇಂದ್ರ ಮೋದಿ ಅವರು ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಆದರೆ ಅದೇ ಪರಿಸ್ಥಿತಿ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಬಂದಿದೆ. ಬಿಜೆಪಿ ಒಂದು ಕುಟುಂಬದ ಕಪಿ ಮುಷ್ಠಿಯಲ್ಲಿದೆ. ಯಡಿಯೂರಪ್ಪ ಮಗ ಒಬ್ಬ ಎಂಪಿ, ಒಬ್ಬ ಶಾಸಕ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಬದಲು ಪಕ್ಷವನ್ನು ಶುದ್ದೀಕರಣ ಮಾಡಬೇಕು, ಇದು ಎಲ್ಲರ ಆಶಯವಾಗಿದೆ. ಈಗಾಗಿಯೇ ನಾನು ಸ್ಪರ್ಧೆಗೆ ನಿರ್ಧರಿಸಿದೆ. ಎಲ್ಲರೂ ಪೋನ್ ಮಾಡಿ ಬೆಂಬಲಿಸುತ್ತಿದ್ದಾರೆ. ನಾನು ಎಂಪಿ ಆಗಬೇಕು ಎಂಬುದು ಸ್ವಂತಿಕೆಗೆ ಅಲ್ಲ, ನಾನು ಎಲ್ಲಾ ಹಿಂದುಗಳಿಗಾಗಿ ಕುಟುಂಬ ರಾಜಕಾರಣ ಕೊನೆಗಾಣಿಸಲು ಎಂಪಿ ಆಗ್ತಿದ್ದೇನೆ. ಇಡಿ ವಿಧಾನಸಭೆ ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಖರ್ಚಾದಷ್ಟು ಎಲ್ಲಿಯೂ ಖರ್ಚಾಗಿಲ್ಲ. ಅವರ ಎದುರಿಗೆ ನೀವು ಹೇಗೆ ಹಣ ಖರ್ಚು ಮಾಡ್ತೀರಾ ಅಂದ್ರು. ಈ ಬಾರಿ ಹಣ ಗೆಲ್ಲುತ್ತದಾ, ಧರ್ಮ ಗೆಲ್ಲುತ್ತದಾ ನೋಡೋಣ ಎಂದಿದ್ದೇನೆ. ಈ ಬಾರಿ ಧರ್ಮ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ. ಹಿಂದುತ್ವ ಉಳಿಸಬೇಕು ಎಂಬುದು ಎಲ್ಲರಿಗೂ ಗೊತ್ತಾಗಬೇಕು. ನಮ್ಮ ರಾಜ್ಯದ ಸಮಸ್ಯೆ ಕೇಂದ್ರದ ನಾಯಕರಿಗೆ ಗೊತ್ತಾಗಬೇಕು. ವ್ಯಕ್ತಿಗಿಂತ ಪಕ್ಷ, ಧರ್ಮ ಮುಖ್ಯ ಎಂಬುದು ಗೊತ್ತಾಗಬೇಕೆಂದರೆ ಬಿವೈ ರಾಘವೇಂದ್ರ ವಿರುದ್ಧ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ